Homeಜಿಲ್ಲಾ ಸುದ್ದಿಗಳುಡ್ರೋನ್‌ ಕಣ್ಣಿಗೆ ಬಿದ್ದ ನಾಲ್ಕು ಹುಲಿಗಳು, ಗ್ರಾಮಸ್ಥರಲ್ಲಿ ಆತಂಕ

ಡ್ರೋನ್‌ ಕಣ್ಣಿಗೆ ಬಿದ್ದ ನಾಲ್ಕು ಹುಲಿಗಳು, ಗ್ರಾಮಸ್ಥರಲ್ಲಿ ಆತಂಕ

ನಂಜನಗೂಡು,ನ.5- ನರಭಕ್ಷಕನ ಸೆರೆಗಾಗಿ ಅರಣ್ಯ ಇಲಾಖೆ ಕಾರ್ಯಾಚರಣೆ ಪ್ರಾರಂಭಿಸಿದ್ದು, ಡ್ರೋನ್‌ನಲ್ಲಿ ನಾಲ್ಕು ಹುಲಿಗಳು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ತಾಲ್ಲೂಕಿನ ಡೋರನಕಟ್ಟೆ ಕಾಲೋನಿ ಬಳಿ ಮಹಿಳಾ ಕುರಿಗಾಹಿಯನ್ನು ಹುಲಿ ಬಲಿಪಡೆದಿತ್ತು.

ಇದರಿಂದ ಆತಂಕಗೊಂಡ ಗ್ರಾಮಸ್ಥರು ಹುಲಿ ಸೆರೆಗಾಗಿ ಅರಣ್ಯ ಇಲಾಖೆಗೆ ಆಗ್ರಹಿಸಿದ್ದರು. ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆ ಸಿಬ್ಬಂದಿಗಳು ಡ್ರೋನ್‌ ಕ್ಯಾಮೆರಾ ಸಹಾಯದಿಂದ ಪತ್ತೆಕಾರ್ಯ ಕೈಗೊಂಡಿದ್ದರು. ಈ ವೇಳೆ ತಾಲ್ಲೂಕಿನ ಆಕಳ ಗ್ರಾಮದ ಬಳಿ ನಾಲ್ಕು ಹುಲಿಗಳು ಸಂಚರಿಸುತ್ತಿದ್ದ ದೃಶ್ಯ ಡ್ರೋನ್‌ ಕ್ಯಾಮೆರಾದಲ್ಲಿ ಪತ್ತೆಯಾಗಿದ್ದು ಸಿಬ್ಬಂದಿಗಳೇ ಹೌಹಾರಿದ್ದಾರೆ.

ಹುಲಿಗಳು ಎಲ್ಲಿಂದ ಬಂದು ಅಡಗಿಕೊಂಡಿವೆ. ಅವುಗಳ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದು, ಸೆರೆಗಾಗಿ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಗ್ರಾಮಸ್ಥರ ಸಹಕಾರಕ್ಕೆ ಮನವಿ ಮಾಡಿದ್ದಾರೆ. ಒಂದೇ ಪ್ರದೇಶದಲ್ಲಿ ನಾಲ್ಕು ಹುಲಿಗಳು ಪತ್ತೆಯಾಗಿವ.

RELATED ARTICLES

Latest News