ನವದೆಹಲಿ, ಜೂ.11- ಜೂನ್ ತಿಂಗಳ ತೆರಿಗೆ ಆದಾಯದ ಪಾಲನ್ನು ಕೇಂದ್ರ ಸರ್ಕಾರ ಆಯಾ ರಾಜ್ಯಗಳಿಗೆ ಹಂಚಿಕೆ ಮಾಡಿದೆ. ಈ ಒಂದು ತಿಂಗಳಲ್ಲೇ ಒಟ್ಟು 1.39 ಲಕ್ಷ ಕೋಟಿ ರೂ.ಗಳನ್ನು ಹಣಕಾಸು ಇಲಾಖೆ ಬಿಡುಗಡೆ ಮಾಡಿದೆ.
ಎಂದಿನಂತೆ ಈ ಬಾರಿಯೂ ಉತ್ತರಪ್ರದೇಶಕ್ಕೆ ಅತಿಹೆಚ್ಚು ಪಾಲು ಸಿಕ್ಕಿದೆ. ಆ ಅತಿದೊಡ್ಡ ರಾಜ್ಯಕ್ಕೆ 25 ಸಾವಿರ ಕೋಟಿ ರೂ.ಗೂ ಹೆಚ್ಚು ತೆರಿಗೆ ಪಾಲು ಸಿಕ್ಕಿದೆ. ಮಹಾರಾಷ್ಟ್ರ ಬಳಿಕ ಅತಿಹೆಚ್ಚು ತೆರಿಗೆ ಸಂಗ್ರಹಿಸಿಕೊಡುವ ಕರ್ನಾಟಕ ರಾಜ್ಯಕ್ಕೆ ಜೂನ್ ತಿಂಗಳಲ್ಲಿ ಸಿಕ್ಕಿರುವುದು 5,096 ಕೋಟಿ ರೂ ಮಾತ್ರವೇ.
ವಿವಿಧ ರಾಜ್ಯಗಳಿಂದ ಸಂಗ್ರಹವಾಗುವ ಜಿಎಸ್‌ಟಿ ತೆರಿಗೆ ಹಣವನ್ನು ಮಾಸಿಕವಾಗಿ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತದೆ. ಒಟ್ಟು ತೆರಿಗೆ ಸಂಗ್ರಹದಲ್ಲಿ ರಾಜ್ಯಗಳಿಗೆ ಶೇ.41ರಷ್ಟು ಪಾಲು ನೀಡಲಾಗುತ್ತದೆ.
ಜೂನ್ ತಿಂಗಳಲ್ಲಿ ಮಾಸಿಕ ಬಾಬ್ತಿನ ಜೊತೆಗೆ ಒಂದು ಹೆಚ್ಚುವರಿ ಕಂತನ್ನೂ ಸೇರಿಸಲಾಗಿದೆ. ಎಲ್ಲವೂ ಸೇರಿ ಒಟ್ಟು 1,39,750 ಕೋಟಿ ರೂ ಆಗಿದೆ. ಫೆಬ್ರುವರಿಯಲ್ಲಿ ನಡೆದ ಮಧ್ಯಂತರ ಬಜೆಟ್‌ನಲ್ಲಿ 2024-25ರ ಹಣಕಾಸು ವರ್ಷಕ್ಕೆ ರಾಜ್ಯಗಳಿಗೆ 12.19 ಲಕ್ಷ ಕೋಟಿ ರೂ ತೆರಿಗೆ ಹಂಚಿಕೆ ಮಾಡಲು ಯೋಜಿಸಲಾಗಿದೆ.
ಇಲ್ಲಿಯವರೆಗೆ 2.8 ಲಕ್ಷ ಕೋಟಿ ರೂ ಹಂಚಿಕೆ ಮಾಡಲಾಗಿದೆ. ಅಂದರೆ ಏಪ್ರಿಲ್ 1ರಿಂದ ಆರಂಭವಾಗಿ ಜೂನ್ 10ರವರೆಗೆ 2.8 ಲಕ್ಷ ಕೋಟಿ ರೂ ತೆರಿಗೆ ಹಣವನ್ನು ರಾಜ್ಯಗಳಿಗೆ ಕೊಡಲಾಗಿದೆ.2024ರ ಜೂನ್‌ನಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ಹಂಚಿಕೆಯಾದ ತೆರಿಗೆ ಒಟ್ಟು ತೆರಿಗೆ: 1,39,750.92 ಕೋಟಿ ರೂ.
ಉತ್ತರಪ್ರದೇಶ 25,069.88 ಕೋಟಿ, ಬಿಹಾರ 14,056.12 ಕೋಟಿ, ಮಧ್ಯಪ್ರದೇಶ 10,970.44 ಕೋಟಿ, ಪಶ್ಚಿಮ ಬಂಗಾಳ 10,513 ಕೋಟಿ, ಮಹಾರಾಷ್ಟ್ರ 8,828.08 ಕೋಟಿ ರೂ. ರಾಜಸ್ಥಾನ 8,421.38 ಕೋಟಿ, ಒಡಿಶಾ 6,327.92 ಕೋಟಿ, ತಮಿಳುನಾಡು 5,700.44 ಕೋಟಿ, ಆಂಧ್ರಪ್ರದೇಶ 5,655.72 ಕೋಟಿ ಕರ್ನಾಟಕ 5,096.72 ಕೋಟಿ ರೂ.
ಗುಜರಾತ್ 4,860.56 ಕೋಟಿ, ಛತ್ತೀಸ್‌ಗಡ್ 4,761.30 ಕೋಟಿ, ಜಾರ್ಖಂಡ್ 4,621.58 ಕೋಟಿ, ಅಸ್ಸಾಮ್ 4,371.38 ಕೋಟಿ, ತೆಲಂಗಾಣ 2,937.58 ಕೋಟಿ, ಕೇರಳ 2,690.20 ಕೋಟಿ, ಪಂಜಾಬ್ 2,525.32 ಕೋಟಿ, ಅರುಣಾಚಲಪ್ರದೇಶ 2,455.44 ಕೋಟಿ, ಉತ್ತರಾಖಂಡ್ 1,562.44 ಕೋಟಿ, ಹರ್ಯಾಣ 1,527.48 ಕೋಟಿ, ಹಿಮಾಚಲಪ್ರದೇಶ 1,159.92 ಕೋಟಿ, ರೂಮೇಘಾಲಯ, 1,071.90 ಕೋಟಿ ರೂಮಣಿಪುರ 1,000.60 ಕೋಟಿ, ರೂತ್ರಿಪುರ 989.44 ಕೋಟಿ ರೂನಾಗಾಲ್ಯಾಂಡ್ 795.20 ಕೋಟಿ, ಮಿಝೋರಾಂ 698.78 ಕೋಟಿ, ಸಿಕ್ಕಿಂ: 542.22 ಕೋಟಿ ಹಾಗೂ ಗೋವಾ: 539.42 ಕೋಟಿ ರೂ. ಹಂಚಿಕೆಯಾಗಿದೆ.