Homeರಾಷ್ಟ್ರೀಯಸಿಜೆಐ ಭೇಟಿಗೆ ಯತ್ನಿಸಿದ ಕಾಂಗ್ರೆಸ್‌‍ ವಿರುದ್ಧ ಬಿಜೆಪಿ ಟೀಕೆ

ಸಿಜೆಐ ಭೇಟಿಗೆ ಯತ್ನಿಸಿದ ಕಾಂಗ್ರೆಸ್‌‍ ವಿರುದ್ಧ ಬಿಜೆಪಿ ಟೀಕೆ

ನವದೆಹಲಿ, ಅ. 12 (ಪಿಟಿಐ)- ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿಯಾಗಲು ರಾಹುಲ್‌ ಗಾಂಧಿ ಕೋರಿರುವುದರ ಕುರಿತು ಬಿಜೆಪಿ ಕಾಂಗ್ರೆಸ್‌‍ ಅನ್ನು ಟೀಕಿಸಿದ್ದು, ನ್ಯಾಯಾಂಗವು ದೈನಂದಿನ ರಾಜಕೀಯ ಜಗಳಗಳಿಂದ ದೂರವಿರಬೇಕು ಎಂದು ಹೇಳಿದೆ. ಅಧಿಕಾರಗಳ ವಿಭಜನೆಯಿಂದ ಹಿಡಿದು ಅಧಿಕಾರ ಕ್ಕಾಗಿನ ಹತಾಶೆಯವರೆಗೆ, ರಾಹುಲ್‌ ಗಾಂಧಿ ಅವರು ಸಾಂವಿಧಾನಿಕ ಕಾನೂನನ್ನು ರಾಜಕೀಯ ಪ್ರದರ್ಶನದೊಂದಿಗೆ (ಥಿಯೇಟರ್‌) ಗೊಂದಲಕ್ಕೀಡುಮಾಡಿಕೊಂಡಿದ್ದಾರೆ! ಗಾಂಧಿ ಮತ್ತು ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಲು ಸಿಜೆಐ ನಿರಾಕರಿಸಿರುವುದು ಒಂದು ಪ್ರಮುಖ ಸಂದೇಶವನ್ನು ರವಾನಿಸುತ್ತದೆ ಎಂದು ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ ಎಕ್ಸ್ ಮಾಡಿದ್ದಾರೆ.

ನ್ಯಾಯಾಂಗವು ದೈನಂದಿನ ರಾಜಕೀಯ ಜಗಳಗಳಿಂದ ದೂರವಿರಬೇಕು. ಸಾಂವಿಧಾನಿಕ ಸಂಸ್ಥೆಗಳನ್ನು ರಾಜಕೀಯ ಪ್ರದರ್ಶನಗಳಿಗೆ ಎಳೆತರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಕಾಂಗ್ರೆಸ್‌‍ ನಾಯಕರನ್ನು ಮತ್ತಷ್ಟು ಟೀಕಿಸಿದ ಭಾಟಿಯಾ, ಸಂವಿಧಾನದ ಪ್ರತಿಯನ್ನು ಕೇವಲ ಕೈಯಲ್ಲಿ ಹಿಡಿದುಕೊಂಡಿರುವುದರಿಂದ ಅದನ್ನು ಅರ್ಥಮಾಡಿಕೊಂಡಿದ್ದೀರಿ ಎಂದರ್ಥವಲ್ಲ ಎಂದು ಹೇಳಿದರು.

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ವಿರುದ್ಧದ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುತ್ತಿರುವ ವಿರೋಧ ಪಕ್ಷಗಳು ಇಂದು ಸುಪ್ರೀಂ ಕೋರ್ಟ್‌ಗೆ ಮೆರವಣಿಗೆ ನಡೆಸಲಿವೆ. ಈ ವೇಳೆ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಮತ ಕಳ್ಳತನದ ವಿಷಯವನ್ನು ಪ್ರಸ್ತಾಪಿಸಲು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌ ಅವರನ್ನು ಭೇಟಿಯಾಗಲು ಕೋರಿದ್ದಾರೆ.

ಆದಾಗ್ಯೂ, ಇದೇ ರೀತಿಯ ವಿಷಯಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿವೆ ಎಂದು ಹೇಳುವ ಮೂಲಕ, ಮತ ಕಳ್ಳತನದ ಆರೋಪಗಳ ಕುರಿತು ಗಾಂಧಿಯವರನ್ನು ಭೇಟಿಯಾಗಲು ಸಿಜೆಐ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

RELATED ARTICLES
spot_img

Latest News