ನವದೆಹಲಿ,ನ.5- ನಾನು ಲಂಡನ್‌ನಿಂದ ಬಂದವನಲ್ಲ, ಹಳ್ಳಿಯವನು. ಶಿಕ್ಷಣದ ಮೂಲಭೂತ ಸೌಕರ್ಯಗಳು ಇಲ್ಲದಿರುವ ಶಾಲೆಯಲ್ಲಿ ವಿದ್ಯೆ ಕಲಿತವರು ನಾವು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ಗೃಹಸಚಿವ ಪ್ರಿಯಾಂಕ್ ಖರ್ಗೆಯವರಿಗೆ ತಿರುಗೇಟು ನೀಡಿದ್ದಾರೆ.
ನವದೆಹಲಿಯ ತಮ ನಿವಾಸದಲ್ಲಿ ಗೃಹಸಚಿವರೇ ನಾವು ಹಳ್ಳಿಯವರು.. ಏನಿವಾಗ? ಎಂಬ ಪೋಸ್ಟರ್ ಅನ್ನು ಟಿವಿ ಪರದೆಯಲ್ಲಿ ಹಾಕಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಳ್ಳಿಯವರನ್ನು ಗೃಹಸಚಿವರು ಗುಗ್ಗು ಎಂದು ಕರೆದಿರುವುದು ಅಗೌರವ. ನನ್ನನ್ನು ಹಳ್ಳಿಯ ಗುಗ್ಗು ಎಂದಿದ್ದಾರೆ. ಹಳ್ಳಿಯವನು ಎಂದು ಹೇಳಿಕೊಳ್ಳುವುದಕ್ಕೆ ನನಗೆ ಹೆಮೆ ಇದೆ.
ನನ್ನ ಬಗ್ಗೆ ಹೇಳಿದರೆ ಪರವಾಗಿಲ್ಲ. ಆದರೆ ಹಳ್ಳಿಗರ ಬಗ್ಗೆ ಹೇಳಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಿಮ ಹಳೆಯ ಇಲಾಖೆಯಲ್ಲಿ ತರಾತುರಿಯಲ್ಲಿ ಎಂಜಿನಿಯರ್‌ಗಳನ್ನು ಆಯ್ಕೆ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಿಮ ಮುಂದೆ ಇಟ್ಟಿರುವುದು ಈ ಹಳ್ಳಿಗುಗ್ಗು. ಆದರೆ ನೀವು ಒಪ್ಪಿಲ್ಲ. ಈ ಹಳ್ಳಿಗುಗ್ಗುಗಳಿಗೆ ಧ್ವನಿ ಕೊಟ್ಟಿದ್ದರೆ ಅದು ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್‌ರವರು. ಮಹಾತ ಗಾಂಧೀಜಿ ಹೇಳಿದಂತೆ ದೇಶದ ಆತ ಇರುವುದು ಹಳ್ಳಿಯಲ್ಲಿ ಎಂದು ತರಾಟೆಗೆ ತೆಗೆದುಕೊಂಡರು.
ಸ್ಟಿಂಗ್ ಆಪರೇಷನ್ ಆರೋಪದ ವಿಚಾರವನ್ನು ನೀವು ಕೂರುವ ಕುರ್ಚಿಯ ಕೆಳಗೆ ಇಟ್ಟುಕೊಂಡು ಕುಳಿತಿದ್ದೀರಿ ಗೃಹಸಚಿವರೇ ಎಂದು ಆರೋಪಿಸಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮವಾಸ್ತವ್ಯ ಮಾಡಿ ಗ್ರಾಮೀಣ ಜನರ ನೋವು ಕೇಳಿಕೊಂಡು ಬಂದಿದ್ದೇನೆ.
ಅಂಬೇಡ್ಕರ್‌ರವರು ಕೊಟ್ಟ ಮೀಸಲಾತಿಯಿಂದ ಬಂದ ನೀವು ಹಳ್ಳಿಯ ಜನರ ಜೊತೆ ನೀವು ಬಂದವರಲ್ಲ. ವಿಷಯ ಗೊತ್ತಾದರೂ ಆ ಹೆಣ್ಣುಮಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ?, ಯಾಕೆ ಇಷ್ಟು ದಿನ ಮುಚ್ಚಿಟ್ಟುಕೊಂಡು ಕುಳಿತಿದ್ದೀರಿ. ಹಳ್ಳಿಯ ರೈತರ ಬಗ್ಗೆ ಇರುವ ದುರಹಂಕಾರಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ವೋಟ್ ಚೋರಿ ಎಂಬುದು ಕಾಂಗ್ರೆಸ್‌ನ ಆಸ್ತಿ :
ವೋಟ್ ಚೋರಿ ಎಂಬುದು ಕಾಂಗ್ರೆಸ್‌ನ ಆಸ್ತಿ. ಅದು ಎನ್‌ಡಿಎ ಪಕ್ಷಕ್ಕಲ್ಲ. ಬರೀ ವೋಟ್ ಚೋರಿ ಅಲ್ಲ, ಹಲವು ಚೋರಿಗಳನ್ನು ಮಾಡಿರುವುದು ಕಾಂಗ್ರೆಸ್. ವೋಟ್ ಚೋರಿ ಎಂಬ ಪದ ಕಾಂಗ್ರೆಸ್‌ಗೆ ಶಾಶ್ವತ ಎಂದು ವ್ಯಂಗ್ಯವಾಡಿದರು.
ಹಾಲು ಹಾಗೂ ಹಾಲಿನ ಉತ್ಪನ್ನಗಳ ದರ ಹೆಚ್ಚಳ ಮಾಡಿ ಖಚಾನೆ ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ರೈತರ ಹೆಸರು ಹೇಳಿ ದರ ಹೆಚ್ಚಳ ಮಾಡಿದ್ದಾರೆ. ಕೆಎಂಎಫ್‌ನಿಂದ ಸರಬರಾಜಾಗುವ ಪಶು ಆಹಾರದ ಬೆಲೆ ಎಷ್ಟಿದೆ? ದರ ಏರಿಕೆಯಲ್ಲಿ ಕೆಎಂಎಫ್ ಪಾಲು ಎಷ್ಟು? ಬಸ್ ಪ್ರಯಾಣದರ ಹೆಚ್ಚಿಸಿದ್ದಾರೆ. 9 ಸಾವಿರ ಕೋಟಿ ರೂ. ಸಿಬ್ಬಂದಿಗೆ ಕೊಟ್ಟಿಲ್ಲ ಏಕೆ? ಶಕ್ತಿ ಯೋಜನೆ ಹಣವನ್ನು ಬಾಕಿ ಉಳಿಸಿಕೊಂಡಿದ್ದು ಏಕೆ? ಜನರಿಗೆ ಬೆಲೆ ಏರಿಕೆ ಹೊರೆ ಹಾಕಿ ಶಕ್ತಿ ಯೋಜನೆ ಕೊಡಲು ನೀವೇ ಬೇಕೆ? ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.
ಪೋಸ್ಟರ್ ಅಭಿಯಾನ :
ಪ್ರಿಯಾಂಕ್ ಖರ್ಗೆ ಅವರು ಕುಮಾರಸ್ವಾಮಿಯವರನ್ನು ಹಳ್ಳಿಗುಗ್ಗು ಎಂದು ಜರಿದ ಬೆನ್ನಲ್ಲೇ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ಬಾಬು, ಶಾಸಕರಾದ ಎಚ್.ಡಿ.ರೇವಣ್ಣ, ಎ.ಮಂಜು, ಸಿ.ಎನ್.ಬಾಲಕೃಷ್ಣ, ಜಿ.ಡಿ.ಹರೀಶ್‌ಗೌಡ, ವೆಂಕಟಶಿವಾರೆಡ್ಡಿ, ಎಂ.ಟಿ.ಕೃಷ್ಣಪ್ಪ, ಶಾರದ ಪೂರ್ಯ ನಾಯಕ್, ಎಸ್.ಎಲ್.ಬೋಜೇಗೌಡ, ಟಿ.ಎ.ಶರವಣ ಮೊದಲಾದವರು ಗೃಹಸಚಿವರೇ ನಾವು ಹಳ್ಳಿಗುಗ್ಗು ಏನಿವಾಗ? ಎಂಬ ಪೋಸ್ಟರ್ ಅಭಿಯಾನವನ್ನು ಆರಂಭಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ಬಂಡೆಪ್ಪ ಕಾಶಂಪೂರ್, ವೆಂಕಟರಾವ್ ನಾಡಗೌಡ ಉಪಸ್ಥಿತರಿದ್ದರು.
