ಬೆಂಗಳೂರು, ಏ.10-ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 247 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು 29 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರೆ, ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಅತಿ ಕಡಿಮೆ 9 ಅಭ್ಯರ್ಥಿಗಳಿದ್ದಾರೆ.
ಮೊದಲ ಹಂತದ 14 ಕ್ಷೇತ್ರಗಳಲ್ಲಿ ಒಟ್ಟು 226 ಪುರುಷ ಹಾಗೂ 21 ಮಂದಿ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ನಾಮಪತ್ರ ಪಡೆಯಲು ಕಡೆಯ ದಿನವಾಗಿದ್ದ ಏ.8ರಂದು 52 ಅಭ್ಯರ್ಥಿಗಳು ಉಮೇದುವಾರಿಕೆ ಹಿಂಪಡೆದಿದ್ದರು.
ಬಿಜೆಪಿಯಿಂದ 11, ಜೆಡಿಎಸ್‍ನಿಂದ 3 ಹಾಗೂ ಕಾಂಗ್ರೆಸ್‍ನಿಂದ 14 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಈ ಬಾರಿಯೂ ಪಕ್ಷೇತರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಕ್ಷೇತ್ರವಾರು ಅಭ್ಯರ್ಥಿಗಳ ವಿವರ ಈ ಕೆಳಕಂಡಂತಿದೆ.
ಉಡುಪಿ-ಚಿಕ್ಕಮಗಳೂರು- 10, ಹಾಸನ-15, ದಕ್ಷಿಣ ಕನ್ನಡ-9, ಚಿತ್ರದುರ್ಗ- 20, ತುಮಕೂರು- 18, ಮಂಡ್ಯ-14, ಮೈಸೂರು- 18, ಚಾಮರಾಜನಗರ- 14, ಬೆಂಗಳೂರು ಗ್ರಾಮಾಂತರ- 15, ಬೆಂಗಳೂರು ಉತ್ತರ- 21, ಬೆಂಗಳೂರು ಕೇಂದ್ರ- 24, ಬೆಂಗಳೂರು ದಕ್ಷಿಣ- 22, ಚಿಕ್ಕಬಳ್ಳಾಪುರ- 29, ಕೋಲಾರ-18 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.