Homeರಾಜ್ಯಉತ್ತರಾಖಂಡ ಹೆಲಿಕಾಪ್ಟರ್‌ ದುರಂತ : 6 ಮಂದಿಯ ಮೃತದೇಹಗಳು ರಿಷಿಕೇಶ ಏಮ್ಸ್ ಗೆ ರವಾನೆ

ಉತ್ತರಾಖಂಡ ಹೆಲಿಕಾಪ್ಟರ್‌ ದುರಂತ : 6 ಮಂದಿಯ ಮೃತದೇಹಗಳು ರಿಷಿಕೇಶ ಏಮ್ಸ್ ಗೆ ರವಾನೆ

ಚಮೋಲಿ, ನ.1 – ಉತ್ತರಾಖಂಡದ ಜೋಶಿಮಠ ಸಮೀಪ ಸಂಭವಿಸಿದ ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟ ಆರು ಮಂದಿಯ ಮೃತದೇಹಗಳನ್ನು ಇಂದು ಬೆಳಿಗ್ಗೆ ರಿಷಿಕೇಶದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್‌‍) ರವಾನಿಸಲಾಗಿದೆ ಎಂದು ಚಮೋಲಿ ಜಿಲ್ಲಾಡಳಿತ ತಿಳಿಸಿದೆ.

ಮೃತದೇಹಗಳನ್ನು ರಸ್ತೆ ಮಾರ್ಗವಾಗಿ ಜೋಶಿಮಠದ ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸಿಎಚ್‌ಸಿ) ತರಲಾಗಿತ್ತು. ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಹೆಲಿಕಾಪ್ಟರ್‌ ಮೂಲಕ ರಿಷಿಕೇಶದ ಏಮ್ಸೌಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರು ಮೃತದೇಹಗಳನ್ನು ರಕ್ಷಣಾ ತಂಡಗಳು ದುರ್ಗಮ ಪರ್ವತ ಹಾದಿಗಳಲ್ಲಿ ಕಾಲ್ನಡಿಗೆಯ ಮೂಲಕ ಹೊರತೆಗೆದಿವೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಲಿಕಾಪ್ಟರ್‌ ಪತನಗೊಂಡ ಶುಕ್ರವಾರವೇ ಕಾರ್ಯಾಚರಣೆ ಆರಂಭಿಸಲಾಗಿತ್ತು. ಆದರೆ, ದುರ್ಗಮ ಭೌಗೋಳಿಕ ಪರಿಸ್ಥಿತಿ ಹಾಗೂ ದೂರದ ಪ್ರದೇಶವಾಗಿದ್ದರಿಂದ ಕಾರ್ಯಾಚರಣೆ ಪೂರ್ಣ ಗೊಳಿಸಲು 24 ಗಂಟೆಗಳಿಗೂ ಹೆಚ್ಚು ಸಮಯ ಬೇಕಾಯಿತು ಎಂದು ಜಿಲ್ಲಾಡಳಿತ ತಿಳಿಸಿದೆ.

RELATED ARTICLES

Latest News