Homeರಾಜ್ಯಬೆಂಗಳೂರಲ್ಲಿ ನಡೆದ ಕಾಕ್ರೋಚ್‌ಗಳ ಪ್ರತಿಭಟನೆಗೆ ನೆರವು ನೀಡಿತಾ ಕಾಂಗ್ರೆಸ್ ಸರ್ಕಾರ..?

ಬೆಂಗಳೂರಲ್ಲಿ ನಡೆದ ಕಾಕ್ರೋಚ್‌ಗಳ ಪ್ರತಿಭಟನೆಗೆ ನೆರವು ನೀಡಿತಾ ಕಾಂಗ್ರೆಸ್ ಸರ್ಕಾರ..?

ಬೆಂಗಳೂರು, ಅ.12- ನಗರದಲ್ಲಿ ನಡೆದ ಕಾಕ್ರೋಚ್‌ ಜನತಾ ಪಾರ್ಟಿ ಪ್ರತಿಭಟನೆಗೆ ರಾಜ್ಯ ಸರ್ಕಾರ ಬ್ಯಾಕ್‌ ಅಪ್‌ ನೀಡಿತೇ ಎಂಬ ಅನುಮಾನ ಕಾಡತೊಡಗಿದೆ.ನಗರದ ಫ್ರೀಡಂ ಪಾರ್ಕ್‌ನಲ್ಲಿ ಕಳೆದ ಬುಧವಾರ ನಡೆದ ಸಿಜೆಪಿ ಪ್ರತಿಭಟನೆಗೆ ಸಂಬಂಧಿಸಿದಂತೆ ಸಭಾಂಗಣದ ಬಾಡಿಗೆ ಪಾವತಿಸಿಲ್ಲ ಎನ್ನುವುದು ಈ ಆರೋಪಗಳಿಗೆ ಪುಷ್ಠಿ ನೀಡುವಂತಿದೆ.

ಎಸ್‌‍ಐಆರ್‌ (ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ ಕೇಂದ್ರ ಮುಖ್ಯ ಚುನಾವಣಾ ಆಯೋಗದ ಆಯುಕ್ತರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಫ್ರೀಡಂ ಪಾರ್ಕ್‌ನಲ್ಲಿ ರುವ ನೂತನ ಸಭಾಂಗಣವನ್ನು ಬಳಸಿಕೊಂಡಿದ್ದರೂ, ನಿಗದಿತ ಶುಲ್ಕ ಪಾವತಿಸಿಲ್ಲ ಎನ್ನಲಾಗಿದೆ.

ಸಭಾಂಗಣ ಬಳಕೆಗೆ 1 ಲಕ್ಷ ಶುಲ್ಕ :
ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಯಾವುದೇ ಸಂಘ-ಸಂಸ್ಥೆಗಳು ಅಥವಾ ರಾಜಕೀಯ ಪಕ್ಷಗಳು ಫ್ರೀಡಂ ಪಾರ್ಕ್‌ನ ಸಭಾಂಗಣವನ್ನು ಕಾರ್ಯಕ್ರಮಗಳಿಗೆ ಬಳಸಿಕೊಂಡರೆ, ಬಾಡಿಗೆ ರೂಪದಲ್ಲಿ ಸುಮಾರು ಒಂದು ಲಕ್ಷ ರೂಪಾಯಿ ಪಾವತಿಸಬೇಕು ಎಂಬ ನಿಯಮವಿದೆ.

ಆದರೆ, ಇತ್ತೀಚೆಗೆ ನಡೆದ ಜಿರಲೆ ಪಾರ್ಟಿ ಮತ್ತು ಜೆನ್‌ ಜೀ ಪ್ರತಿಭಟನೆಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಹಣ ಪಾವತಿಯಾಗಿಲ್ಲ.ಸಾಮಾನ್ಯವಾಗಿ ಕಾರ್ಯಕ್ರಮ ಆಯೋಜಿಸು ವವರು ನಿಗದಿತ ಶುಲ್ಕವನ್ನು ಮುಂಚಿತವಾಗಿಯೇ ನಗರಪಾಲಿಕೆಗೆ ಪಾವತಿಸಬೇಕು. ಆದರೆ, ಪ್ರತಿಭಟನೆ ನಡೆದು ಐದು ದಿನ ಕಳೆದರೂ ಶುಲ್ಕ ಪಾವತಿಯಾಗಿಲ್ಲ ಎನ್ನಲಾಗಿದ್ದು, ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಶುಲ್ಕ ವಸೂಲಿ ಮಾಡದಂತೆ ಮೌಖಿಕ ಸೂಚನೆ?ಈ ಪ್ರಕರಣದಲ್ಲಿ ಮತ್ತೊಂದು ಗಂಭೀರ ಆರೋಪವೂ ಕೇಳಿಬಂದಿದೆ. ಬೆಂಗಳೂರಿನ ಶಾಸಕರೊಬ್ಬರು ಸಭಾಂಗಣ ಬಳಕೆಗೆ ಶುಲ್ಕ ಪಡೆಯದಂತೆ ಅಧಿಕಾರಿಗಳಿಗೆ ಮೌಖಿಕವಾಗಿ ಸೂಚನೆ ನೀಡಿದ್ದಾರೆ ಎನ್ನಲಾ ಗುತ್ತಿದೆ. ಅಲ್ಲದೆ, ಹಣ ವಸೂಲಿ ಮಾಡದಂತೆ ಕೆಲವು ರಾಜಕೀಯ ಮುಖಂಡರು ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ ಎಂದು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಐದು ದಿನ ಕಳೆದರೂ ಹಣ ಪಾವತಿಯಾಗಿಲ್ಲವೇ?
ಜಿಬಿಎ ನಿಯಮಗಳ ಪ್ರಕಾರ, ಸಭಾಂಗಣ ಬಳಕೆಗೆ ಸಂಬಂಧಿಸಿದ ಶುಲ್ಕವನ್ನು ಕಾರ್ಯಕ್ರಮಕ್ಕೂ ಮುನ್ನ ಪಾವತಿಸಬೇಕಿದೆ. ಆದರೆ, ಪ್ರತಿಭಟನೆ ಮುಗಿದು ಐದು ದಿನ ಕಳೆದರೂ ಹಣ ಪಾವತಿಯಾಗಿಲ್ಲ ಎಂದು ಆರೋಪಿಸಲಾಗಿದೆ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಶುಲ್ಕ ಪಾವತಿಯಾಗಿಲ್ಲ ಎಂದು ತಿಳಿಸುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಸಾರ್ವಜನಿಕ ಕಾರ್ಯಕ್ರಮ ಗಳಿಗೆ ಸಭಾಂಗಣ ಒದಗಿಸುವ ವಿಚಾರದಲ್ಲಿ ನಿಯಮಗಳನ್ನು ಸಮಾನವಾಗಿ ಪಾಲಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

ಒಂದು ಪಕ್ಷ ಅಥವಾ ಸಂಘಟನೆಗೆ ಶುಲ್ಕ ವಿನಾಯಿತಿ ನೀಡಲಾಗುತ್ತಿದೆಯೇ? ಅಥವಾ ಎಲ್ಲರಿಗೂ ಒಂದೇ ರೀತಿಯ ನಿಯಮ ಅನ್ವಯವಾ ಗುತ್ತಿದೆಯೇ ಎಂಬುದು ಸ್ಪಷ್ಟವಾಗಬೇಕಿದೆ.ಒಂದು ಪಕ್ಷಕ್ಕೆ ಒಂದು ನ್ಯಾಯ, ಮತ್ತೊಂದಕ್ಕೆ ಮತ್ತೊಂದು ನ್ಯಾಯವೇ?ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಿರಲೆ ಪಾರ್ಟಿಯ ಕಾರ್ಯಕರ್ತರು ಹಾಗೂ ಜೆನ್‌ ಜೀ ಯುವಕರು ಭಾಗವಹಿಸಿದ್ದರು ಎನ್ನಲಾಗಿದೆ. ಸಾರ್ವಜನಿಕ ಬಳಕೆಯ ಸ್ಥಳದಲ್ಲಿ ಇಷ್ಟೊಂದು ದೊಡ್ಡ ಕಾರ್ಯಕ್ರಮ ನಡೆಸಿದರೂ ಶುಲ್ಕ ಪಾವತಿಯಾಗದಿದ್ದರೆ, ಇತರ ಸಂಘ-ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳಿಗೂ ಇದೇ ರೀತಿಯ ವಿನಾಯಿತಿ ನೀಡಲಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.

RELATED ARTICLES
spot_img

Latest News