Friday, October 31, 2025
Homeರಾಷ್ಟ್ರೀಯ | Nationalಮೋದಿ ಭರವಸೆಗಳು 24 ಕ್ಯಾರೆಟ್ ಚಿನ್ನದಂತೆ ಪರಿಶುದ್ಧವಾಗಿದೆ : ರಾಜಾನಾಥ್‍ಸಿಂಗ್

ಮೋದಿ ಭರವಸೆಗಳು 24 ಕ್ಯಾರೆಟ್ ಚಿನ್ನದಂತೆ ಪರಿಶುದ್ಧವಾಗಿದೆ : ರಾಜಾನಾಥ್‍ಸಿಂಗ್

ನವದೆಹಲಿ,ಏ, 14 (ಪಿಟಿಐ) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ನೀಡಿರುವ ಭರವಸೆಗಳು 24 ಕ್ಯಾರೆಟ್ ಚಿನ್ನದಂತೆ ಪರಿಶುದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಪಕ್ಷದ ಸಂಕಲ್ಪ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಸಿಂಗ್, ಬಿಜೆಪಿಯ ಪ್ರಣಾಳಿಕೆಯನ್ನು ವಿಶ್ವ ರಾಜಕೀಯದಲ್ಲಿ ಚಿನ್ನದ ಮಾನದಂಡವಾಗಿ ನೋಡಲಾಗುತ್ತದೆ ಎಂದಿದ್ದಾರೆ. ಬಿಜೆಪಿ ತನ್ನ ಬದ್ಧತೆಗಳನ್ನು ಈಡೇರಿಸುವ ಮೂಲಕ ಜನರಲ್ಲಿ ವಿಶ್ವಾಸಾರ್ಹತೆಯನ್ನು ಗಳಿಸಿದೆ ಎಂದಿರುವ ಅವರು, ಮಹಿಳಾ ಮೀಸಲಾತಿ ಕಾನೂನು ಜಾರಿ, ಆರ್ಟಿಕಲ್ 370 ರದ್ದತಿ ಮತ್ತು ರಾಮ ಮಂದಿರ ನಿರ್ಮಾಣದ ಜೊತೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಹಲವಾರು ಅಭಿವೃದ್ಧಿ ಕ್ರಮಗಳನ್ನು ಅವರು ಉಲ್ಲೇ ಖಿಸಿ ಆಡಳಿತ ಪಕ್ಷವು ತನ್ನ ಭರವಸೆಗಳನ್ನು ಈಡೇರಿಸಿದೆ ಎಂದು ಪ್ರತಿಪಾದಿಸಿದರು.

ರಾಜ್ಯದ ಹಲವೆಡೆ ಇನ್ನೂ ಮೂರ್ನಾಲ್ಕು ದಿನ ಮಳೆ
- Advertisement -

ಸಿಂಗ್ ಅವರು ಲೋಕಸಭೆ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸಮಿತಿಯು 15 ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಸ್ವೀಕರಿಸಿದೆ ಎಂದು ಅವರು ಹೇಳಿದರು.

- Advertisement -
RELATED ARTICLES

Latest News