Saturday, November 23, 2024
Homeಅಂತಾರಾಷ್ಟ್ರೀಯ | Internationalಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡ ಕೆನಡಾ ಪ್ರಧಾನಿ ಟ್ರುಡೊ

ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡ ಕೆನಡಾ ಪ್ರಧಾನಿ ಟ್ರುಡೊ

ನವದೆಹಲಿ,ಸೆ.25- ಭಾರತದ ವಿರುದ್ಧ ಸುಳ್ಳು ಆರೋಪ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಸಿಲುಕಿರುವ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇದೀಗ ಮತ್ತೊಂದು ಮುಜಗರಕ್ಕೀಡಾಗಿದ್ದಾರೆ. ಯುರೋಸ್ಲಾವ್ ಹುಂಕಾ ಎಂಬ ನಾಜಿ ಸೈನಿಕನನ್ನು ಕೆನಡಾ ಹೌಸ್ ಆಫ್ ಕಾಮನ್ಸ್‍ಗೆ ಆಹ್ವಾನಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಜಸ್ಟಿನ್ ಟ್ರುಡೊ ಮತ್ತು ಝೆಲೆನ್ಸ್ಕಿ ಯಾರೋಸ್ಲಾವ್ ಹುಂಕಾಗೆ ನಿಂತು ಗೌರವ ಸಲ್ಲಿಸಿದ್ದಾರೆ. ಇದಕ್ಕೆ ಕೆನಡಾದ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2ನೇ ಮಹಾಯುದ್ಧದಲ್ಲಿ ರಷ್ಯಾದ ವಿರುದ್ಧ ಹೋರಾಟ ನಡೆಸಿದ ಯುರೋಸ್ಲಾವ್ ಹುಂಕಾನಿಗೆ ಹೌಸ್ ಆಫ್ ಕಾಮನ್ಸ್‍ಗೆ ಆಗಮಿಸಿ ಗೌರವ ಸೂಚಿಸುವ ಅಗತ್ಯವಾದರೂ ಏನಿತು ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.

ದಲಿತ ಮಹಿಳೆಯನ್ನು ನಗ್ನಗೊಳಿಸಿ, ಬಾಯಿಗೆ ಮೂತ್ರ ವಿಸರ್ಜನೆ ಮಾಡಿ ಕ್ರೌರ್ಯ

ಹೀಗೆ ಸಾರ್ವಜನಿಕರ ಆಕ್ರೋಶದಿಂದ ಮುಜುಗರಕ್ಕೆ ಸಿಲುಕಿದ ಪ್ರಧಾನಿ ಜಸ್ಟಿನ್ ಟ್ರುಡೊ ನನಗೆ ಅವರ (ಯುರೋಸ್ಲಾವ್ ಹುಂಕಾ) ಹಿನ್ನಲೆ ಬಗ್ಗೆ ಗೊತ್ತಿರಲಿಲ್ಲ ಎಂದು ವಿವಾದವನ್ನು ಶಮನ ಮಾಡುವ ಪ್ರಯತ್ನ ಮಾಡಿದ್ದಾರೆ.

ಯುರೋಸ್ಲಾವ್ ಹುಂಕಾ ಎರಡನೇ ವಿಶ್ವಯುದ್ಧದ ಸಮಯದಲ್ಲಿ ರಷ್ಯಾದ ವಿರುದ್ಧ ಹೋರಾಟ ನಡೆಸಿದ್ದ ಸೈನಿಕ. ಕೆನಡಾ ದಶಕಗಳಿಂದ ಭಯೋತ್ಪಾದಕರು ಮತ್ತು ನಾಜಿಗಳಿಗೆ ಸುರಕ್ಷಿತ ಸ್ವರ್ಗವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಈ ಪ್ರಕರಣವನ್ನು ವಿಶ್ವಸಂಸ್ಥೆ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ.

ಇತ್ತೀಚೆಗಷ್ಟೇ ಕೆನಡಾದಲ್ಲಿ ಹತ್ಯೆಗೀಡಾದ ಹರ್ದೀಪ್ ಸಿಂಗ್ ನಿಜ್ಜರ್ ಪ್ರಕರಣದಲ್ಲಿ ಭಾರತದ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಸಾಲದಕ್ಕೆ ಕೆನಡಾದಲ್ಲಿರುವ ಭಾರತದ ರಾಯಭಾರಿ ಅಧಿಕಾರಿಯನ್ನು ಅಮಾನತುಗೊಳಿಸಿದ್ದರು. ಇದಕ್ಕೆ ತಿರುಗೇಟು ಕೊಟ್ಟಿದ್ದ ಭಾರತ, ನವದೆಹಲಿಯಲ್ಲಿರುವ ಕೆನಡಾ ರಾಯಭಾರಿಯನ್ನು ತತಕ್ಷಣವೇ ದೇಶ ಬಿಟ್ಟು ಹೋಗುವುದು, ರಾಯಭಾರಿ ಕಚೇರಿ ಸಿಬ್ಬಂದಿ ಕಡಿತ ಹಾಗೂ ಕೆನಡಾದ ವೀಸಾವನ್ನು ಸಹ ರದ್ದು ಮಾಡಿತ್ತು.

ಉಭಯ ರಾಷ್ಟ್ರಗಳ ನಡುವೆ ಉಂಟಾಗಿರುವ ಬಿಕ್ಕಟ್ಟು ಅಂತಾರಾಷ್ಟ್ರೀಯ ಮಟ್ಟಕ್ಕೂ ತಲುಪಿದೆ. ಅಮೆರಿಕ, ಬ್ರಿಟನ್, ಜಪಾನ್ ಮತ್ತಿತರ ರಾಷ್ಟ್ರಗಳು ಸಮಸ್ಯೆಯನ್ನು ರಾಜತಾಂತ್ರಿಕ ಮಾರ್ಗದ ಮೂಲಕ ಪರಿಹರಿಸಿಕೊಳ್ಳುವಂತೆ ಸಲಹೆ ಕೊಟ್ಟಿವೆ.

RELATED ARTICLES

Latest News