Thursday, January 1, 2026
Homeಮನರಂಜನೆಹೊಸ ಸಿನಿಮಾದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಭುವನ್ ಪೊನ್ನಣ್ಣ

ಹೊಸ ಸಿನಿಮಾದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಭುವನ್ ಪೊನ್ನಣ್ಣ

Bhuvan Ponnanna gives a big update about his new movie

ಕನ್ನಡ ಸಿನಿಮಾರಂಗದ ಉದಯೋನ್ಮುಕ ನಾಯಕ ನಟರಲ್ಲಿನ ಭುವನ್‌ ಪೊನ್ನಣ್ಣ ಕೂಡ ಒಬ್ಬರು. ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರೋ ಭುವನ್‌ ಪೊನ್ನಣ್ಣ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.. ಸಿನಿಮಾ, ರಿಯಾಲಿಟಿ ಶೋ , ನಿರ್ಮಾಣ ಹೀಗೆ ಸಾಕಷ್ಟು ವಿಚಾರದಲ್ಲಿ ಬ್ಯುಸಿ ಆಗಿರೋ ಭುವನ್‌ ಪೊನ್ನಣ್ಣ ಈಗಿನ ಸ್ಟಾರ್‌ ಗಳಿಗಿಂದ ಒಂದಿಷ್ಟು ಡಿಫ್ರೆಂಟ್‌ ಅಂತಾನೆ ಹೇಳಬಹುದು ..

ಮಾರ್ಡನ್‌ ಆಗಿ ಕಾಣಿಸಿಕೊಳ್ಳೊದ್ರ ಜೊತೆ ಜೊತೆಗೆ ತಮ್ಮ ಸಂಪ್ರದಾಯ ಸಂಸ್ಕೃತಿಯನ್ನ ಮಿಸ್‌ ಮಾಡದೇ ಫಾಲೋ ಮಾಡೋ ನಟ ಭುವನ್‌ ಪೊನ್ನಣ್ಣ ಅಂದ್ರೆ ತಪ್ಪಾಗಲಾರದು. ಈಗಾಗಲೇ ತಮ್ಮ ಮದುವೆ ಹಾಗೂ ಮಗಳ ವಿಚಾರದಲ್ಲಿ ಭುವನ್‌ ಸಂಸ್ಕೃತಿ ಸಂಪ್ರದಾಯವನ್ನ ಫಾಲೋ ಮಾಡೋ ನಾಯಕ ನಟ ಅಂತ ಪ್ರೂವ್‌ ಮಾಡಿದ್ದಾರೆ. ಸದ್ಯ ಹುಟ್ಟುಹಬ್ಬದ ಖುಷಿಯಲ್ಲಿರೋ ಭುವನ್‌ ಪ್ರತಿ ತಮ್ಮ ಹುಟ್ಟುಹಬ್ಬಕ್ಕೆ ತಪ್ಪದೇ ಒಂದು ಕೆಲಸವನ್ನ ಮಾಡೇ ಮಾಡ್ತಾರಂತೆ ಅದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡೋದು…ಯೆಸ್‌ ಎಲ್ಲೇ ಇರಲಿ ಹೇಗೆ ಇರಲಿ ತಮ್ಮ ಹುಟ್ಟುಹಬ್ಬದಂದು ಮಾತ್ರ ಮಿಸ್‌ ಮಾಡದೇ ಭುವನ್‌ ಈ ದೇವಿಯ ದರ್ಶನ ಮಾಡೇ ಮಾಡ್ತಾರೆ ಕಾರಣ ದೇವಿ ಕೊಟ್ಟಿರೋ ಆಶೀರ್ವಾದ ಹಾಗೂ ಐಶ್ವರ್ಯ…

ಯೆಸ್‌ ಭುವನ್‌ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡೋದಕ್ಕೆ ಆರಂಭ ಮಾಡಿದ ನಂತ್ರ ಅವ್ರ ಲೈಫ್‌ ನಲ್ಲಿ ಎಲ್ಲವೂ ಚೆನ್ನಾಗಿ ಆಗಿದ್ಯಂತೆ …ಸಿನಿಮಾ ಅವಕಾಶಗಳು , ಸಿನಿಮಾ ನಿರ್ಮಾಣ ಮಾಡಲು ಆಗಿದ್ದು ಕೂಡ ದೇವಿ ದರ್ಶನದ ನಂತರವೇ ಎಂದಿದ್ದಾರೆ ಭುವನ್‌ ..ಮದುವೆ ಆದ ನಂತರ ಕಟೀಲು ದುರ್ಗಾ ಪರಮೇಶ್ವರಿ ಬಳಿ ನನಗೆ ಮಗಳ ಹುಟ್ಟಬೇಕು ಅಂತ ಬೇಡಿಕೊಂಡಿದ್ರಂತೆ ಹಾಗಾಗಿ ಮಗಳನ್ನೂ ಕೂಡ ಮೊದಲು ಕರೆದುಕೂಂಡು ಹೋಗಿದ್ದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ…ಹಾಗಾಗಿ ಭುವನ್‌ ಪೊನಣ್ಣ ಪ್ರತಿ ವರ್ಷ ತಮ್ಮ ಹುಟ್ಟುಹಬ್ಬದಂದು ಕುಟುಂಬ ಸಮೇತರಾಗಿ ಈ ದೇವಸ್ಥಾನಕ್ಕೆ ಬೇಟಿಕೊಟ್ಟು ದೇವರ ದರ್ಶನ ಪಡೆಯುತ್ತಾರೆ…

ಅದರಂತೆ ಈ ವರ್ಷವೂ ಫ್ಯಾಮಿಲಿ ಜೊತೆ ದೇವಸ್ಥಾನಕ್ಕೆ ಭೇಟಿಕೊಟ್ಟು ಪೂಜೆ ಸಲ್ಲಿಸಿದ್ದಾರೆ…ಸದ್ಯ ಭುವನ್‌ ಯೋಗರಾಜ್‌ ಭಟ್ಟರ ನಿರ್ದೇಶನದಲ್ಲಿ ಅಭಿನಯ ಮಾಡುತ್ತಿದ್ದು ಅದರ ಜೊತೆಗೆ ಒಂದು ಸಿನಿಮಾವನ್ನ ನಿರ್ಮಾಣ ಮಾಡುವುದಾಗಿ ಅನೌನ್ಸ್‌ ಮಾಡಿದ್ದಾರೆ..

RELATED ARTICLES

Latest News