Friday, November 22, 2024
Homeರಾಜ್ಯತಲೆಮರೆಸಿಕೊಂಡ ಭವಾನಿ ರೇವಣ್ಣ ಅವರಿಗಾಗಿ ಹುಡುಕಾಟ ನಡೆದಿದೆ : ಪರಮೇಶ್ವರ್‌

ತಲೆಮರೆಸಿಕೊಂಡ ಭವಾನಿ ರೇವಣ್ಣ ಅವರಿಗಾಗಿ ಹುಡುಕಾಟ ನಡೆದಿದೆ : ಪರಮೇಶ್ವರ್‌

ಬೆಂಗಳೂರು, ಜೂ.2- ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಪತ್ನಿ ಭವಾನಿ ಅವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಹುಡುಕಾಟ ನಡೆದಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭವನಾ ರೇವಣ್ಣ ಅವರನ್ನು ಬಂಧಿಸುವುದಕ್ಕಾಗಿಯೇ ಹುಡುಕಾಡಲಾಗುತ್ತಿದೆ. ಅವರು ಸಿಕ್ಕ ತಕ್ಷಣ ಕಾನೂನು ಪ್ರಕ್ರಿಯೆಗಳನ್ನು ಮುಂದುವರೆಸಲಾಗುವುದು. ಈವರೆಗೂ ಅವರು ಎಲ್ಲಿದ್ದಾರೆ ಎಂದು ಗೊತ್ತಿಲ್ಲ. ತಪ್ಪಿಸಿಕೊಂಡಿದ್ದಾರೆ. ಅರವಾಗಿಯೇ ಬಂದರೆ ಅಥವಾ ಹುಡುಕಿದಾಗ ಸಿಕ್ಕರೆ ಬಂಧಿಸುವುದು ಖಚಿತ ಎಂದರು.

ಚುನಾವಣೋತ್ತರ ಸಮೀಕ್ಷೆ ವಿಶ್ವಾಸಾರ್ಹವಲ್ಲ :
ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು ವಾಸ್ತವಕ್ಕೆ ಹತ್ತಿರವಾಗಿಲ್ಲ. ನಮ ಪಕ್ಷದ ವತಿಯಿಂದ ನಡೆಸಿರುವ ಆಂತರಿಕ ಸಮೀಕ್ಷೆ ಹಾಗೂ ಕಾರ್ಯಕರ್ತರ ವರದಿ ಆಧರಿಸಿದರೆ ಕಾಂಗ್ರೆಸ್‌‍ ನೇತೃತ್ವದ ಇಂಡಿಯಾ ಕೂಟ 295 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸವನ್ನು ಮಲ್ಲಿಕಾರ್ಜುನ ಖರ್ಗೆಯವರು ವ್ಯಕ್ತಪಡಿಸಿರುವುದು ಸರಿಯಿದೆ. ರಾಜ್ಯದಲ್ಲಿ ನಾವು ತಳಮಟ್ಟದಲ್ಲಿ ಕೆಲಸ ಮಾಡಿದ್ದೇವೆ. ಕನಿಷ್ಟ 17 ರಿಂದ 18 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದೇವೆ ಎಂದರು.

ಜನರ ನಡುವೆ ಹೋರಾಡಿರುವ ನಮಗೆ ವಾಸ್ತವ ಗೊತ್ತಿದೆ. ರಾಜ್ಯಸರ್ಕಾರದ ಗ್ಯಾರಂಟಿ ಯೋಜನೆಗಳು ಕೈಹಿಡಿಯುತ್ತವೆ ಎಂದು ನಂಬಿದ್ದೇವೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ 3 ರಿಂದ 4 ಸ್ಥಾನ ಮಾತ್ರ ಗೆಲ್ಲಲಿದೆ ಎಂದು ಹೇಳಲಾಗಿದೆ. ಇದರ ಮೇಲೆ ನನಗೆ ನಂಬಿಕೆ ಇಲ್ಲ ಎಂದು ಹೇಳಿದರು.

ಹಲವು ಸಂದರ್ಭಗಳಲ್ಲಿ ಸಮೀಕ್ಷೆಗಳು ಸರಿಯಾಗಿವೆ. ಆದರೆ ಈಗ ನಡೆದಿರುವ ಸಮೀಕ್ಷೆಗಳು ಅನುಮಾನಾಸ್ಪದ. ಆಯ್ದ ಮಾಧ್ಯಮಗಳು ಮಾತ್ರ ಸಮೀಕ್ಷೆಯನ್ನು ಮಾಡಿವೆ. ಇದು ಯಾವ ಕಾರಣಕ್ಕೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಹೇಳಿದರು.

ವಿಧಾನಪರಿಷತ್‌ನ ಚುನಾವಣೆ ಹಿನ್ನೆಲೆಯಲ್ಲಿ ಸಂಜೆ ಕಾಂಗ್ರೆಸ್‌‍ ಶಾಸಕಾಂಗ ಸಭೆಯನ್ನು ಕರೆಯಲಾಗಿದೆ. ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಇಂದು ಸಂಜೆ ಅಥವಾ ನಾಳೆ ಪ್ರಕಟಗೊಳ್ಳಲಿದೆ. ಅಭ್ಯರ್ಥಿಗಳ ನಾಮಪತ್ರಕ್ಕೆ 10 ಮಂದಿ ಶಾಸಕರು ಸಹಿ ಹಾಕಬೇಕು. ಅದಕ್ಕಾಗಿ ಶಾಸಕಾಂಗ ಸಭೆ ಆಯೋಜಿಸಲಾಗಿದೆ ಎಂದರು.

RELATED ARTICLES

Latest News