ನವದೆಹಲಿ, ಅ. 28 (ಪಿಟಿಐ)- ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ (ಸೆಕ್ರೆಟರಿ ಆಫ್ ವಾರ್) ಪೀಟ್ ಹೆಗ್ಸೆತ್ ಅವರೊಂದಿಗೆ ಮಾತುಕತೆ ನಡೆಸಿದರು.ಈ ವೇಳೆ ಭಾರತ-ಅಮೆರಿಕ ರಕ್ಷಣಾ ಸಂಬಂಧಗಳ ಪ್ರಸ್ತುತ ಸ್ಥಿತಿಗತಿಗಳನ್ನು ಪರಿಶೀಲಿಸಲಾಯಿತು ಮತ್ತು ಈ ಸಂಬಂಧವನ್ನು ಇನ್ನಷ್ಟು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಲಾಯಿತು.
ಫಿಲಿಪ್ಪೀನ್ಸ್‌ನ ಸೆಬುವಿನಲ್ಲಿ ಬಹುಪಕ್ಷೀಯ ಸಮಾವೇಶವೊಂದರ ಅಂಚಿನಲ್ಲಿ ಈ ಸಭೆ ನಡೆಯಿತು. ಆಸಿಯಾನ್ ರಕ್ಷಣಾ ಸಚಿವರ ಸಭೆ ಪ್ಲಸ್ (ಎಡಿಎಂಎಂ ಪ್ಲಸ್) ಗುಂಪಿನ ಸಭೆಯಲ್ಲಿ ಭಾಗವಹಿಸಲು ಸಿಂಗ್ ಮತ್ತು ಹೆಗ್ಸೆತ್ ಸೆಬುವಿನಲ್ಲಿದ್ದಾರೆ. ಎಡಿಎಂಎಂ ಪ್ಲಸ್ ಎನ್ನುವುದು ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) ಸದಸ್ಯ ರಾಷ್ಟ್ರಗಳು ಮತ್ತು ಅದರ ಎಂಟು ಸಂವಾದ ಪಾಲುದಾರ ರಾಷ್ಟ್ರಗಳನ್ನು ಒಳಗೊಂಡಿರುವ ವೇದಿಕೆಯಾಗಿದೆ.
ಈ ಎಂಟು ಪಾಲುದಾರ ರಾಷ್ಟ್ರಗಳೆಂದರೆ ಭಾರತ, ಚೀನಾ, ಆಸ್ಟ್ರೇಲಿಯಾ, ಜಪಾನ್, ನ್ಯೂಜಿಲೆಂಡ್, ದಕ್ಷಿಣ ಕೊರಿಯಾ, ರಷ್ಯಾ ಮತ್ತು ಅಮೆರಿಕ. ದ್ವಿಪಕ್ಷೀಯ ರಕ್ಷಣಾ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸುವುದೇ ಸಿಂಗ್ ಮತ್ತು ಹೆಗ್ಸೆತ್ ನಡುವಿನ ಮಾತುಕತೆಯ ಮುಖ್ಯ ಉದ್ದೇಶವಾಗಿತ್ತು.
