Homeರಾಷ್ಟ್ರೀಯಎಥೆನಾಲ್‌ ಮಿಶ್ರಣ ಮಿತಿ ದಾಟಿಲ್ಲ : ತೈಲ ಕಂಪನಿಗಳ ಸ್ಪಷ್ಟನೆ

ಎಥೆನಾಲ್‌ ಮಿಶ್ರಣ ಮಿತಿ ದಾಟಿಲ್ಲ : ತೈಲ ಕಂಪನಿಗಳ ಸ್ಪಷ್ಟನೆ

ಬೆಂಗಳೂರು, ನ.7- ಕರ್ನಾಟಕದ ಕೆಲವು ಪೆಟ್ರೋಲ್‌ ಬಂಕ್‌ಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್‌ ಮಿಶ್ರಣ ಮಾಡಲಾಗುತ್ತಿದೆ ಎಂಬ ಆರೋಪಗಳನ್ನು ತೈಲ ಕಂಪನಿಗಳು ತಳ್ಳಿಹಾಕಿವೆ.

ಈ ಕುರಿತು ಸ್ಪಷ್ಟನೆ ನೀಡಿರುವ ಇಂಡಿಯನ್‌ ಆಯಿಲ್‌‍, ಹಿಂದೂಸ್ಥಾನ್‌ ಪೆಟ್ರೋಲಿಯಂ ಕಾರ್ಪೋರೇಷನ್‌ ಸಂಸ್ಥೆಗಳು ರಾಜ್ಯದ ಕೆಲವು ಪೆಟ್ರೋಲ್‌ ಬಂಕ್‌ಗಳಲ್ಲಿ ಇಪ್ಪತ್ತು ಪ್ರತಿಶತಕ್ಕಿಂತಲೂ ಹೆಚ್ಚು ಎಥೆನಾಲ್‌ ಮಿಶ್ರಣ ಮಾಡಲಾಗುತ್ತಿದೆ ಎಂಬ ಇತ್ತೀಚಿನ ಆರೋಪಗಳಿಗೆ ನಿಗದಿತ ಪರೀಕ್ಷಾ ವಿಧಾನಗಳ ಮೂಲಕ ನಡೆಸಿದ ತಪಾಸಣೆಯಲ್ಲಿ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ತಿಳಿಸಿದೆ.

ದೇಶದ 27 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 893 ಪೆಟ್ರೋಲ್‌ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ ಕರ್ನಾಟಕದ 56 ಮಾದರಿಗಳೂ ಸೇರಿವೆ. ಪರೀಕ್ಷೆಗೊಳಪಡಿಸಿದ ಎಲ್ಲ ಮಾದರಿಗಳಲ್ಲಿಯೂ ನಿಗದಿತ ಶೇಕಡಾ 19ರಿಂದ 21ರಷ್ಟು ಎಥನಾಲ್‌ ಪ್ರಮಾಣ ಇರುವುದು ದೃಢಪಟ್ಟಿದೆ ಎಂದು ಸಂಸ್ಥೆಗಳು ತಿಳಿಸಿವೆ.

ಈ ವಿಚಾರದಲ್ಲಿ ನೈಜಾಂಶವನ್ನು ಸ್ಪಷ್ಟಪಡಿಸಲು ಇಂಡಿಯನ್‌ ಆಯಿಲ್‌‍, ಭಾರತ್‌ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್‌ ಪೆಟ್ರೋಲಿಯಂ ಸಂಸ್ಥೆಗಳು ರಾಜ್ಯ ಸರ್ಕಾರದೊಂದಿಗೆ ಜಂಟಿಯಾಗಿ ಹಾಗೂ ಪಾರದರ್ಶಕವಾಗಿ ಮತ್ತೊಮೆ ಪರೀಕ್ಷೆ ನಡೆಸಲು ಮುಂದಾಗಿವೆ.

ಇಂಧನದ ಗುಣಮಟ್ಟ, ಪಾರದರ್ಶಕತೆ ಮತ್ತು ಗ್ರಾಹಕರ ವಿಶ್ವಾಸ ಕಾಪಾಡಲು ಸಂಸ್ಥೆಗಳು ಬದ್ಧವಾಗಿದೆ. ಗ್ರಾಹಕರು ಅಧಿಕೃತ ಮೂಲಗಳಿಂದ ದೃಢಪಟ್ಟ ಮಾಹಿತಿಯನ್ನಷ್ಟೇ ನಂಬಬೇಕು ಎಂದು ಮನವಿ ಮಾಡಿವೆ.ಭಾರತ್‌ ಪೆಟ್ರೋಲಿಯಂ ಈ ಬಗ್ಗೆ ಯಾವುದೇ ಪ್ರಕಟಣೆ ಅಥವಾ ಸ್ಪಷ್ಟನೆ ನೀಡಿಲ್ಲ.

RELATED ARTICLES

Latest News