Saturday, November 23, 2024
Homeರಾಜ್ಯಗದಗದಲ್ಲಿ ನಾಲ್ವರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್..!

ಗದಗದಲ್ಲಿ ನಾಲ್ವರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್..!

ಬೆಂಗಳೂರು,ಏ.20- ಗದಗ ನಗರದ ದಾಸರ ಓಣಿಯಲ್ಲಿ ನಿವಾಸಿ ನಗರಸಭಾ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಸೇರಿದಂತೆ ನಾಲ್ವರನ್ನು ಸುಫಾರಿ ಹಂತಕರು ಕೊಲೆ ಮಾಡಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಈ ಸುಫಾರಿ ಹಂತಕರು ಯಾರು? ಇವರಿಗೆ ಯಾರು ಸುಫಾರಿ ಕೊಟ್ಟರು? ಯಾವ ಕಾರಣಕ್ಕಾಗಿ ಸುಫಾರಿ ಕೊಟ್ಟಿದ್ದಾರೆ ಎಂಬ ಬಗ್ಗೆ ಗದಗ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇಷ್ಟೊಂದು ಕ್ರೂರವಾಗಿ ಕೊಲೆ ಮಾಡಿರುವುದು ಗಮನಿಸಿ ದರೆ ಇದು ಸುಫಾರಿಹಂತಕರೇ ಈ ಕೃತ್ಯ ಎಸಗಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಕೌಟುಂಬಿಕ ವೈಷಮ್ಯ ಅಥವಾ ಆಸ್ತಿ ವಿಚಾರದಲ್ಲಿ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಆ ನಿಟ್ಟಿನಲ್ಲಿ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

ಆರೋಪಿಗಳ ಬಂಧನಕ್ಕೆ ಈಗಾಗಲೇ ಐದು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಒಂದು ತಂಡ ಕೊಪ್ಪಳಕ್ಕೆ ಹೋಗಿ ಪರಶುರಾಮ ಕುಟುಂಬದ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಪರಶುರಾಮ ಅವರು ಕೊಪ್ಪಳದ ಭಾಗ್ಯನಗರದ ನಿವಾಸಿಗಳಾಗಿದ್ದು, ನಗರಸಭೆ ಸದಸ್ಯೆ ಸುನಂದಾ ಅವರ ಪುತ್ರ ಕಾರ್ತಿಕ್ ಪುತ್ರ ಕಾರ್ತಿಕ್ ನಿಶ್ಚಿತಾರ್ಥ ನಿಮಿತ್ತ ಏ.17ರಂದು ಇವರ ಮನೆಗೆ ಬಂದಿದ್ದರು.

ಮೊನ್ನೆ ಪರಶುರಾಮ ಅವರ ಪತ್ನಿ ಲಕ್ಷ್ಮಿ ಅವರ ಹುಟ್ಟಹಬ್ಬವಿದುದ್ದರಿಂದ ಅಂದು ರಾತ್ರಿ ಕುಟುಂಬದವರೆಲ್ಲ ಸಂತೋಷದಿಂದ ಹುಟ್ಟಹಬ್ಬ ಆಚರಿಸಿ ಗಾಢ ನಿದ್ರೆಗೆ ಜಾರಿದ್ದರು. ಬೆಳಗಾಗುವಷ್ಟರಲ್ಲಿ ದುಷ್ಕರ್ಮಿಗಳು ಇವರ ಮನೆಗೆ ಹಿಂಭಾಗದ ಕಿಟಕಿ, ಗಾಜು ಒಡೆದು ಆ ಮೂಲಕ ಒಳನುಗ್ಗಿದ್ದಾರೆ.

ಪರಶುರಾಮ್ ಕುಟುಂಬ ಮೊದಲು ದುಷ್ಕರ್ಮಿಗಳ ಕಣ್ಣಿಗೆ ಬಿದ್ದಿದ್ದು, ಪರಶುರಾಮ್, ಇವರ ಪತ್ನಿ ಹಾದಿಮನಿ, ಪುತ್ರಿ ಆಕಾಂಕ್ಷಾ ಅವರನ್ನು ಮಾರಕಾಸ್ತ್ರಗಳಿಂದ ಕುತ್ತಿಗೆ ಕೊಯ್ದ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಅಷ್ಟಕ್ಕೆ ತಮ್ಮ ಕ್ರೌರ್ಯ ನಿಲ್ಲಿಸದೆ ನಿದ್ದೆಗಣ್ಣಿನಿಂದಲೇ ಎದ್ದುಬಂದ ಕಾರ್ತಿಕ್ ಅವರ ಮೇಲೂ ಮಚ್ಚು ಬೀಸಿ ಕೊಲೆ ಮಾಡಿ ನಂತರ ಸುನಂದಾ ಅವರ ಕೊಠಡಿ ಬಳಿ ಹೋಗಿ ಬಾಗಿಲು ತಟ್ಟಿದ್ದು, ಎಷ್ಟು ಹೊತ್ತಾದರೂ ಬಾಗಿಲು ತೆಗೆಯದಿದ್ದಾಗ ತಾವು ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಒಂದು ವೇಳೆ ಸುನಂದಾ ಅವರು ಕೊಠಡಿ ಬಾಗಿಲು ತೆಗೆದಿದ್ದರೆ ಅವರನ್ನೂ ಸಹ ಕೊಲೆ ಮಾಡುವ ಸಾಧ್ಯತೆಯಿತ್ತು.ಇಷ್ಟೊಂದು ಭೀಕರವಾಗಿ ಕುಟುಂಬ ಸದಸ್ಯರನ್ನು ಹತ್ಯೆ ಮಾಡಿರುವುದ ಗಮನಿಸಿದರೆ ಇದು ಹಣ, ಆಭರಣಕ್ಕಾಗಿ ನಡೆದಿರುವುದಲ್ಲ ಎಂಬುದು ಗೊತ್ತಾಗುತ್ತಿದೆ. ಕೊಲೆಯಾದವರ ಮೈಮೇಲಿದ್ದ ಆಭರಣಗಳು ಹಾಗೆಯೇ ಇವೆ. ಹಾಗಾಗಿ ಇದು ಲಾಭಕ್ಕಾಗಿ ನಡೆದಿರುವುದಲ್ಲ ಎಂಬುದು ಕಂಡುಬಂದಿದೆ.

ಗದಗ ಪಟ್ಟಣ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸುನಂದಾ ಅವರ ಮನೆಯ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿಟಿವಿಗಳನ್ನು ಪರಿಶೀಲಿಸಿ ಅದರಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಆಧರಿಸಿ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ನೀರವ ಮೌನ: ನಗಸಬಾ ಸದಸ್ಯೆ ಸುನಂದಾ ಅವರ ಮನೆಯಲ್ಲಿ ನೀರವ ಮೌನ ಆವರಿಸಿದೆ. ಪುತ್ರ ಹಾಗೂ ಸಂಬಂಕರನ್ನು ಕಳೆದುಕೊಂಡ ಮದುವೆ ಮನೆ ಸ್ಮಶಾನದಂತೆ ಮೌನವಾಗಿದೆ.

RELATED ARTICLES

Latest News