Monday, November 25, 2024
Homeರಾಜ್ಯಪೋಕ್ಸೋ ಪ್ರಕರಣ : ಯಡಿಯೂರಪ್ಪನವರನ್ನು ಬಂಧಿಸದಂತೆ ಹೈಕೋರ್ಟ ಆದೇಶ

ಪೋಕ್ಸೋ ಪ್ರಕರಣ : ಯಡಿಯೂರಪ್ಪನವರನ್ನು ಬಂಧಿಸದಂತೆ ಹೈಕೋರ್ಟ ಆದೇಶ

ಬೆಂಗಳೂರು.ಜೂ14 : ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾಯಾಧೀಶರಾದ ಕೃಷ್ಣ ದೀಕ್ಷಿತ್ ಅವರು ಬಿಎಸ್ ವೈ ಅವರನ್ನು ಬಂಧಿಸದಂತೆ ಆದೇಶಿಸಿ ಜೂನ್ 17ರಂದು ಯಡಿಯೂರಪ್ಪ ಅವರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರು.

ಬಿಎಸ್ ವೈ ಯವರು ಓಡಿ ಹೋಗುವ ವ್ಯಕ್ತಿಯಲ್ಲ ಅವರ ವಿರುದ್ಧ ಒತ್ತಾಯದ ಕ್ರಮ ಕೈಗೊಳ್ಳುದಂತೆ ಕೋರ್ಟ್ ಸೂಚನೆ ನೀಡಿತು ನ್ಯಾಯಾಲಯದಲ್ಲಿ ಅರ್ಜಿ ಇತ್ಯರ್ಥವಾಗುವವರೆಗೂ ಬಿ ಎಸ್ ವೈ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದೆ.

ಮಾರ್ಚ್ 14ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ ಬಂಧಿಸುವ ಅಗತ್ಯವಿದೆಯೆಂದು ಸಿಐಡಿ ಎಸಿಎಂಎಂ ನ್ಯಾಯಾಲಯದ ಮುಂದೆ ಮನವಿ ಸಲ್ಲಿಸಿ ವಾರೆಂಟ್ ಆದೇಶ ಪಡೆದಿತ್ತು ಬಂಧನದ ಭೀತಿಯಿಂದ ಬಿ ಎಸ್ ವೈ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

ಯಡಿಯೂರಪ್ಪ ಅವರ ಪರ ಹಿರಿಯವಕೀಲರಾದ ಸಿವಿ ನಾಗೇಶ್ ಅವರು ವಾದ ಮಂಡಿಸಿ ಬಿಎಸ್ ವೈ ಅವರ ವಿರುದ್ಧನೀಡಿರುವ ಮಹಿಳೆಗೆ ದೂರು ಕೊಡುವುದೇ ಹವ್ಯಾಸ, ದೂರು ದಾ ರೇ ತನ್ನ ಗಂಡ ಹಾಗೂ ಮನೆಯವರ ವಿರುದ್ಧ ವೇ ದೂರು ನೀಡಿದ್ದರು. ಲೈಂಗಿಕ ದೌರ್ಜನರ ಪ್ರಕರಣ ಜಾಮೀನು ಸಹಿತ ಪ್ರಕರಣವಾಗಿದೆ ಸಿಐಡಿ
ಬಂದನದ ಆತುರ ತೋರುತ್ತಿದ್ದಾರೆ.

ಪ್ರಕರಣದಲ್ಲಿ ನಮ್ಮ ಕಕ್ಷಿದಾರರು ವಿಚಾರಣೆಗೆ ಹಾಜರಾಗಿದ್ದಾರೆ .ನಿಯಮ ಬಹಿರವಾಗಿ ವಿಷಯಗಳನ್ನು ಮುಚ್ಚಿಟ್ಟು ಅರೆಸ್ಟ್ ವಾರಂಟ್ ಪಡೆಯಲಾಗಿದೆ. ತನಿಖಾಧಿಕಾರಿಗಳು ರಾಜಕೀಯ ಮಾಸ್ಟರಗಳ ಆಜ್ಞೆ ಪಾಲಿಸುತ್ತಿದ್ದಾರೆ ಎಂದು ಪ್ರಬಲವಾದ ಮಂಡಿಸಿದರು ಯಡಿಯೂರಪ್ಪ ಅವರ ವಿರುದ್ಧ ಬಂಧನದ ವಾರೆಂಟ್ ಜಾರಿಯಾಗಿದೆ ನೋಟಿಸ್ ನೀಡಿದರೂ ಅವರ ವಿಚಾರಣೆಗೆ ಹಾಜರಾಗಿಲ್ಲ ಬೆಂಗಳೂರು ಬಿಟ್ಟು ಹೋಗುವುದು ಅವರ ಉದ್ದೇಶವಾಗಿತ್ತು ಸಂತ್ರಸ್ತೆಯ ಮೇಲೆ ಒತ್ತಡ ತಂದು ಸಾಕ್ಷ ನಾಶ ಮಾಡಿದ್ದಾರೆ ಸಾಕ್ಷ ನಾಶ ತಡೆಯಲು ಅವರ ಬಂಧಿಸುವ ಅಗತ್ಯವಿದೆ ಬೇರೆ ರಾಜ್ಯದಲ್ಲಿ ಇರುವುದರಿಂದ ಅವರ ವಿರುದ್ಧ ವಾರಂಟ್ ಪಡೆಯಲಾಗಿದೆ ಹೀಗಾಗಿ ಜಾಮೀನು ನೀಡಬಾರದು ಎಂದು ಸರ್ಕಾರಿ ಪರ ವಕಿಲರು ಮನವಿ ಮಾಡಿದರು .ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಜಾಮೀನು ಮಂಜೂರು ಮಾಡಿ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿ ವಿಚಾರಣೆಯನ್ನು ಮುಂದೂಡಿದರು

RELATED ARTICLES

Latest News