ಕೊಪ್ಪಳ, ಏಪ್ರಿಲ್. 10- ಸಂಸ್ಕಾರಿಕ ಕಲಹದಿಂದ ಉಂಟಾದ ವೈಮನಸ್ಯತಾರಕ್ಕಕ್ಕೇರಿ ಮಲಗಿದ್ದ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ನಂತರ ಪತಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳ ತಾಲೂಕಿನ ಬುಡಶೆಡ್ನಾಳ್ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ. ಲಕ್ಷ್ಮವ್ವಾ ವಾಲಿಕಾರ್(36) ಕೊಲೆದ ಮಹಿಳೆಯಾಗಿದ್ದು . ನಿಂಗಪ್ಪ ವಾಲಿಕಾರ್ (40) ಆತ್ಮಹತ್ಯೆ ಮಾಡಿಕೊಂಡ ಪತಿ
ಕುಡಿತದ ಚಟಕ್ಕೆ ದಾಸನಾಗಿದ್ದ ನಿಂಗಪ್ಪ ಅನೇಕ ಕಡೆ ಸಾಲ ಮಾಡಿದ್ದನು ಈ ಬಗ್ಗೆ ಪ್ರತಿ ದಿನ ಪತ್ನಿ ಜೊತೆ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಯುಗಾದಿ ಹಬ್ಬ ಮುಗಿ ರಾತ್ರಿ ಮಲಗಿದ್ದ ಪತ್ನಿ ಲಕ್ಷ್ಮವ್ವಾ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ ನಂತರ ಅಲ್ಲಿಂದ ಪರಾರಿಯಾಗಿ ಗ್ರಾಮದ ಹೊರವಲಯದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಂದು ಬೆಳಿಗ್ಗೆ ಪ್ರಕರಣ ಬೆಳಕಿಕೆ ಬಂದು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.ಕೊಪ್ಪಳ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರರರಣ ದಾಖಲಿಸಿಕೊಂಡು ಮುಂದಿನ ತನಿಕೆ ಕೈಗೊಂಡಿದ್ದಾರೆ.