Homeಬೆಂಗಳೂರುಬೆಂಗಳೂರಲ್ಲಿ ವೃದ್ಧೆ ಕೊಲೆ : ಆರೋಪಿಗಳ ಪತ್ತೆಗೆ 4 ತಂಡ ರಚನೆ

ಬೆಂಗಳೂರಲ್ಲಿ ವೃದ್ಧೆ ಕೊಲೆ : ಆರೋಪಿಗಳ ಪತ್ತೆಗೆ 4 ತಂಡ ರಚನೆ

ಬೆಂಗಳೂರು,ಅ.26- ನಗರದ ಹೊಸಗುಡ್ಡದ ಹಳ್ಳಿ ಟಿ ಕ್ರಾಸ್‌‍ ನಿವಾಸಿ ವೃದ್ಧೆ ವೆಂಕಟಲಕ್ಷ್ಮಮ ಅವರನ್ನು ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಸುಳಿವು ಇನ್ನು ಸಿಕ್ಕಿಲ್ಲ.ಕೊಲೆಯಾದ ವೃದ್ಧೆಯ ಮೈಮೇಲೆ ಆಭರಣಗಳು ಹಾಗೆಯೇ ಇದ್ದವು. ಮನೆಯಲ್ಲಿದ್ದ ಹಣ,ಆಭರಣಗಳು ದೋಚಲಾಗಿದೆ ಎಂದು ಹೇಳುವುದಕ್ಕೆ ಮನೆಯಲ್ಲಿ ಯಾರೂ ಇಲ್ಲ. ಹಾಗಾಗಿ ಈ ಕೊಲೆ ಬಹಳ ನಿಗೂಢವಾಗಿದೆ.

ಆರೋಪಿಗಳ ಬಂಧನಕ್ಕಾಗಿ ಪಶ್ಚಿಮ ವಿಭಾಗದ ಡಿಸಿಪಿ ಯತೀಶ್‌ ಅವರು ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಆಸ್ತಿ, ಹಣಕಾಸು ವಿವಿಧ ದೃಷ್ಟಿಕೋನಗಳಲ್ಲಿ ಈ ತಂಡಗಳು ಈಗಾಗಲೇ ತನಿಖೆಯನ್ನು ಆರಂಭಿಸಿವೆ. ಒಂದು ತಂಡ ಹೊರರಾಜ್ಯಕ್ಕೂ ತೆರಳಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಶನಿವಾರ ಮನೆಯಲ್ಲಿದ್ದ ವೆಂಕಟ ಲಕ್ಷ್ಮಮ(70) ಅವರ ತಲೆಗೆ ಅರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಶುಕ್ರವಾರ ಪಕ್ಕದ ಮನೆಯವರು ನೋಡಿ ವಿಷಯವನ್ನು ಬ್ಯಾಟರಾಯನಪುರ ಪೊಲೀಸರಿಗೆ ತಿಳಿಸಿದ್ದಾರೆ.

ಭೀಕರವಾಗಿ ಹತ್ಯೆಯಾಗಿರುವ ವೃದ್ಧೆ ವೆಂಟಕಲಕ್ಷ್ಮಮ ನಾಲ್ಕು ಮನೆಗಳನ್ನು ಹೊಂದಿದ್ದರು. ಒಂದು ಮನೆಯಲ್ಲಿ ಅವರ ವಾಸಿಸುತ್ತಿದ್ದರು. ಇನ್ನೊಂದು ಮನೆಯಲ್ಲಿ ಯುವಕನೊಬ್ಬ ಬಾಡಿಗೆಗೆ ಇದ್ದ. ಇನ್ನು ಎರಡು ಮನೆಗಳು ಖಾಲಿ ಇದ್ದವು.

ಪತಿ ಮತ್ತು ಮಗಳು ಸಾವನ್ನಪ್ಪಿದ್ದರಿಂದ ಇವರು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ದುಷ್ಕರ್ಮಿಗಳು ಹೊಂಚು ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪೊಲೀಸರು ಆ ರಸ್ತೆಯಲ್ಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಅಕ್ಕಪಕ್ಕದ ನಿವಾಸಿಗಳಿಂದ ಮಾಹಿತಿಯನ್ನು ಪಡೆದುಕೊಳ್ಳು ತ್ತಿದ್ದಾರೆ.

RELATED ARTICLES

Latest News