Homeಬೆಂಗಳೂರುಬೆಂಗಳೂರಿನಲ್ಲಿ ನಾಳೆ ವಿದುಷಿ ಕು. ಚೈತನ್ಯ ಕೆ.ಬಿ ಅವರಿಂದ ಭರತನಾಟ್ಯ ಪ್ರದರ್ಶನ

ಬೆಂಗಳೂರಿನಲ್ಲಿ ನಾಳೆ ವಿದುಷಿ ಕು. ಚೈತನ್ಯ ಕೆ.ಬಿ ಅವರಿಂದ ಭರತನಾಟ್ಯ ಪ್ರದರ್ಶನ

ಬೆಂಗಳೂರು,ನ.26- ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ (ICCR), ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯ (NGMA) ಸಹಯೋಗದಲ್ಲಿ ನಾಳೆ (ನವೆಂಬರ್ 27, 2026) ವಿಶೇಷ ಭರತನಾಟ್ಯ ನೃತ್ಯ ಪ್ರದರ್ಶನವನ್ನು ಆಯೋಜಿಸಲಾಗಿದೆ. ವಿದುಷಿ ಕು. ಚೈತನ್ಯ ಕೆ.ಬಿ ಅವರು ಈ ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ. ಇವರು ಗುರು ವಿದುಷಿ ರೇಖಾ ಜಗದೀಶ್ ಅವರ ಶಿಷ್ಯೆಯಾಗಿದ್ದು, ದಿವಂಗತ ಕೆ.ಆರ್.ಕೆ. ಸಿಲೋನ್ ರಾಮಯ್ಯ ಅವರ ಮೊಮ್ಮಗಳು ಹಾಗೂ ಭಾಸ್ಕರ್ ನಾರಾಯಣ ಮತ್ತು ವೇದಾ ಭಾಸ್ಕರ್ ಅವರ ಪುತ್ರಿಯಾಗಿದ್ದಾರೆ. ಭರತನಾಟ್ಯ ಕಲೆಯ ಮೇಲಿನ ಅವರ ಸಮರ್ಪಣೆ ಮತ್ತು ನಿಷ್ಠೆಯನ್ನು ಗೌರವಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ವಿವರಗಳು:
ದಿನಾಂಕ: ಶುಕ್ರವಾರ, ನವೆಂಬರ್ 27, 2026
ಸಮಯ: ಸಂಜೆ 4:30 ರಿಂದ 6:00 ರವರೆಗೆ
ಸ್ಥಳ: ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯ (NGMA), ಮಾಣಿಕ್ಯವೇಲು ಮ್ಯಾನ್ಷನ್, ನಂ. 49, ಅರಮನೆ ರಸ್ತೆ, ವಸಂತನಗರ, ಬೆಂಗಳೂರು – 560001

ಕಲಾಭಿಮಾನಿಗಳು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಯೋಜಕರು ಕೋರಿದ್ದಾರೆ.

RELATED ARTICLES

Latest News