Friday, November 22, 2024
Homeರಾಷ್ಟ್ರೀಯ | Nationalಒಡಿಶಾದಲ್ಲಿ ಬಿಸಿಲಿನ ಹೊಡೆತಕ್ಕೆ 3 ದಿನಗಳಲ್ಲಿ 20 ಮಂದಿ ಬಲಿ

ಒಡಿಶಾದಲ್ಲಿ ಬಿಸಿಲಿನ ಹೊಡೆತಕ್ಕೆ 3 ದಿನಗಳಲ್ಲಿ 20 ಮಂದಿ ಬಲಿ

ಭುವನೇಶ್ವರ್‌, ಜೂ.3 (ಪಿಟಿಐ) ಒಡಿಶಾದಲ್ಲಿ ಕಳೆದ ಮೂರು ದಿನಗಳಿಂದ 20 ಮಂದಿ ಬಿಸಿಲಿನ ಝಳಕ್ಕೆ ಬಲಿಯಾಗಿದ್ದು, ತೀವ್ರ ಬಿಸಿಗಾಳಿಯಿಂದ ರಾಜ್ಯ ತತ್ತರಿಸಿದೆ ಎಂದು ಅಧಿಕತ ಹೇಳಿಕೆ ತಿಳಿಸಿದೆ.

ವಿವಿಧ ಜಿಲ್ಲೆಗಳಲ್ಲಿ ಒಟ್ಟು 99 ಶಂಕಿತ ಸನ್‌ಸ್ಟ್ರೋಕ್‌ ಸಾವುಗಳು ವರದಿಯಾಗಿವೆ. ಮರಣೋತ್ತರ ಪರೀಕ್ಷೆ ಮತ್ತು ವಿಚಾರಣೆಯ ನಂತರ, 20 ಸನ್‌ಸ್ಟ್ರೋಕ್‌ ಸಾವುಗಳು ಎಂದು ದಢಪಡಿಸಲಾಯಿತು, ಆದರೆ ಎರಡು ಸಾವುಗಳು ಇತರ ಕಾರಣಗಳಿಂದ ಸಂಭವಿಸಿವೆ ಎಂದು ತಿಳಿದುಬಂದಿದೆ. ಉಳಿದ ಪ್ರಕರಣಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮೊದಲು, 42 ಶಂಕಿತ ಸನ್‌ಸ್ಟ್ರೋಕ್‌ ಸಾವುಗಳು ವರದಿಯಾಗಿದ್ದು, ಅವುಗಳಲ್ಲಿ ಆರು ಪ್ರಕರಣಗಳು ದಢಪಟ್ಟಿವೆ ಮತ್ತು ಇನ್ನೂ ಆರು ಸಾವುಗಳು ಇತರ ಕಾರಣಗಳಿಂದ ಸಂಭವಿಸಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಬೋಲಂಗಿರ್‌, ಸಂಬಲ್‌ಪುರ್‌, ಝಾರ್ಸುಗುಡಾ, ಕಿಯೋಂಜರ್‌, ಸೋನೆಪುರ್‌, ಸುಂದರ್‌ಗಢ್‌ ಮತ್ತು ಬಾಲಸೋರ್‌ ಜಿಲ್ಲೆಗಳಲ್ಲಿ ಸಾವುಗಳು ಹೆಚ್ಚಾಗಿ ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯ ಕಾರ್ಯದರ್ಶಿ ಪ್ರದೀಪ್‌ ಕುಮಾರ್‌ ಜೆನಾ ಮತ್ತು ವಿಶೇಷ ಪರಿಹಾರ ಆಯುಕ್ತ ಸತ್ಯಬ್ರತ ಸಾಹು ಅವರು ಜಿಲ್ಲಾಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಿದರು.ಬಿಸಿಗಾಳಿಯ ಕುರಿತು ಸೂಚನೆಗಳನ್ನು ಜಾರಿಗೊಳಿಸಲು ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದರು.

ಎಕ್ಸ್‌‍ ಗ್ರೇಷಿಯಾ ಮಂಜೂರಾತಿಗಾಗಿ ಪ್ರತಿ ಶಂಕಿತ ಸನ್‌ ಸ್ಟ್ರೋಕ್‌ ಸಾವಿನ ಮರಣೋತ್ತರ ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲೆಗಳಿಗೆ ತಿಳಿಸಲಾಗಿದೆ.ಅಲ್ಲದೆ, ಪ್ರತಿ ಸಾವಿಗೆ ನಿಖರವಾದ ಕಾರಣವನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಕಂದಾಯ ಅಧಿಕಾರಿ ಮತ್ತು ಸ್ಥಳೀಯ ವೈದ್ಯಾಧಿಕಾರಿ ಜಂಟಿ ವಿಚಾರಣೆ ನಡೆಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News