ಟೊರೊಂಟೊ, ಅ 22 –ಭಾರತದ 17 ವರ್ಷದ ಗ್ರ್ಯಾಂಡ್‍ಮಾಸ್ಟರ್ ಡಿ ಗುಕೇಶ್ ಇಲ್ಲಿ ನಡೆದ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಮೆಂಟ್ ಅನ್ನು ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ.ವಿಶ್ವ ಪ್ರಶಸ್ತಿಗೆ ಅತ್ಯಂತ ಕಿರಿಯ ಚೆಸ್ ಸ್ಪರ್ಧಿ ಎಂಬ ಕೀರ್ತಿಗಳಿಸಿದ್ದಾರೆ.ಈ ವರ್ಷದ ಕೊನೆಯಲ್ಲಿ ನಡೆಯುವ ವಿಶ್ವ ಚಾಂಪಿಯನ್‍ಷಿಪ್‍ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಎದುರಿಸಲಿದ್ದಾರೆ.
ಅಮೆರಿಕದ ಹಿಕರು ನಕಮುರಾ ವಿರುದ್ಧ ಅಂತಿಮ ಸುತ್ತಿನ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದು ನಂತರ ಗುಕೇಶ್ ಒಟ್ಟು 14 ಅಂಕಗಳಲ್ಲಿ ಒಂಬತ್ತು ಅಂಕಗಳನ್ನು ಸಂಗ್ರಹಿಸಿ ಮೊದಲ ಸ್ಥಾನ ಪಡೆದರು. ತನ್ಮೂಲಕ ರಷ್ಯಾದ ಗ್ಯಾರಿ ಕ್ಯಾಸ್ಪರೋವ್ ಅವರ ಅತಿ ಕಿರಿಯ ವಯಸ್ಸಿನ ವಿಶ್ವದಾಖಲೆಯನ್ನು ಬಹಳಷ್ಟು ಅಂತರದಿಂದ ಉತ್ತಮಪಡಿಸಿದರು. 1984ರಲ್ಲಿ ಸ್ವದೇಶದ ಅನಾತೋಲಿ ಕಾರ್ಪೋವ್ ಅವರ ವಿರುದ್ಧ ಸೆಣಸುವ ಅರ್ಹತೆ ಪಡೆದಾಗ ಕ್ಯಾಸ್ಪರೋವ್ ಅವರಿಗೆ 22 ವರ್ಷಗಳಾಗಿದ್ದವು.
ವಿಶ್ವ ಶ್ರೇಷ್ಠ ಚೆಸ್ ಪಟು ವಿಶ್ವನಾಥನ್ ಆನಂದ್ ನಂತರ ಡಿ ಗುಕೇಶ್ ಈ ಸಾಧನೆ ಮಾಡಿದ ಎರಡನೇ ಭಾರತೀಯರಾದರು. ಐದು ಬಾರಿಯ ವಿಶ್ವ ಚಾಂಪಿಯನ್ ಆನಂದ್ ಗುಕೇಶ್ ಅವರನ್ನು ಅಭಿನಂದಿಸಿದ್ದಾರೆ.
ನಿಮ್ಮ ಸಾಧನೆಗೆ ನಿಮ್ಮ ಕುಟುಂಬ ,ದೇಶ ತುಂಬಾ ಹೆಮ್ಮೆಪಡುತ್ತದೆ. ನೀವು ಹೇಗೆ ಆಡಿದ್ದೀರಿ ಮತ್ತು ಕಠಿಣ ಸನ್ನಿವೇಶಗಳನ್ನು ನಿಭಾಯಿಸಿದ್ದೀರಿ ಎಂಬುದರ ಬಗ್ಗೆ ನನಗೆ ವೈಯಕ್ತಿಕವಾಗಿ ತುಂಬಾ ಹೆಮ್ಮೆ ಇದೆ. ಈ ಕ್ಷಣವನ್ನು ಆನಂದಿಸಿ ಎಂದು ಆನಂದ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತದ ಆಟಗಾರನಿಗೆ ರಷ್ಯಾದ ಇಯಾನ್ ನೆಪೊಮ್ನಿಯಾಚ್ಚಿ ಮತ್ತು ಅಗ್ರ ಶ್ರೇಯಾಂಕದ ಅಮೆರಿಕದ ಫ್ಯಾಬಿಯಾನೊ ಕರುವಾನಾ ನಡುವಿನ ಕೊನೆಯ ಪಂದ್ಯವು ಡ್ರಾದಲ್ಲಿ ಕೊನೆಗೊಳ್ಳುವ ಅಗತ್ಯವಿತ್ತು, ಅದೇ ರೀತಿಯಾಗಿದೆ.ಈ ಇಬ್ಬರು ಆಟಗಾರರಲ್ಲಿ ಯಾರಾದರೂ ಗೆದ್ದಿದ್ದರೆ, ಪಂದ್ಯಾವಳಿಗೆ ಟೈ-ಬ್ರೇಕರ್ ಅಗತ್ಯವಿತ್ತು, ಏಕೆಂದರೆ ಗುಕೇಶ್ ಮತ್ತು ವಿಜೇತರು ಜಂಟಿ ಮುನ್ನಡೆಯಲ್ಲಿ ಕೊನೆಗೊಳ್ಳುತ್ತಿದ್ದರು.
ಕಳೆದ ವರ್ಷ ಹ್ಯಾಂಗ್‍ಝೌ ಏಷ್ಯನ್ ಗೇಮ್ಸ್‍ನಲ್ಲಿ ಗುಕೇಶ್ ಬೆಳ್ಳಿ ಪದಕ ಗೆದ್ದಿದ್ದರು. ಪ್ರಸ್ತುತ ವಿಶ್ವ ಚಾಂಪಿಯನ್‍ಶಿಪ್‍ನ ದಿನಾಂಕ ಮತ್ತು ಸ್ಥಳವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಇದೇ ವೇಳೆ ಮಹಿಳಾ ವಿಭಾಗದಲ್ಲಿ ಭಾರತದ ಗ್ರ್ಯಾಂಡ್‍ಮಾಸ್ಟರ್ ಕೊನೇರು ಹಂಪಿ ಅವರು ಚೀನಾದ ಟಿಂಗ್‍ಜಿ ಲೀ ಅವರನ್ನು ಸೋಲಿಸಿ ಎರಡನೇ ಸ್ಥಾನವನ್ನು ಗಳಿಸಿದರು.
ಉಕ್ರೇನ್‍ನ ಅನ್ನಾ ಮುಜಿಚುಕ್ ಅವರೊಂದಿಗೆ ಡ್ರಾ ಸಾಸಿದ ನಂತರ ಚೀನಾದ ಝೊಂಗಿ ಟಾನ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.ಟೈಬ್ರೇಕರ್‍ನಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೊದಲು ಎರಡನೇ ಸ್ಥಾನಕ್ಕೆ ಟೈ ಮಾಡಲು ರಷ್ಯಾದ ಕಟೆರಿನಾ ಲಗ್ನೋ ಅವರ ಎದುರು ಆರ್ ವೈಶಾಲಿ ತನ್ನ ಐದನೇ ಜಯ ಗಳಿಸಿದರು.