Homeರಾಜ್ಯಯಮನಾಗಿ ಬಂದ ಕೆಎಸ್‌‍ಆರ್‌ಟಿಸಿ ಬಸ್‌‍ : ಭೀಕರ ಅಪಘಾತದಲ್ಲಿ ಮೂವರ ದುರ್ಮರಣ

ಯಮನಾಗಿ ಬಂದ ಕೆಎಸ್‌‍ಆರ್‌ಟಿಸಿ ಬಸ್‌‍ : ಭೀಕರ ಅಪಘಾತದಲ್ಲಿ ಮೂವರ ದುರ್ಮರಣ

ಬೆಂಗಳೂರು,ಅ.10-ಕೆಎಸ್‌‍ಆರ್‌ಟಿಸಿ ಬಸ್‌‍ವೊಂದು ಬೈಕ್‌ ಮತ್ತು ರಸ್ತೆ ಬದಿ ನಿಂತಿದ್ದ ಕೂಲಿ ಕಾರ್ಮಿಕರಿಗೆ ಗುದ್ದಿದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ಹೆಚ್‌.ಡಿ.ಕೋಟೆ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹೆಚ್‌.ಡಿ.ಕೋಟೆ ನಿವಾಸಿ ಎಂ.ಶರೀಫ್‌ (22) ಮೃತಪಟ್ಟ ಬೈಕ್‌ ಸವಾರ. ಯಾದಗಿರಿ ಜಿಲ್ಲೆಯ ಕೂಲಿ ಕಾರ್ಮಿಕರಾದ ಸಚಿನ್‌(22) ಮತ್ತು ಗೋವಿಂದ ರಾಥೋಡ್‌ (23) ಮೃತಪಟ್ಟ ಕೂಲಿ ಕಾರ್ಮಿಕರು.ನಿನ್ನೆ ಬೆಳಗ್ಗೆ 9.15 ರ ಸಮಯ ದಲ್ಲಿ ಕೆಎಸ್‌‍ಆರ್‌ಟಿಸಿ ಬಸ್‌‍ವೊಂದು ಹೆಚ್‌.ಡಿ.ಕೋಟೆಯಿಂದ ಮೈಸೂರಿಗೆ ಬರುತ್ತಿತ್ತು.

ಶರೀಫ್‌ ಅವರು ಬೈಕ್‌ನಲ್ಲಿ ಮೈಸೂರು ಕಡೆಯಿಂದ ಹೆಚ್‌.ಡಿ.ಕೋಟೆಗೆ ಹೋಗುತ್ತಿದ್ದರು. ಪುರ ಎಂಬ ಬಳಿ ಬೈಕ್‌ಗೆ ಬಸ್‌‍ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಇಬ್ಬರು ಕೂಲಿ ಕಾರ್ಮಿಕರಿಗೆ ಗುದ್ದಿದೆ.ಪರಿಣಾಮ ಬೈಕ್‌ ಸವಾರ, ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಹೆಚ್‌.ಡಿ.ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES
spot_img

Latest News