ಕಾಬುಲ್, ಅ 15- ಅಫ್ಘಾನಿಸ್ತಾನದಲ್ಲಿ ಸುರಿದ ಭಾರಿ ಮಳೆಯಿಂದ ಉಂಟಾದ ಭಾರೀ ಪ್ರವಾಹದಿಂದ 33 ಜನರು ಸಾವನ್ನಪ್ಪಿದ್ದಾರೆ ಮತ್ತು 27 ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮೂರು ದಿನಗಳಿಂದ ರಾಜಧಾನಿ ಕಾಬೂಲ್ ಮತ್ತು ಹಲವಾರು ಪ್ರಾಂತ್ಯಗಳಲ್ಲಿ ವರ್ಷಧಾರೆಯಿಂದ ಹಠಾತ್ ಪ್ರವಾಹಗಳು ಸಂಭವಿಸಿವೆ ಎಂದು ನೈಸರ್ಗಿಕ ವಿಕೋಪ ನಿರ್ವಹಣೆಯ ರಾಜ್ಯ ಸಚಿವಾಲಯದ ತಾಲಿಬಾನ್ ವಕ್ತಾರ ಅಬ್ದುಲ್ಲಾ ಜನನ್ ಸೈಕ್ ಹೇಳಿದ್ದಾರೆ.
ಸುಮಾರು 200 ಜಾನುವಾರುಗಳು ಸತ್ತರೆ 600 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ ಎಂದು ಅವರು ಹೇಳಿದರು. ಪ್ರವಾಹವು ಸುಮಾರು 800 ಹೆಕ್ಟೇರ್ ಕೃಷಿ ಭೂಮಿಯನ್ನು ಮತ್ತು 85 ಕಿಲೋಮೀಟರ್ ) ಗಿಂತ ಹೆಚ್ಚು ರಸ್ತೆಗಳನ್ನು ಹಾನಿಗೊಳಿಸಿದೆ ಎಂದು ಸಾಯಿಕ್ ಹೇಳಿದರು.
ಪಶ್ಚಿಮ ಫರಾಹ್, ಹೆರಾತ್, ದಕ್ಷಿಣ ಝಬುಲ್ ಮತ್ತು ಕಂದಹಾರ್ ಅತಿ ಹೆಚ್ಚು ಹಾನಿಗೊಳಗಾದ ಪ್ರಾಂತ್ಯಗಳಲ್ಲಿ ಸೇರಿವೆ ಎಂದು ಅವರು ಹೇಳಿದರು.ಅಫ್ಘಾನಿಸ್ತಾನದ 34 ಪ್ರಾಂತ್ಯಗಳಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.