ಬೆಂಗಳೂರು,ಅ.10- ನಗರ ಪೊಲೀಸರು ವಿವಿಧ ಆನ್‍ಲೈನ್ ಸೈಬರ್ ವಂಚನೆ ಪ್ರಕರಣಗಳ ತನಿಖೆ ಕೈಗೊಂಡು 470 ಕೋಟಿ ರೂ. ಸೈಬರ್ ವಂಚನೆ ಮಾಡಿರುವುದು ಪತ್ತೆ ಹಚ್ಚಿ ಆರೋಪಿಗಳ ಖಾತೆಯಲ್ಲಿದ್ದ 201 ಕೋಟಿ ರೂ. ಜಪ್ತಿ ಮಾಡಿ, ಪಿರ್ಯಾದುದಾರರಿಗೆ 27.68 ಕೋಟಿ ಹಣವನ್ನು ಹಿಂದಿರುಗಿಸಿದ್ದಾರೆ.
ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ, ಪ್ರಸಕ್ತ ಸಾಲಿನ ಜನವರಿಯಿಂದ ಸೆಪ್ಟಂಬರ್ ತಿಂಗಳ ಅಂತ್ಯದವರಿಗೆ ಒಟು ್ಟ 18 ವಿವಿಧ ಶೀರ್ಷಿಕೆಗಳ ಅಡಿಯಲ್ಲಿ 12,615 ಆನ್‍ಲೈನ್ ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ.
ಈ ಬಗ್ಗೆ ತನಿಖಾಧಿಕಾರಿಗಳು ತನಿಖೆ ಕೈಗೊಂಡಾಗ ದಾಖಲಾದ ಸೈಬರ್ ವಂಚನೆ ಪ್ರಕರಣಗಳಲ್ಲಿ 470,53,92,258 ರೂ. ಮೊತ್ತದ ವಂಚನೆಯಾಗಿರುವುದು ಕಂಡು ಬಂದಿದ್ದು ಈ ಪೈಕಿ 201,83,28,534 ರೂ. ಮೊತ್ತದ ಹಣವನ್ನು ವಿವಿಧ ಬ್ಯಾಂಕ್‍ಗಳಲ್ಲಿ ಪ್ರೀಜ್ ಮಾಡಿರುತ್ತಾರೆ.
ಅಲ್ಲದೆ 28,40,38,422 ರೂ. ಮೊತ್ತದ ಹಣªನ್ನು ವಶಪಡಿಸಿಕೊಂಡಿದ್ದು ಈ ಹಣದ ಪೈಕಿ 27,68,72,273 ರೂ. ಮೊತ್ತದ ಹಣವನ್ನು ಪಿರ್ಯಾದುದಾರರಿಗೆ ಹಿಂದಿರುಗಿಸಲಾಗಿದೆ. ಆನ್‍ಲೈನ್ ಉದ್ಯೋಗ ವಂಚನೆ 3346 ಪ್ರಕರಣಗಳಲ್ಲಿ 204,75,73,321ರೂ. ಕಳೆದುಕೊಂಡಿದ್ದು, 73,71,52,567 ರೂ. ಪ್ರೀಜ್ ಮಾಡಿ 7,34,90,991 ರೂ. ವಶಕ್ಕೆ ಪಡೆದು ದೂರುದಾರರಿಗೆ 7,67,98,572 ರೂ. ಹಿಂದಿರುಗಿಸಲಾಗಿದೆ.
ಡೆಬಿಟ್-ಕ್ರೆಡಿಟ್ ಕಾರ್ಡ್ ವಂಚನೆ 3102 ಪ್ರಕರಣಗಳಲ್ಲಿ 60,86,29,258 ರೂ. ಕಳೆದುಕೊಂಡಿದ್ದು, 25,15,38,168 ರೂ. ಪ್ರೀಜ್ ಮಾಡಿ 3,38,25,252 ರೂ. ವಶಕ್ಕೆ ಪಡೆದು ದೂರುದಾರರಿಗೆ 3,55,70,898 ರೂ. ಹಿಂದಿರುಗಿಸಲಾಗಿದೆ.
ಪುರಾತನ ದೇವರ ವಿಗ್ರಹ ಕದ್ದಿದ್ದ ಕಳ್ಳನ ಬಂಧನ
ಇತರೆ ವಿವಿಧ 2351 ಪ್ರಕರಣಗಳಲ್ಲಿ 54,79,28,349 ರೂ. ಕಳೆದುಕೊಂಡಿದ್ದು,10,32,26,364 ರೂ. ಪ್ರೀಜ್ ಮಾಡಿ 1,65,22,357 ರೂ. ವಶಕ್ಕೆ ಪಡೆದು ದೂರುದಾರರಿಗೆ 2,18,58,514 ರೂ. ಹಿಂದಿರುಗಿಸಲಾಗಿದೆ.
ವ್ಯಾಪಾರ ಅವಕಾಶ ವಂಚನೆ 1133 ಪ್ರಕರಣಗಳಲ್ಲಿ 60,53,87,250 ರೂ. ಕಳೆದುಕೊಂಡಿದ್ದು, 9,69,11,726 ರೂ. ಪ್ರೀಜ್ ಮಾಡಿ 13,37,08,306 ರೂ. ವಶಕ್ಕೆ ಪಡೆದು ದೂರುದಾರರಿಗೆ 11,82,08,075 ರೂ. ಹಿಂದಿರುಗಿಸಲಾಗಿದೆ.
ಉಡುಗೊರೆಗಳು, ಐ ಫೋನ್, ಓಎಲ್‍ಎಕ್ಸ್ , ಸಾಲ 1132 ಪ್ರಕರಣಗಳಲ್ಲಿ 22,40,84,839 ರೂ. ಕಳೆದುಕೊಂಡಿದ್ದು, 6,39,09,912 ರೂ. ಪ್ರೀಜ್ ಮಾಡಿ 1,09,71,379 ರೂ. ವಶಕ್ಕೆ ಪಡೆದು ದೂರುದಾರರಿಗೆ 97,37,526 ರೂ. ಹಿಂದಿರುಗಿಸಲಾಗಿದೆ.
ಸಾಮಾಜಿಕ ಮಾಧ್ಯಮ 511 ಪ್ರಕರಣಗಳಲ್ಲಿ 3,12,69,804 ರೂ. ಕಳೆದುಕೊಂಡಿದ್ದು, 2,55,25,368 ರೂ. ಪ್ರೀಜ್ ಮಾಡಿ, 18,29,915 ರೂ. ವಶಕ್ಕೆ ಪಡೆದು ದೂರುದಾರರಿಗೆ 20,23,540 ರೂ. ಹಿಂದಿರುಗಿಸಲಾಗಿದೆ.
ಸಾಲದ ಅಪ್ಲಿಕೇಶನ್ 277 ಪ್ರಕರಣಗಳಲ್ಲಿ , 3,40,56,371 ರೂ. ಕಳೆದುಕೊಂಡಿದ್ದು, 52,22,828 ರೂ. ಪ್ರೀಜ್ ಮಾಡಿ, 1,02,878 ರೂ. ವಶಕ್ಕೆ ಪಡೆದು ದೂರುದಾರರಿಗೆ 3,00,878 ರೂ. ಹಿಂದಿರುಗಿಸಲಾಗಿದೆ.
ಪಾಕ್ – ಭಾರತ ಪಂದ್ಯಕ್ಕೆ ರಾಸಾಯನಿಕ ದಾಳಿ ಬೆದರಿಕೆ
ಬಿಟ್ ಕಾಯಿನ್ 195 ಪ್ರಕರಣಗಳಲ್ಲಿ 20,24,22,100 ರೂ. ಕಳೆದುಕೊಂಡಿದ್ದು, 4,34,63,227 ರೂ. ಪ್ರೀಜ್ ಮಾಡಿ, 72,52,317 ರೂ. ವಶಕ್ಕೆ ಪಡೆದು ದೂರುದಾರರಿಗೆ 46,52,317 ರೂ. ಹಿಂದಿರುಗಿಸಲಾಗಿದೆ.
ಕಾರ್ಡ್ ಸ್ಕಿಮ್ಮಿಂಗ್, ಸೆಕ್ಸ್ಟಾರ್ಶನ್ , ಡೇಟಾ ಕಳ್ಳತನ , ಇತರೆ ಮುಂಗಡ ಶುಲ್ಕ ವಂಚನೆಗಳು, ಆಮದು ಮತ್ತು ರಫ್ತು ಹಗರಣಗಳು, ವೈವಾಹಿಕ ವಂಚನೆ ಇಮೇಲ್ ವಂಚನೆ, ಲಾಟರಿ ವಂಚನೆ ,ಆನ್‍ಲೈನ್ ಗೇಮಿಂಗ್ ಹಾಗೂ ಸಿಮ್ ಕ್ಲೋನಿಂಗ್ ಪ್ರಕರಣಗಳನ್ನು ಪತ್ತೆ ಹಚ್ಚಿ ಕೋಟ್ಯಾಂತರ ಹಣ ವಶಪಡಿಸಿಕೊಳ್ಳಲಾಗಿದೆ.