ಮುಂಬೈ, ಅ.7- ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೆಪೊ ದರವನ್ನು 25 ಮೂಲಾಂಶಗಳಷ್ಟು ಹೆಚ್ಚಿಸಿ ಶೇ.5.5ಕ್ಕೆ ಏರಿಸಿದ ಬೆನ್ನಲ್ಲೇ ಬುಧವಾರ ಆರಂಭಿಕ ವಹಿವಾಟಿನಲ್ಲಿ ಅಮೆರಿಕ ಡಾಲರ್ ಎದುರು ರೂಪಾಯಿ 22 ಪೈಸೆ ಕುಸಿದು 96.57ಕ್ಕೆ ತಲುಪಿತು.
ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ 96.37ಕ್ಕೆ ವಹಿವಾಟು ಆರಂಭಿಸಿ ಬಳಿಕ 96.57ಕ್ಕೆ ಕುಸಿಯಿತು. ಮಂಗಳವಾರ ಡಾಲರ್ ಎದುರು ರೂಪಾಯಿ 96.35ಕ್ಕೆ ವಹಿವಾಟು ಅಂತ್ಯಗೊಳಿಸಿತ್ತು.ಹಣದುಬ್ಬರದ ಆವರ್ತಕ ಅಪಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರ್ಬಿಐ ದರ ಏರಿಕೆ ಮಾಡಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಏತನ್ಮಧ್ಯೆ, ಡಾಲರ್ ಸೂಚ್ಯಂಕ ಶೇ.0.25ರಷ್ಟು ಏರಿಕೆಯಾಗಿ 102.09ಕ್ಕೆ ತಲುಪಿತ್ತು. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲ ಬೆಲೆ ಶೇ.0.97ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್ಗೆ 101.56 ಡಾಲರ್ನಷ್ಟಿತ್ತು.ದೇಶೀಯ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್್ಸ149.14 ಅಂಶ ಕುಸಿದು 72,918.67ಕ್ಕೆ, ನಿಫ್ಟಿ 93.45 ಅಂಶ ಇಳಿದು 22,682.65ಕ್ಕೆ ವಹಿವಾಟು ನಡೆಸಿತು.
