ಡಾಕಾ, ನ.9- ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಡಿಸಂಬರ್ನಲ್ಲಿ ಭಾರತದಿಂದ ತಾಯ್ನಾಡಿಗೆ ಮರಳಲು ತೀರ್ಮಾನಿಸಿದ್ದಾರೆ.ಹೀಗಾಗಿ ಅವರು ಹೊಸ ಪಾಸ್ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿಗಾಗಿ ಮನವಿ ಮಾಡಿಕೊಂಡಿದ್ದಾರೆ.
ಡಿಸೆಂಬರ್ನಲ್ಲಿ ಅವರು ಭಾರತದಿಂದ ತಾಯ್ನಾಡಿಗೆ ಮರಳಲು ಅವರು ಯೋಜಿಸುತ್ತಿದ್ದು, ಈ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಆದರೆ, ಹಸೀನಾ ಅವರಿಗೆ ಪ್ರಯಾಣ ದಾಖಲೆಗಳನ್ನು ನೀಡುವ ಬದಲು, ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಬೇಕು ಎಂದು ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಹುಮಾಯೂನ್ ಕಬೀರ್ ಪ್ರತಿಪಾದಿಸಿದ್ದಾರೆ.
ನಾವು ಹಸೀನಾ ಅವರನ್ನು ನಮ ವಶಕ್ಕೆ ಪಡೆಯಲು ಬಯಸುತ್ತೇವೆ ಮತ್ತು ಅವರನ್ನು ನಮಗೆ ಹಸ್ತಾಂತರಿಸಲಾಗುತ್ತದೆ. ಅವರು ಒಬ್ಬ ಭಯೋತ್ಪಾದಕಿ ಮತ್ತು ಪರಾರಿಯಾದ ವ್ಯಕ್ತಿ. ಬಾಂಗ್ಲಾದೇಶ ಮತ್ತು ಭಾರತದ ನಡುವೆ ಅಪರಾಧಿಗಳ ಹಸ್ತಾಂತರ ಒಪ್ಪಂದ ಜಾರಿಯಲ್ಲಿದೆ, ಎಂದು ಕಬೀರ್ ಸುದ್ದಿಗಾರರಿಗೆ ತಿಳಿಸಿದ್ದಾರೆ ಎಂದು ಬಾಂಗ್ಲಾದೇಶದ ಸುದ್ದಿ ಜಾಲತಾಣ ದಿ ಡೈಲಿ ಸ್ಟಾರ್ ವರದಿ ಮಾಡಿದೆ.
ಪಾಸ್ಪೋರ್ಟ್ನ ಅಗತ್ಯವನ್ನೇ ತಳ್ಳಿಹಾಕಿದ ಅವರು, ಹಸೀನಾ ಅವರ ವಾಪಸಾತಿಯು ಅಸ್ತಿತ್ವದಲ್ಲಿರುವ ಹಸ್ತಾಂತರ ಪ್ರಕ್ರಿಯೆಯ ಮೂಲಕವೇ ನಡೆಯಬೇಕು ಎಂದು ಹೇಳಿದರು.ಹಸೀನಾ ಅವರ ಪರ ವಕೀಲರು ನವದೆಹಲಿಯಲ್ಲಿರುವ ಬಾಂಗ್ಲಾದೇಶದ ರಾಯಭಾರ ಕಚೇರಿಗೆ ಪತ್ರ ಬರೆದು, ಹೊಸ ಪ್ರಯಾಣ ಮತ್ತು ಗುರುತಿನ ದಾಖಲೆಗಳನ್ನು ಕೋರಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಪತ್ರವನ್ನು ಪರಿಶೀಲಿಸಿರುವ ಸುದ್ದಿ ಸಂಸ್ಥೆಯ ಪ್ರಕಾರ, 2024ರ ಆಗಸ್ಟ್ನಲ್ಲಿ ವಿದ್ಯಾರ್ಥಿಗಳ ನೇತೃತ್ವದ ಭೀಕರ ದಂಗೆಯ ನಂತರ ಬಾಂಗ್ಲಾದೇಶದಿಂದ ಪಲಾಯನ ಮಾಡಿ, ತಮ್ಮ 20 ವರ್ಷಗಳ ಆಳ್ವಿಕೆಯನ್ನು ಅಂತ್ಯಗೊಳಿಸಿಕೊಂಡ ಬಳಿಕ, ಹಸೀನಾ ಕಳುಹಿಸಿರುವ ಮೊದಲ ಅಧಿಕೃತ ಸಂವಹನ ಇದಾಗಿದೆ.
ಲಂಡನ್ ಮೂಲದ ಮ್ಯಾಟ್ರಿಕ್್ಸ ಚೇಂಬರ್ಸ್ನ ಅವರ ವಕೀಲರು, ದೆಹಲಿಯಲ್ಲಿರುವ ಬಾಂಗ್ಲಾದೇಶದ ರಾಯಭಾರ ಕಚೇರಿಯ ಹಂಗಾಮಿ ಹೈಕಮಿಷನರ್ ಪ್ರೀತಿ ರೆಹಮಾನ್ ಅವರಿಗೆ ಈ ಪತ್ರವನ್ನು ಕಳುಹಿಸಿದ್ದಾರೆ. ಹಸೀನಾ ಅವರು ಬಾಂಗ್ಲಾದೇಶದ ಪ್ರಜೆಯಾಗಿರುವುದರಿಂದ, ಅವರಿಗೆ ಹೊಸ ದಾಖಲೆಗಳನ್ನು ನೀಡಬೇಕೆಂದು ಈ ಪತ್ರದಲ್ಲಿ ಕೋರಲಾಗಿದೆ.
