Homeರಾಜ್ಯಶವಗಳನ್ನು ತುಂಬಲು ಆರ್‌ಎಂಸಿಯಾರ್ಡ್‌ನಲ್ಲಿ ಚೀಲಗಳನ್ನು ಖರೀದಿಸಿದ್ದ ಇಂದುಶೇಖರ್‌

ಶವಗಳನ್ನು ತುಂಬಲು ಆರ್‌ಎಂಸಿಯಾರ್ಡ್‌ನಲ್ಲಿ ಚೀಲಗಳನ್ನು ಖರೀದಿಸಿದ್ದ ಇಂದುಶೇಖರ್‌

ಬೆಂಗಳೂರು,ನ.9-ನರಹಂತಕ ಇಂದುಶೇಖರ್‌ ಪತ್ನಿ ಹಾಗೂ ಕುಟುಂಬದವರನ್ನು ಕೊಲೆ ಮಾಡಿದ ಬಳಿಕ ಶವಗಳನ್ನು ತುಂಬಲು ಚೀಲಗಳನ್ನು ಆರ್‌ಎಂಸಿಯಾರ್ಡ್‌ನಲ್ಲಿ ಖರೀದಿಸಿ ತಂದಿದ್ದ ಎಂಬ ಮಾಹಿತಿ ಉತ್ತರ ವಿಭಾಗ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಆರೋಪಿ ಇಂದುಶೇಖರ್‌ ಕೊಲೆ ಮಾಡಲು ಸಂಚು ರೂಪಿಸಿದ ಬೆನ್ನಲ್ಲೇ ಅದಕ್ಕೆ ಬೇಕಾಗುವ ನಿದ್ರೆ ಮಾತ್ರೆ, ಹಗ್ಗ, ಟೇಪ್‌, ಕವರ್‌ಗಳು ಮತ್ತು ರಾಸಾಯನಿಕ ವಸ್ತುಗಳನ್ನು ತನ್ನ ಮನೆಯ ಬಾಷ್ಯಂ ಸರ್ಕಲ್‌ ಸುತ್ತಮುತ್ತಲಿನ ಅಂಗಡಿಗಳಲ್ಲಿ ಖರೀದಿಸಿ ಸಂಗ್ರಹಿಸಿಟ್ಟುಕೊಂಡಿದ್ದ.

ವಿಚಾರಣೆ ವೇಳೆ ಆರೋಪಿ ಈ ಬಗ್ಗೆ ಬಾಯ್ಬಿಟ್ಟಿದ್ದು, ಅದರಂತೆ ತನಿಖೆಯ ಭಾಗವಾಗಿ ಪೊಲೀಸರು ಆ ಅಂಗಡಿಗಳಿಗೆ ಹೋಗಿ ಸಿಸಿ ಕ್ಯಾಮೆರಾದ ಡಿವಿಆರ್‌ ವಶಕ್ಕೆ ಪಡೆದು ಅಂಗಡಿಗಳ ಮಾಲೀಕರು ಹಾಗೂ ಸಿಬ್ಬಂದಿಯಿಂದ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದಾರೆ. ಗೋಣಿ ಚೀಲಗಳನ್ನು ಮಾತ್ರ ಯಶವಂತಪುರದ ಆರ್‌ಎಂಸಿ ಯಾರ್ಡ್‌ನಲ್ಲಿ ಖರೀಸಿದ್ದಾನೆ. ಕೊಲೆ ಮಾಡಿದ ಬಳಿಕ ರಕ್ತದ ವಾಸನೆ ಬಾರದಂತೆ ಶವವನ್ನು ತುಂಬಲು ನಾಲ್ಕು ಗೋಣಿ ಚೀಲಗಳನ್ನು ಒಂದರೊಳಗೊಂದು ಜೋಡಿಸಿಕೊಂಡಿದ್ದನು.

ಆರೋಪಿ ಬಾಡೂಟದ ನೆಪದಲ್ಲಿ ಒಬ್ಬೊಬ್ಬರನ್ನೇ ಮನೆಗೆ ಕರೆಸಿಕೊಂಡು ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿಕೊಟ್ಟು, ಅವರು ಪ್ರಜ್ಞೆ ಹೋದ ಬಳಿಕ ರುಬ್ಬು ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಬಾತ್‌ರೂಂ ಗೆ ಶವವನ್ನು ಹಾಕುತ್ತಿದ್ದನು.

ಒಬ್ಬೊಬ್ಬರ ಕೊಲೆ ಮಾಡಿದಾಗಲೂ ಶವವನ್ನು ಬಾತ್‌ರೂಂಗೆ ತೆಗೆದುಕೊಂಡು ಹೋಗಿ ಹಾಕಿ ರಕ್ತ ಪೂರ್ತಿ ಸೋರಿಕೆಯಾದ ನಂತರ ಟೇಪ್‌ನಿಂದ ಸುತ್ತಿ ಹಗ್ಗದಿಂದ ಶವಗಳನ್ನು ಬಿಗಿಯಾಗಿ ಕಟ್ಟಿ ಚೀಲದಲ್ಲಿ ತುಂಬಿ ಕಾರಿನಲ್ಲಿ ಹಾಕಿಕೊಂಡು ಹೋಗಿ ದೂರದ ದಟ್ಟ ಅರಣ್ಯ ಪ್ರದೇಶಗಳಲ್ಲಿ ಎಸೆದು ಬರುತ್ತಿದ್ದ ಈ ಪಾಪಿ ನರಹಂತಕ ಇಂದುಶೇಖರ್‌.

RELATED ARTICLES

Latest News