Saturday, June 22, 2024
Homeರಾಷ್ಟ್ರೀಯದೆಹಲಿಯ ನಡುರಸ್ತೆಯಲ್ಲಿ ಗುಂಡಿಕ್ಕಿ ಕ್ಯಾಬ್ ಚಾಲಕನ ಹತ್ಯೆ

ದೆಹಲಿಯ ನಡುರಸ್ತೆಯಲ್ಲಿ ಗುಂಡಿಕ್ಕಿ ಕ್ಯಾಬ್ ಚಾಲಕನ ಹತ್ಯೆ

ನವದೆಹಲಿ ,ಅ 15 –ನಡುರಸ್ತೆಯಲ್ಲಿ ನಡೆದ ಜಗಳದ ವೇಳೆ ಕ್ಯಾಬ್ ಚಾಲಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಇಂದು ಮುಂಜಾನೆ ಇಲ್ಲಿ ನಡೆದಿದೆ. ಅಂಗೂರಿ ಬಾಗ್‍ನ ಟ್ರಾಫಿಕ್ ಸಿಗ್ನಲ್ ಸಮೀಪ ಮಧ್ಯರಾತ್ರಿಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರಂಭದಲ್ಲಿ, ಕ್ಯಾಬ್ ಚಾಲಕ ಮತ್ತು ರಿಕ್ಷಾ ಸವಾರನ ನಡುವೆ ಮಾತಿನ ಚಕಮಕಿ ನಡೆದಿದೆ ಅಷ್ಟರಲ್ಲಿ, ಇಬ್ಬರು ಯುವಕರು ಸ್ಕೂಟರ್‍ನಲ್ಲಿ ಅಲ್ಲಿಗೆ ಬಂದು ಅವರಲ್ಲಿ ಒಬ್ಬರು ಕ್ಯಾಬ್ ಚಾಲಕನ ಮೇಲೆ ಗುಂಡು ಹಾರಿಸಿದರು.

ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ತಲ್ಷಣ ಚಾಲಕನನ್ನು ಹತ್ತಿರದ ಎಲ್‍ಎನ್‍ಜೆಪಿ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ವೈದ್ಯರು ಆತ ಸತ್ತಿದ್ದಾನೆ ಎಂದು ಘೋಷಿಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಆರಂಭಿಸಲಾಗಿದೆ ಮತ್ತು ಆರೋಪಿಯನ್ನು ಹಿಡಿಯಲು ತಂಡಗಳನ್ನು ರಚಿಸಲಾಗಿದೆ,ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

RELATED ARTICLES

Latest News