ಬೆಂಗಳೂರು, ನ.5 -ಹಾಲು ಮತ್ತು ಮೊಸರಿನ ಬೆಲೆ ಏರಿಕೆ ಬೆನ್ನಲ್ಲೇ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ವಿವಿಧ ಉತ್ಪನ್ನಗಳ ಬೆಲೆಯೂ ಹೆಚ್ಚಳವಾಗಿದೆ. ನಂದಿನಿ ತುಪ್ಪ, ಬೆಣ್ಣೆ, ಪನೀರ್ ಹಾಗೂ ತೃಪ್ತಿ ಹಾಲಿನ ಪರಿಷ್ಕೃತ ದರ ಕಳೆದ ರಾತ್ರಿಯಿಂದಲೇ ಜಾರಿಗೆ ಬಂದಿದೆ.
ಬೆಂಗಳೂರು ಹಾಲು ಒಕ್ಕೂಟ (ಬಮುಲ್)ಸುತ್ತೋಲೆ ಹೊರಡಿಸಿದ್ದು, ವಿವಿಧ ಉತ್ಪನ್ನಗಳ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ (ಎಂಆರ್ಪಿ) ಪರಿಷ್ಕರಿಸಿದೆ.ಕೇವಲ ಒಂದು ವಾರದ ಹಿಂದಷ್ಟೇ ಕೆಎಂಎಫ್ ತನ್ನ ಜನಪ್ರಿಯ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ 8 ರಿಂದ 12 ರೂವರೆಗೂ ಹಾಗೂ ಮೊಸರಿನ ದರವನ್ನು ಪ್ರತಿ ಲೀಟರ್ಗೆ 14 ರೂ. ಹೆಚ್ಚಿಸಿತ್ತು.
ಪರಿಷ್ಕೃತ ದರಗಳ ವಿವರ:ನಂದಿನಿ ತುಪ್ಪದ 200 ಮಿ.ಲೀ. ಪ್ಯಾಕ್ಗೆ 95 ರೂ., 500 ಮಿ.ಲೀ. ಪ್ಯಾಕ್ಗೆ 425 ರೂ. ಹಾಗೂ ಒಂದು ಲೀಟರ್ ಪ್ಯಾಕ್ಗೆ 850 ರೂ. ನಿಗದಿಪಡಿಸಲಾಗಿದೆ.ಪಿಇಟಿ ಜಾರ್ನಲ್ಲಿನ ತುಪ್ಪದ ದರ 50 ಮಿ.ಲೀ.ಗೆ 65 ರೂ., 100 ಮಿ.ಲೀ.ಗೆ 100 ರೂ., 200 ಮಿ.ಲೀ.ಗೆ 180 ರೂ., 500 ಮಿ.ಲೀ.ಗೆ 435 ರೂ. ಹಾಗೂ ಒಂದು ಲೀಟರ್ಗೆ 870 ರೂ. ಆಗಿದೆ. ಐದು ಲೀಟರ್ ಪ್ಯಾಕ್ಗೆ 4,250 ರೂ. ನಿಗದಿಯಾಗಿದೆ.
ಒಂದು ಲೀಟರ್ ತುಪ್ಪದ ಟಿನ್ಗೆ 870 ರೂ. ಹಾಗೂ 15 ಕೆ.ಜಿ. ಟಿನ್ಗೆ 14,100 ರೂ. ದರ ನಿಗದಿಪಡಿಸಲಾಗಿದೆ.ಉಪ್ಪುಯುಕ್ತ ಬೆಣ್ಣೆಯ 100 ಗ್ರಾಂ ಪ್ಯಾಕ್ಗೆ 90 ರೂ. ಹಾಗೂ 500 ಗ್ರಾಂ ಪ್ಯಾಕ್ಗೆ 380 ರೂ. ದರ ನಿಗದಿಯಾಗಿದೆ. ಉಪ್ಪುರಹಿತ ಬೆಣ್ಣೆಯ 200 ಗ್ರಾಂ ಪ್ಯಾಕ್ಗೆ 160 ರೂ. ಹಾಗೂ 500 ಗ್ರಾಂ ಪ್ಯಾಕ್ಗೆ 390 ರೂ. ಆಗಿದ್ದು, ಬೆಣ್ಣೆಯ ಫ್ಯಾಮಿಲಿ ಪ್ಯಾಕ್ಗೆ 90 ರೂ. ನಿಗದಿಪಡಿಸಲಾಗಿದ್ದು, 10 ಗ್ರಾಂ ಬ್ಲಿಸ್ಟರ್ ಪ್ಯಾಕ್ನ ಪ್ರತಿ ಕೆ.ಜಿ. ದರ 900 ರೂ. ಆಗಿದೆ.
ನಂದಿನಿ ಪನೀರ್ನ 200 ಗ್ರಾಂ ಪ್ಯಾಕ್ಗೆ 115 ರೂ., 500 ಗ್ರಾಂಗೆ 260 ರೂ. ಹಾಗೂ ಒಂದು ಕೆ.ಜಿ.ಗೆ 485 ರೂ. ನಿಗದಿಪಡಿಸಲಾಗಿದೆ. ಮಧ್ಯಮ ಕೊಬ್ಬಿನಾಂಶದ 200 ಗ್ರಾಂ ಪನೀರ್ಗೆ 110 ರೂ. ದರ ನಿಗದಿಯಾಗಿದೆ.ಇನ್ನು ತೃಪ್ತಿ ಹಾಲಿನ 135 ಮಿ.ಲೀ. ಪ್ಯಾಕ್ಗೆ 11 ರೂ. ಹಾಗೂ 450 ಮಿ.ಲೀ. ಪ್ಯಾಕ್ಗೆ 33 ರೂ. ನಿಗದಿಪಡಿಸಲಾಗಿದೆ.
