Homeರಾಜಕೀಯಹಿರಿಯೂರು ಉಪಚುನಾವಣೆ ಟಿಕೆಟ್‌ಗಾಗಿ ಬಿಜೆಪಿ-ಜೆಡಿಎಸ್ ಹೊಡೆದಾದಲ್ಲ : ಆರ್‌.ಅಶೋಕ್‌

ಹಿರಿಯೂರು ಉಪಚುನಾವಣೆ ಟಿಕೆಟ್‌ಗಾಗಿ ಬಿಜೆಪಿ-ಜೆಡಿಎಸ್ ಹೊಡೆದಾದಲ್ಲ : ಆರ್‌.ಅಶೋಕ್‌

ಬೆಂಗಳೂರು,ನ.16- ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ಜಿಬಿಎ ಚುನಾವಣೆಯಲ್ಲಿಯೂ ಬಿಜೆಪಿಗೆ ಗೆಲುವು ಸಿಗಲಿದೆ. ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿಗೆ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯೂರು ಉಪಚುನಾವಣೆ ಟಿಕೆಟ್‌ ಹಂಚಿಕೆ ವಿಚಾರವಾಗಿಯೂ ಆರ್‌. ಅಶೋಕ್‌ ಪ್ರತಿಕ್ರಿಯಿಸಿದರು. ಜೆಡಿಎಸ್‌‍ನವರಿಗೆ ಟಿಕೆಟ್‌ ಕೇಳುವ ಅಧಿಕಾರವಿರುವಂತೆ ಬಿಜೆಪಿಗೂ ಟಿಕೆಟ್‌ ಕೇಳುವ ಅಧಿಕಾರವಿದೆ. ಬಿಜೆಪಿ ಈಗಾಗಲೇ ಹಿರಿಯೂರು ಕ್ಷೇತ್ರವನ್ನು ಗೆದ್ದಿದೆ. ಆದರೆ ಟಿಕೆಟ್‌ಗಾಗಿ ಎರಡೂ ಪಕ್ಷಗಳು ಹೊಡೆದಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಒಂದು ರೂಂನಲ್ಲಿ ಕೂತು ಚರ್ಚೆ ಮಾಡುತ್ತೇವೆ. ನಾವು ಟಿಕೆಟ್‌ ಕೇಳುತ್ತಿರುವುದು ನಿಜ. ನಮ ಪಾರ್ಟ್ನರ್‌ ಅನ್ನು ಮನವೊಲಿಸುತ್ತೇವೆ. ಟಿಕೆಟ್‌ಗಾಗಿ ಹೊಡೆದಾಟ ಮಾಡುವುದಿಲ್ಲ, ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಹಿರಿಯೂರು ಕ್ಷೇತ್ರದ ಕಳೆದ 15 ವರ್ಷಗಳ ಸಮೀಕ್ಷೆ ಮಾಡೋಣ. ಯಾವ ಪಕ್ಷಕ್ಕೆ ಎಷ್ಟು ಮತ ಬಂದಿದೆ ಎಂಬುದನ್ನು ನೋಡೋಣ. ಅಂತಿಮವಾಗಿ ಹೈಕಮಾಂಡ್‌ ತೀರ್ಮಾನ ಮಾಡಲಿದೆ ಎಂದರು. ನಾವು ಹಠ ಹಿಡಿಯಲ್ಲ, ಚಂಡಿ ಹಿಡಿಯಲ್ಲ. ಸಮನ್ವಯ ಸಮಿತಿ ಶೀಘ್ರದಲ್ಲೇ ರಚನೆಯಾಗಲಿದೆ. ಸಮನ್ವಯ ಸಮಿತಿಯಲ್ಲಿ ಜೆಡಿಎಸ್‌‍ನಿಂದ ಯಾರಿರಬೇಕು ಎಂಬ ಲಿಸ್ಟ್‌ ಕೇಳಿದ್ದೇವೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದು ಅಶೋಕ್‌ ಹೇಳಿದರು.

ನೂತನ ವಿಧಾನ ಪರಿಷತ್‌ ಸದಸ್ಯರ ಪ್ರಮಾಣ ವಚನ ಸ್ವೀಕಾರದ ವಿಚಾರವಾಗಿ ಮಾತನಾಡಿದ ಅವರು, ಪರಿಷತ್‌ ಚುನಾವಣೆಯ ಫಲಿತಾಂಶವನ್ನು ಬಿಜೆಪಿ ಪಾಲಿನ ದಿಗ್ವಿಜಯ ಎಂದು ಬಣ್ಣಿಸಿದರು. ಯಾವುದೇ ಚುನಾವಣೆ ನಡೆದರೂ ಆಡಳಿತ ಪಕ್ಷ ಕನಿಷ್ಠ ಒಂದು ಸ್ಥಾನವನ್ನಾ ದರೂ ಗೆಲ್ಲಬೇಕಿತ್ತು. ಆದರೆ ನಮಗೆ ನಾಲ್ಕು ಸ್ಥಾನಗಳಲ್ಲಿ ಗೆಲುವಾಗಿದೆ. ಈಗ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಇಬ್ಬರೂ ದೆಹಲಿಗೆ ಹೋಗುತ್ತಿದ್ದಾರೆ. ಜೀರೋ ಮಾರ್ಕ್ಸ್ ತೆಗೆದುಕೊಂಡು ದೆಹಲಿಗೆ ಹೋಗುತ್ತಿದ್ದಾರೆ. ಅಲ್ಲಿ ಅವರ ಪೋಷಕರಿಂದ ಕಪಾಳಮೋಕ್ಷ ಆಗುತ್ತದೆ ಎಂದು ವ್ಯಂಗ್ಯವಾಡಿದರು.

RELATED ARTICLES

Latest News