Homeರಾಜ್ಯಸೌಜನ್ಯ ಪ್ರಕರಣ : ತನಿಖಾಧಿಕಾರಿಗೆ ಎಸ್‌‍ಐಟಿ ಬುಲಾವ್‌

ಸೌಜನ್ಯ ಪ್ರಕರಣ : ತನಿಖಾಧಿಕಾರಿಗೆ ಎಸ್‌‍ಐಟಿ ಬುಲಾವ್‌

ಬೆಂಗಳೂರು,ಅ.26- ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, 2012 ರಲ್ಲಿ ಪ್ರಕರಣದ ತನಿಖಾಧಿಕಾರಿಯಾಗಿದ್ದ ಯೋಗೇಶ್‌ ಅವರಿಗೆ ಎಸ್‌‍ಐಟಿ ಬುಲಾವ್‌ ನೀಡಿದೆ.

ಯೋಗೇಶ್‌ ವಿರುದ್ಧ ಸೌಜನ್ಯ ಪೋಷಕರು ಗುರುತರ ಆರೋಪ ಹೊರಿಸಿದ್ದರು. ತನಿಖೆಯ ಪ್ರಾಥಮಿಕ ಹಂತದಲ್ಲೇ ಸಾಕ್ಷಿ ನಾಶದ ಆರೋಪ ಇವರ ವಿರುದ್ಧ ಕೇಳಿ ಬಂದಿತ್ತು.
ಹಾಗಾಗಿ ಯೋಗೇಶ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌‍ಐಟಿ ನೋಟೀಸ್‌‍ ನೀಡಿದ್ದು, ಈ ವಾರದೊಳಗೆ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸಂಜಯ್‌ಕುಮಾರ್‌ ಅವರಿದ್ದ ಪೀಠವು ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿತ್ತು. ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಯಾವುದೇ ಅಧಿಕಾರಿಯನ್ನು ಹೊಸ ತಂಡದಲ್ಲಿ ಸೇರಿಸಿಕೊಳ್ಳಬಾರದು ಎಂದು ಕಟ್ಟುನಿಟ್ಟಿನ ಸೂಚನೆ ಕೂಡಾ ನ್ಯಾಯಾಲಯ ನೀಡಿತ್ತು. ಮುಂದಿನ 3 ತಿಂಗಳ ಒಳಗಾಗಿ ಸಮಗ್ರ ತನಿಖೆ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸುವಂತೆ ಗಡುವು ವಿಧಿಸಿದೆ.

RELATED ARTICLES

Latest News