Thursday, May 2, 2024
Homeರಾಜ್ಯಮೊಬೈಲ್ ರಿಪೇರಿ ಮಾಡಿಸಲು ಹೋಗಿ ಸಿಕ್ಕಿಬಿದ್ದ ರಾಮೇಶ್ವರಂ ಕೆಫೆ ಸ್ಫೋಟದ ಉಗ್ರರು

ಮೊಬೈಲ್ ರಿಪೇರಿ ಮಾಡಿಸಲು ಹೋಗಿ ಸಿಕ್ಕಿಬಿದ್ದ ರಾಮೇಶ್ವರಂ ಕೆಫೆ ಸ್ಫೋಟದ ಉಗ್ರರು

ಬೆಂಗಳೂರು,ಏ.14- ತನ್ನ ಬಳಿ ಇದ್ದ ಮೊಬೈಲ್ ಫೋನ್ ರಿಪೇರಿ ಮಾಡಿಸಲು ಹೋಗಿ ರಾಮೇಶ್ವರಂ ಕೆಫೆ ಸ್ಫೋಟದ ರೂವಾರಿಗಳಾದ ಮುಸ್ಸಾವಿರ್ ಹುಸೇನ್ ಶಾಜೆಬ್ ಹಾಗೂ ಅಬ್ದುಲ್ ಮಥೀನ್ ತಾಹಾ ದೂರದ ಪಶ್ಚಿಮ ಬಂಗಾಳದಲ್ಲಿ ಎನ್‍ಐಎ ಖೆಡ್ಡಾಕ್ಕೆ ಸಿಕ್ಕಿಬಿದ್ದಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ನಂತರ ಯಾರಿಗೂ ಸಣ್ಣ ಸುಳಿವು ಬಿಟ್ಟುಕೊಡದೆ ಕೋಲ್ಕತ್ತಾಗೆ ತೆರಳಿ ಖಾಸಗೀ ಹೋಟೆಲ್ ಒಂದರಲ್ಲಿ ಪ್ರವಾಸಿಗರಂತೆ ತಂಗಿದ್ದ ಉಗ್ರರು ಅಲ್ಲೇ ಮೊಬೈಲ್ ಫೋನ್ ರಿಪೇರಿ ಮಾಡಿಸಲು ಹೋಗಿ ಸಿಕ್ಕಿಬಿದ್ದಿದ್ದಾರೆ ಎಂದು ಮೂಲಗಳು ಈಸಂಜೆಗೆ ಖಚಿತಪಡಿಸಿವೆ.

ಕೋಲ್ಕತ್ತಾದ ಹೋಟೆಲ್‍ನಲ್ಲಿ ತಲೆಮರೆಸಿಕೊಂಡಿದ್ದ ಉಗ್ರರ ಬಳಿ ಇದ್ದ ಒಬ್ಬನ ಮೊಬೈಲ್ ಕೆಟ್ಟು ಹೋಗಿತ್ತು. ಹೀಗಾಗಿ ಆತ ಸಿಮ್ ತೆಗೆದುಕೊಂಡು ಖಾಲಿ ಮೊಬೈಲ್ ಅನ್ನು ರಿಪೇರಿ ಮಾಡಿಸಲು ಸಮೀಪದ ಮೊಬೈಲ್ ರಿಪೇರಿ ಅಂಗಡಿ ತೆರಳಿ ಮೊಬೈಲ್ ನೀಡಿದ್ದ.

ಮೊಬೈಲ್ ರಿಪೇರಿ ಆದ ನಂತರ ಅಂಗಡಿಯಾತನ ಬಳಿ ಇದ್ದ ಬೇರೆ ಸಿಮ್ ಹಾಕಿ ಪರೀಕ್ಷಿಸಿದ್ದ ಮಾತ್ರವಲ್ಲ ಅದೇ ನಂಬರ್‍ನಿಂದ ಯಾರಿಗೋ ಫೋನ್ ಮಾಡಿದ್ದ ಆ ಸಂದರ್ಭದಲ್ಲಿ ಮೊಬೈಲ್ ಲೊಕೇಷನ್ ಮಾಹಿತಿ ಎನ್‍ಐಎ ಪೊಲೀಸರಿಗೆ ಲಭಿಸಿತ್ತು. ನಂತರ ಎನ್‍ಐಎ ಅಧಿಕಾರಿಗಳು ಅಂಗಡಿ ಬಳಿ ಹೋಗಿ ಮೊಬೈಲ್ ರಿಪೇರಿಗೆ ಬಂದಿದ್ದವರ ಮಾಹಿತಿಯನ್ನು ಪಡೆದುಕೊಂಡರು. ಖಚಿತ ಸುಳಿವಿನ ಆಧಾರದ ಮೇಲೆ ಹೋಟೆಲ್ ಮೇಲೆ ದಾಳಿ ಮಾಡಿ ತಲೆಮರೆಸಿಕೊಂಡಿದ್ದ ಉಗ್ರರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಿಂದ ಪರಾರಿಯಾಗಿದ್ದ ಇಬ್ಬರು ಉಗ್ರರು ಮೊದಲು ಕೋಲ್ಕತ್ತಾದ ಹೋಟೆಲ್ ಒಂದರಲ್ಲಿ ರೂಮ್ ಪಡೆಯುವಾಗ ರಿಜಿಸ್ಟರ್‍ನಲ್ಲಿ ತಮ್ಮ ಹೆಸರು ಬರೆದಿದ್ದರು ಆಗ ಎರಡನೆ ಆರೋಪಿ ಮೊದಲು ತನ್ನ ವಿಶೇಷ ಹೆಸರು ಬರೆದು ನಂತರ ಅದನ್ನು ಹೊಡೆದುಹಾಕಿ ತನ್ನ ನಿಜ ನಾಮಧೇಯ ಬರೆದಿರುವುದು ಪೊಲೀಸರ ತನಿಖೆ ವೇಳೆ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ನಾವು ಪ್ರವಾಸಿಗರು ಡಾರ್ಜಿಲಿಂಗ್‍ನಿಂದ ಬರುತ್ತಿರುವುದಾಗಿ ಹೋಟೆಲ್ ನವರಿಗೆ ತಿಳಿಸಿ, ಇಲ್ಲಿಂದ ಚೆನ್ನೈಗೆ ಹೋಗುತ್ತಿರುವುದಾಗಿ ಹೇಳಿದ್ದರು. ಆದರೆ, ನಂತರ ಇಬ್ಬರು ಯಾವ ಸುಳಿವು ನೀಡದೆ ಆ ಹೋಟೆಲ್‍ನಿಂದ ಹೊರಟು ಹೋಗಿದ್ದರು. ಜೊತೆಗೆ ನಕಲಿ ಆಧಾರ್‍ಕಾರ್ಡ್ ಬಳಸಿ ರೂಮ್ ಪಡೆದಿದ್ದರು ಎಂದು ಗೊತ್ತಾಗಿದೆ.

ಎನ್‍ಐಎ ಬಲೆಗೆ ಬಿದ್ದಿರುವ ಉಗ್ರರಾದ ಮುಸ್ಸಾವಿರ್ ಹುಸೇನ್ ಶಾಜೆಬ್ ಹಾಗೂ ಅಬ್ದುಲ್ ಮಥೀನ್ ತಾಹಾ ಅವರು ಕಳೆದ 28 ದಿನಗಳಿಂದ ಪಶ್ಚಿಮ ಬಂಗಾಳದಲ್ಲಿ ಪ್ರವಾಸಿಗರಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು ಎಂದು ಪೊಲೀಸ್ ಮೂಲಗಳು ಉಲ್ಲೇಖಿಸಿವೆ.

ಈ ವೇಳೆ ಇಬ್ಬರು ಉಗ್ರರು ಕೋಲ್ಕತ್ತಾದ ನಗರ ವ್ಯಾಪ್ತಿಯಲ್ಲಿರುವ ಮೂರು ಹೋಟೆಲïಗಳಲ್ಲಿ ತಂಗಿದ್ದ ಬಗ್ಗೆ ಹಾಗೂ ಹೋಟೆಲ್ ವೊಂದರಲ್ಲಿ ಉಗ್ರರು ರಿಜಿಸ್ಟರ್‍ನಲ್ಲಿ ತಮ್ಮ ಹೆಸರು ಬರೆಯುತ್ತಿರುವ ಸಿಸಿಟಿವಿ ದೃಶ್ಯಾವಳಿ ಕೂಡ ಪೊಲೀಸರಿಗೆ ಲಭ್ಯವಾಗಿದೆ.

RELATED ARTICLES

Latest News