Friday, May 3, 2024
Homeಕ್ರೀಡಾ ಸುದ್ದಿ15 ಕೋಟಿ ವಂಚನೆ : ಪೊಲೀಸರ ಅತಿಥಿಯಾದ ಧೋನಿ ಮಾಜಿ ಪಾಲುದಾರ ಉದ್ಯಮಿ

15 ಕೋಟಿ ವಂಚನೆ : ಪೊಲೀಸರ ಅತಿಥಿಯಾದ ಧೋನಿ ಮಾಜಿ ಪಾಲುದಾರ ಉದ್ಯಮಿ

ನವದೆಹಲಿ,ಏ.11- ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರ ಮಾಜಿ ಪಾಲುದಾರ ಉದ್ಯಮಿ ಮಿಹಿರ್ ದಿವಾಕರ್ ಅವರನ್ನು ವಂಚನೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ರಾಂಚಿಯ ಜಿಲ್ಲಾ ನ್ಯಾಯಾಲಯದಲ್ಲಿ ಸೌಮ್ಯಾ ದಾಸ್ ಜೊತೆಗೆ ದಿವಾಕರ್ ವಿರುದ್ಧ ಧೋನಿ ದೂರು ದಾಖಲಿಸಿದ್ದರು. ಅರ್ಕಾ ಸ್ಪೋಟ್ರ್ಸ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರಾಗಿರುವ ದಿವಾಕರ್ ಅವರನ್ನು ಜೈಪುರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸಲು ಧೋನಿ ಹೆಸರನ್ನು ಅನಧಿಕೃತವಾಗಿ ಬಳಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆಯಾಗಿ ಈ ಬಂಧನವಾಗಿದೆ.

ಧೋನಿ ಅಧಿಕಾರವನ್ನು ರದ್ದುಪಡಿಸಿದ ನಂತರವೂ, ದಿವಾಕರ್ ಅವರು ಭಾರತ ಮತ್ತು ವಿದೇಶಗಳಲ್ಲಿ ಭಾರತದ ಮಾಜಿ ನಾಯಕನ ಹೆಸರನ್ನು ಬಳಸಿಕೊಂಡು ಅನೇಕ ಕ್ರಿಕೆಟ್ ಅಕಾಡೆಮಿಗಳನ್ನು ತೆರೆದಿದ್ದಾರೆ ಎಂದು ತಿಳಿದು ಬಂದಿದೆ. ಎಂಎಸ್ ಧೋನಿ ಕ್ರಿಕೆಟ್ ಮತ್ತು ಸ್ಪೋಟ್ರ್ಸ್ ಅಕಾಡೆಮಿಗಳಿಗೆ ಹಣ ಪಡೆದಿರುವ ಆರೋಪವೂ ದಿವಾಕರ್ ಅವರ ಮೇಲಿದೆ, ಇದು 15 ಕೋಟಿ ರೂಪಾಯಿಗೂ ಹೆಚ್ಚು ವಂಚನೆಗೆ ಕಾರಣವಾಗಿದೆ.

ಆರ್ಕಾ ಸ್ಪೋರ್ಟ್ಸ್ ಫ್ರಾಂಚೈಸ್ ಶುಲ್ಕವನ್ನು ಪಾವತಿಸಲು ಮತ್ತು ಒಪ್ಪಂದದಲ್ಲಿ ನಮೂದಿಸಲಾದ ಅನುಪಾತದಲ್ಲಿ ಲಾಭವನ್ನು ಹಂಚಿಕೊಳ್ಳಲು ಹೊಣೆಗಾರರಾಗಿದ್ದರು, ಆದರೆ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಸಲಾಗಿದೆ.

ತನಗೆ ತಿಳಿಯದಂತೆ ಪಾಲುದಾರರು ಕ್ರಿಕೆಟಿಗ ಅಕಾಡೆಮಿಗಳನ್ನು ಸ್ಥಾಪಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಹೇಳಿಕೊಂಡಿದ್ದರು. ಇದಲ್ಲದೆ, ಧೋನಿ ಪಾಲುದಾರರಿಗೆ ಒದಗಿಸಿದ ಅಧಿಕಾರ ಪತ್ರವನ್ನು ಆಗಸ್ಟ್ 15, 2021 ರಂದು ಹಿಂತೆಗೆದುಕೊಂಡಿದ್ದರು.

ಪತ್ರವನ್ನು ಹಿಂತೆಗೆದುಕೊಳ್ಳುವ ಹೊರತಾಗಿಯೂ, ಅವರು ಧೋನಿಯೊಂದಿಗೆ ಯಾವುದೇ ಮೊತ್ತ ಅಥವಾ ಮಾಹಿತಿಯನ್ನು ಹಂಚಿಕೊಳ್ಳದೆ ಅವರ ಹೆಸರಿನಲ್ಲಿ ಕ್ರಿಕೆಟ್ ಅಕಾಡೆಮಿಗಳು ಮತ್ತು ಕ್ರೀಡಾ ಸಂಕೀರ್ಣಗಳನ್ನು ಸ್ಥಾಪಿಸುವುದನ್ನು ಮುಂದುವರೆಸಿದರು ಎಂದು ಅವರ ವಕೀಲರು ಹೇಳಿದ್ದಾರೆ.

RELATED ARTICLES

Latest News