ಬೆಂಗಳೂರು,ಅ.28-ಲಿಡ್ಕರ್ ಉತ್ಪನ್ನಗಳು ಲಿಬರ್ಟಿ, ಬಾಟ ಉತ್ಪನ್ನಗಳಿಗಿಂತ ಕಡಿಮೆ ಇಲ್ಲ ಎಂದು ಸಮಾಜ ಕಲ್ಯಾಣ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದರು.ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವದ್ಧಿ ನಿಗಮ (ಲಿಡ್ಕರ್) ಸುವರ್ಣ ಮಹೋತ್ಸವದ ಅಂಗವಾಗಿ ಹಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ ಬಳಿಯೇ ತಯಾರಿಸಿ ಅವರು ಲೇಬಲ್ ಅಂಟಿಸಿಕೊಂಡು ಮಾರುತ್ತಿದ್ದಾರೆ. ನೀವು ಅವರಿಗಿಂತ ಮೇಲುಖವಾಗಿ ಬೆಳೆಯಬೇಕು. ನಿಮ್ದೇ ಲೇಬಲ್ ಸಷ್ಟಿ ಮಾಡಿ ಉದ್ಯಮಿಗಳಾಗಿ ಬೆಳೆಯಬೇಕು ಎಂದು ಚರ್ಮ ಕುಶಲಕರ್ಮಿಗಳಿಗೆ ಕರೆ ನೀಡಿದರು.
ದೊಡ್ಡ ಚಪ್ಪಲಿ ಬ್ರ್ಯಾಂಡುಗಳಂತೆ ನಮ ಲಿಡ್ಕರ್ ಉತ್ಪನ್ನಗಳು ಕೂಡ ಪ್ರಪಂಚದ್ಯಾಂತ ನಮದೇ ದೊಡ್ಡ ಬ್ರ್ಯಾಂಡುಗಳ ಮೂಲಕ ಬೆಳೆಯಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕು. ಜಿಲ್ಲೆಗೆ ಒಂದೊಂದು ಶೋ ರೂಮ್ ತೆರೆದು ಮಾರಾಟ ವ್ಯವಸ್ಥೆ ಮಾಡಿ ಎಂದು ಸಲಹೆ ನೀಡಿದರು. ಚರ್ಮ ಕುಶಲಕರ್ಮಿಗಳ ಮಕ್ಕಳನ್ನು ವಿದ್ಯಾಭ್ಯಾಸದ ಕಡೆ ಗಮನ ಹರಿಸುವಂತೆ ಮಾಡಬೇಕು.
ವೈದ್ಯರು, ಎಂಜಿನಿಯರ್ ,ಕೆಎಎಸ್ ಆಗಬೇಕು ಎಂಬ ಬಯಕೆ ಇದೆ. ಅದಕ್ಕಾಗಿ ಪ್ರತಿ ಹೋಬಳಿಯಲ್ಲೂ ಒಂದು ವಸತಿ ಶಾಲೆಯನ್ನು ತೆರೆಯಲು ನಿರ್ಧರಿಸಿದ್ದೇವೆ ಎಂದರು. ಈ ಮಹಾತ್ವಕಾಂಕ್ಷಿ ಯೋಜನೆ ಆರಂಭಿಸಲು ಎಲ್ಲಾ ಸಿದ್ದತೆಗಳು ನಡೆದಿವೆ. ಪ್ರಸ್ತುತ ಇರುವ ಭವನಗಳನ್ನು ಉಪಯೋಗಿಸಿಕೊಂಡು ಅಲ್ಲಿ ಸ್ಪರ್ಧಾತಕ ಪರೀಕ್ಷೆಗಳಿಗೆ ತರಬೇತಿ ನೀಡಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.
ಅಗತ್ಯ ಬಿದ್ದರೆ ಹೊಸ ಭವನಗಳನ್ನು ನಿರ್ಮಿಸಲಾಗುವುದು ಎಂದ ಅವರು, ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟ ತರಲು ಮುಖ್ಯಮಂತ್ರಿ ಬಳಿ ಮಾತನಾಡಿ ತೀರ್ಮಾನಿಸುತ್ತೇವೆ ಎಂದರು. ಒಳ ಮೀಸಲಾತಿ ಎಂಬುವುದು ನಲವತ್ತು ವರ್ಷಗಳ ಹೋರಾಟ. ಇದರ ಫಲವಾಗಿ ವಸಿದ್ದರಾಮಯ್ಯನವರ ಅವಧಿಯಲ್ಲಿ ಜಾರಿಗೆ ಬಂತು. ಈಗ ಮೀಸಲಾತಿ ವಿಷಯ ಹೊಸ ಬದಲಾವಣೆ ತರಲು ಸಿಎಂ ಜೊತೆ ಚರ್ಚೆ ನಡೆಸಲಾಗುವುದು ಎಂದರು.

ಮೀಸಲಾತಿ ಕುರಿತಂತೆ ಸುಪ್ರೀಂ ಕೋರ್ಟ್ನಲ್ಲಿ ಮೇಲನವಿ ಸಲ್ಲಿಸಲಾಗಿದೆ. ಅದೇನೇ ಇರಲಿ ನಾವು ಎಲ್ಲರೂ ಒಂದೇ.ಎಡ, ಬಲ, ಬೋವಿ ಯಾವುದೇ ಜಾತಿಯರಲಿ ನಾವೆಲ್ಲರೂ ಅಣ್ಣತಮಂದಿರು. ಅಣ್ಣ ತಮಂದಿರು ಅಂದಮೇಲೆ ಸಣ್ಣಪುಟ್ಟ ಜಗಳಗಳು ಬರುತ್ತವೆ .ಅವುಗಳನ್ನು ಸರಿಪಡಿಸಿಕೊಂಡು ಮುಂದೋಗಬೇಕು. ಮೀಸಲಾತಿ ಗೊಂದಲಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಲಿಡ್ಕರ್ ನ ಅಧ್ಯಕ್ಷರಾದ ಮುಂಡರಗಿ ನಾಗರಾಜ ಮಾತನಾಡಿ, ಲಿಡ್ಕರ್ ಐವತ್ತು ವರ್ಷದ ಸಾರ್ಥಕ ಸಾಧನೆ ಅನುಭವ, ಹೋರಾಟ, ಪರಂಪರೆ, ಕೌಶಲ್ಯ ಮತ್ತು ಸಾಧನೆ,ಇತಿಹಾಸ ಮರುಕಳಿಸಬೇಕು. ಮಾದರ ಚೆನ್ನಯ್ಯ ನಮಗೆ ಸ್ಪೂರ್ತಿ. ಚರ್ಮ ಕುಶಲಕರ್ಮಿಗಳಿಗೆ ಜಾತಿ ಮುಖ್ಯ ಅಲ್ಲ ,ಕೌಶಲ್ಯ ಮುಖ್ಯ,ಇವರ ಶ್ರಮ ನಮ ಶಕ್ತಿ. ಇವರು ಉದ್ಯಮಗಳಾಗಬೇಕು.ಸ್ವಂತ ಬ್ರ್ಯಾಂಡ್ ಮಾಲೀಕರಾಗಬೇಕು.ಚರ್ಮ ಕಾಯಕ ಇದು ಜಾತಿಯ ಸಂಕೇತವಲ್ಲ ಇದೊಂದು ಸಂಸ್ಕೃತಿ. ವೈಜಾನಿಕ ಅಡಿಪಾಯದಲ್ಲಿ ಬೆಳೆಯಬೇಕು ಎಂದರು.

ಮಾಜಿ ಸಚಿವ ಆಂಜನೇಯ, ಮಾಜಿ ಸಂಸದ ಬಿ.ಎನ್ ಚಂದ್ರಪ್ಪ, ಸರ್ಕಾರದ ಕಾರ್ಯದರ್ಶಿ ಮೋಹನ್ ರಾಜ್, ಆಯುಕ್ತರಾದ ಎನ್.ಎಂ. ನಾಗರಾಜ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ನರೇಂದ್ರ, ಅಲೆಮಾರಿ ನಿಗಮದ ಅಧ್ಯಕ್ಷೆ ಪಲ್ಲವಿ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ್ ಸಾಲಪ್ಪ, ಆದಿ ಜಾಂಬವ ಅಧ್ಯಕ್ಷ ಮಂಜುನಾಥ್, ಆರ್ಯ ವೈಶ್ಯ ನಿಗಮದ ಅಧ್ಯಕ್ಷ ರಾಮಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್. ನಟರಾಜ್ ಹಾಗೂ ಲಿಡ್ಕರ್ನ ಮಾಜಿ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳು ಮುಂತಾದ ಇತರ ದಲಿತ ಸಂಘಟನೆ ಮುಖಂಡರು ಉಪಸ್ಥಿತರಿದ್ದರು.
