Homeರಾಜ್ಯರಾಜ್ಯದ ಜನತೆಗೆ ದೀಪಾವಳಿ ಶಾಕ್ ಕೊಟ್ಟ 'ಗ್ಯಾರಂಟಿ' ಸರ್ಕಾರ : ಬಸ್ ಪ್ರಯಾಣ ದರದಲ್ಲಿ ಭಾರೀ...

ರಾಜ್ಯದ ಜನತೆಗೆ ದೀಪಾವಳಿ ಶಾಕ್ ಕೊಟ್ಟ ‘ಗ್ಯಾರಂಟಿ’ ಸರ್ಕಾರ : ಬಸ್ ಪ್ರಯಾಣ ದರದಲ್ಲಿ ಭಾರೀ ಏರಿಕೆ

ಬೆಂಗಳೂರು: ಹಾಲಿನ ದರ ಏರಿಕೆಯ ಬೆನ್ನಲ್ಲೇ ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ರಾಜ್ಯದಲ್ಲಿ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗಿದ್ದು, ಕೆಎಸ್‌ಆರ್‌ಟಿಸಿ ಬಸ್‌ಗಳ ಪ್ರಯಾಣ ದರ ಗರಿಷ್ಠ ₹9ರಷ್ಟು ಏರಿಕೆಯಾಗಿದೆ. ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರದಲ್ಲೂ ಹೆಚ್ಚಳ ಮಾಡಲಾಗಿದೆ. ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಬೈರತಿ ಸುರೇಶ್ ಅವರು, ಪ್ರಯಾಣ ದರ ಏರಿಕೆ ಕುರಿತು ವಿವರಗಳನ್ನು ನೀಡಿದರು.

ಬಿಎಂಟಿಸಿ ಟಿಕೆಟ್ ದರ ಏರಿಕೆ
ಬಿಎಂಟಿಸಿ ಸಾಮಾನ್ಯ ಬಸ್‌ಗಳ ಟಿಕೆಟ್ ದರವನ್ನೂ ಹೆಚ್ಚಿಸಲಾಗಿದೆ. ಈ ಹಿಂದೆ ಪ್ರತಿ ಸ್ಟೇಜ್‌ಗೆ ₹6 ಇದ್ದ ಕನಿಷ್ಠ ಟಿಕೆಟ್ ದರವನ್ನು ₹10ಕ್ಕೆ ಏರಿಕೆ ಮಾಡಲಾಗಿದೆ. ವಾಯುವಜ್ರ ಬಸ್‌ಗಳ ಕೊನೆಯ ಹಂತದ ಪ್ರಯಾಣ ದರವನ್ನು ₹75ರಿಂದ ₹90ಕ್ಕೆ ಹೆಚ್ಚಿಸಲಾಗಿದೆ.

RELATED ARTICLES

Latest News