ನವದೆಹಲಿ,ಏ.20- ಕಣಿವೆ ರಾಜ್ಯ ಜಮ್ಮುಕಾಶ್ಮೀರದಲ್ಲಿ ಈಗ ಯಾರೊಬ್ಬರಿಗೂ ಕಲ್ಲು ಎಸೆಯುವ ಧೈರ್ಯ ಇಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಮಾತನಾಡಿರುವ ಅವರು, 370 ನೇ ವಿಧಿಯನ್ನು ತೆಗೆದುಹಾಕುವುದರಿಂದ ಕಾಶ್ಮೀರದಲ್ಲಿ ಪ್ರಕ್ಷುಬ್ಧತೆ ಉಂಟಾಗುತ್ತದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಸ್ಮರಿಸಿ ತರಾಟೆಗೆ ತೆಗೆದುಕೊಂಡರು.
ಕಾಶ್ಮೀರದಲ್ಲಿ (ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥ) ಮೆಹಬೂಬಾ ಮುಫ್ತಿ ಮತ್ತು (ಕಾಂಗ್ರೆಸ್ ನಾಯಕ) ರಾಹುಲ್ ಬಾಬಾ (ಗಾಂಧಿ) ಅವರು ಆರ್ಟಿಕಲ್ 370 ಅನ್ನು ತೆಗೆದುಹಾಕಿದ ನಂತರ ಇಲ್ಲಿ ರಕ್ತಪಾತವಾಗುತ್ತದೆ ಎಂದು ಹೇಳುತ್ತಿದ್ದರು.
ರಾಹುಲ್ ಬಾಬಾ, ಐದು ವರ್ಷಗಳು ಕಳೆದಿವೆ (ಆರ್ಟಿಕಲ್ 370 ರದ್ದತಿಯಿಂದ). ಇದು ಪ್ರಧಾನಿ ನರೇಂದ್ರಮೋದಿಯವರ ಸರ್ಕಾರ. ರಕ್ತಪಾತದ ಮಾತು ಬಿಡಿ, ಅಲ್ಲಿ ಕಲ್ಲು ಎಸೆಯುವ ಧೈರ್ಯ ಯಾರಿಗೂ ಇಲ್ಲ ಎಂದು ಕಿಡಿಕಾರಿದರು.