Wednesday, April 16, 2025
Homeಬೆಂಗಳೂರು"ಕಾಲ್ ಗರ್ಲ್ ಬೇಕಾದರೆ ಸಂಪರ್ಕಿಸಿ" ಎಂದು ಫೇಸ್‌ಬುಕ್‌ನಲ್ಲಿ ಪತ್ನಿ ಫೋಟೋ-ನಂಬರ್ ಹಾಕಿ ಪತಿ ಪರಾರಿ

“ಕಾಲ್ ಗರ್ಲ್ ಬೇಕಾದರೆ ಸಂಪರ್ಕಿಸಿ” ಎಂದು ಫೇಸ್‌ಬುಕ್‌ನಲ್ಲಿ ಪತ್ನಿ ಫೋಟೋ-ನಂಬರ್ ಹಾಕಿ ಪತಿ ಪರಾರಿ

ಬೆಂಗಳೂರು, ಏ.11- ಕಾಲ್ ಗರ್ಲ್ ಗಾಗಿ ಕರೆ ಮಾಡಿ ಎಂದು ಪತ್ನಿಯ ಫೋಟೊ ಮತ್ತು ಮೊಬೈಲ್ ನಂಬರನ್ನು ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಮಾಡಿರುವ ಆರೋಪಿ ವಿದೇಶಕ್ಕೆ ಪರಾರಿಯಾಗಿರುವುದು ನಂದಿನಿ ಲೇಔಟ್ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. 40 ವರ್ಷದ ವ್ಯಕ್ತಿ ಹಾಗೂ 37 ವರ್ಷದ ಮಹಿಳೆ 2019ರಲ್ಲಿ ಪ್ರೀತಿಸಿ ಮದುವೆಯಾಗಿದ್ದಾರೆ. ತದನಂತರ ಇವರಿಬ್ಬರ ನಡುವೆ ಮನಸ್ತಾಪವುಂಟಾಗಿ, ಜಗಳವಾಗಿದ್ದು, ಪತಿಯಿಂದ ಮಹಿಳೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ.

ಅದೇ ಕೋಪಕ್ಕೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಈಕೆಯ ಪತಿ ಸಾಮಾಜಿಕ ಜಾಲತಾಣದಲ್ಲಿ ನಕಲಿ -ಫೇಸಬುಕ್ ಖಾತೆ ತೆರೆದು ಕಾಲ್ಗರ್ಲ್ ಬೇಕಾದಲ್ಲಿ ಈ ನಂಬರ್ಗೆ ಸಂಪರ್ಕಿಸಿ ಎಂದು ಕಾಲ್ಗರ್ಲ್ನಂತೆ ಬಿಂಬಿಸಿ ಪತ್ನಿಯ ಫೋಟೋ ಮತ್ತು ಮೊಬೈಲ್ ನಂಬರ್ ಹಾಕಿದ್ದಲ್ಲದೇ, ಆಕೆಯ ಸಹೋದರನ ಮೊಬೈಲ್ ಸಂಖ್ಯೆ ಸಹ ಪೊಸ್ಟ್ ಮಾಡಿದ್ದಾನೆ.

ಇದರಿಂದ ಇವರಿಬ್ಬರಿಗೂ ಹಲವು ಫೋನ ಕರೆಗಳು , ಮೆಸೇಜ್ಗಳು ಬರುತ್ತಿದ್ದವು. ಪತಿಯ ವಿಕೃತ ಮನಸ್ಥಿತಿಯಿಂದ ನೊಂದ ಪತ್ನಿ ನಂದಿನಿ ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಾಗ, ಈ ರೀತಿ ಪತ್ನಿ ವಿರುದ್ಧವೇ ಪೊಸ್ಟ್ ಮಾಡಿರುವ ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದಾನೆಂಬುದು ಗೊತ್ತಾಗಿದೆ. ಪತಿ-ಪತ್ನಿಯ ನಡುವಿನ ಜಗಳಕ್ಕೆ ಸೋಶಿಯಲ್ ಮೀಡಿಯಾ ಬಳಕೆ ಮಾಡಿಕೊಂಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

RELATED ARTICLES

Latest News