Thursday, January 1, 2026
Homeರಾಷ್ಟ್ರೀಯಫೆ.1 ರಿಂದ ಬೀಡಿ, ಸಿಗರೇಟ್‌, ತಂಬಾಕು ಉತ್ಪನ್ನಗಳು ದುಬಾರಿ

ಫೆ.1 ರಿಂದ ಬೀಡಿ, ಸಿಗರೇಟ್‌, ತಂಬಾಕು ಉತ್ಪನ್ನಗಳು ದುಬಾರಿ

How much will your cigarette cost from Feb 1? Centre imposes new excise duty

ನವದೆಹಲಿ, ಜ.1- ಬರುವ ಫೆಬ್ರವರಿ 1 ರಿಂದ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಪಾನ್‌ ಮಸಾಲಾಗಳ ಮೇಲೆ ಹೊಸ ಸೆಸ್‌‍ ವಿಧಿಸಲಾಗುತ್ತಿದೆ. ಇದರಿಂದ ಅವುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಲಿದೆ.

ತಂಬಾಕು ಮತ್ತು ಪಾನ್‌ ಮಸಾಲಾ ಮೇಲಿನ ಹೊಸ ಸುಂಕಗಳು ಜಿಎಸ್‌‍ಟಿ ದರಕ್ಕಿಂತ ಹೆಚ್ಚಿರುತ್ತದೆ. ಫೆ.1 ರಿಂದ ಪಾನ್‌ ಮಸಾಲಾ, ಸಿಗರೇಟ್‌‍, ತಂಬಾಕು ಮತ್ತು ಅಂತಹುದೇ ಉತ್ಪನ್ನಗಳಿಗೆ ಶೇ. 40 ರಷ್ಟು ಜಿಎಸ್‌‍ಟಿ ದರ ಇರಲಿದೆ.

ಬೀಡಿಗಳಿಗೆ ಶೇ. 18 ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌‍ಟಿ) ಬೀಳಲಿದೆ ಎಂದು ಸರ್ಕಾರಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.ಪಾನ್‌ ಮಸಾಲಾ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್‌‍ ವಿಧಿಸಲಾಗುವುದು, ಆದರೆ ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳು ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಲಾಗುವುದು.

ಹಣಕಾಸು ಸಚಿವಾಲಯವು ನಿನ್ನೆ ಜಗಿಯುವ ತಂಬಾಕು, ಜರ್ದಾ ಸುಗಂಧಿತ ತಂಬಾಕು ಮತ್ತು ಗುಟ್ಕಾ ಪ್ಯಾಕಿಂಗ್‌ ಯಂತ್ರಗಳ (ಸಾಮರ್ಥ್ಯ ನಿರ್ಣಯ ಮತ್ತು ಸುಂಕ ಸಂಗ್ರಹ) ನಿಯಮಗಳು-2026 ಅಧಿಸೂಚನೆ ಹೊರಡಿಸಿದೆ.

್ಯಡಿಸೆಂಬರ್‌ನಲ್ಲಿ ಸಂಸತ್‌, ಪಾನ್‌ ಮಸಾಲಾ ತಯಾರಿಕೆಯ ಮೇಲೆ ಹೊಸ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್‌‍ ಹಾಗೂ ತಂಬಾಕಿನ ಮೇಲಿನ ಅಬಕಾರಿ ಸುಂಕವನ್ನು ವಿಧಿಸಲು ಅನುಮತಿಸುವ ಎರಡು ಮಸೂದೆಗಳನ್ನು ಅಂಗೀಕರಿಸಿತ್ತು.ಇದೀಗ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರುವುದರಿಂದ ಫೆ.1 ರಿಂದ ತಂಬಾಕು ಉತ್ಪನ್ನಗಳ ಬೆಲೆ ಹೆಚ್ಚಳವಾಗುವುದರಿಂದ ಬಳಕೆದಾರರ ಬಾಯಿ ಸುಡುವುದು ಗ್ಯಾರಂಟಿ ಎನ್ನುವಂತಾಗಿದೆ.

RELATED ARTICLES

Latest News