Homeರಾಷ್ಟ್ರೀಯದೇವಿರಮ್ಮನ ಬೆಟ್ಟ ಏರುವಾಗಲೇ ಹೃದಯಾಘಾತವಾಗಿ ಯುವಕ ಸಾವು

ದೇವಿರಮ್ಮನ ಬೆಟ್ಟ ಏರುವಾಗಲೇ ಹೃದಯಾಘಾತವಾಗಿ ಯುವಕ ಸಾವು

ಚಿಕ್ಕಮಗಳೂರು, ನ.9- ಪಶ್ಚಿಮಘಟ್ಟದ ಪ್ರಸಿದ್ಧ ಶ್ರೀ ದೇವಿರಮ್ಮನ ಬೆಟ್ಟ ಹತ್ತುವ ವೇಳೆ ಹೃದಯಾಘಾತ ಸಂಭವಿಸಿ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಬೆಂಗಳೂರಿನ ಲಕ್ಷ್ಮಣ್‌ (35) ಎಂದು ಗುರುತಿಸಲಾಗಿದೆ. ಈ ಹಿಂದೆ ಅವರು ಹೃದಯಾಘಾತಕ್ಕೆ ಒಳಗಾಗಿ ಬೈಪಾಸ್‌‍ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು ಎನ್ನಲಾಗಿದೆ.
ಭಾನುವಾರ ದೇವಿರಮನ ದರ್ಶನಕ್ಕೆ ಕೊನೆಯ ದಿನವಾಗಿದ್ದರಿಂದ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಬೆಟ್ಟಕ್ಕೆ ಆಗಮಿಸಿದ್ದರು.

ಇದೇ ಸಂದರ್ಭದಲ್ಲಿ ದೇವಿಯ ದರ್ಶನ ಪಡೆಯಲು ಬೆಟ್ಟ ಹತ್ತುತ್ತಿದ್ದ ಲಕ್ಷ್ಮಣ್‌ ಅವರಿಗೆ ಮಾರ್ಗಮಧ್ಯೆ ಏಕಾಏಕಿ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದಿದ್ದಾರೆ. ತೀವ್ರ ಅಸ್ವಸ್ಥಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದೇವಿಯ ದರ್ಶನ ಪಡೆಯುವ ಆಸೆಯಿಂದ ಬೆಟ್ಟ ಏರಿದ್ದ ಯುವಕನ ಸಾವು ಭಕ್ತರಲ್ಲಿ ದುಃಖ ಮೂಡಿಸಿದೆ. ಮೃತದೇಹವನ್ನು ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

Latest News