Thursday, January 1, 2026
Homeರಾಜ್ಯಸಿಎಂ ರೇಸ್‌‍ : ನೇರ ಅಖಾಡಕ್ಕಿಳಿದ ಪರಮೇಶ್ವರ್‌

ಸಿಎಂ ರೇಸ್‌‍ : ನೇರ ಅಖಾಡಕ್ಕಿಳಿದ ಪರಮೇಶ್ವರ್‌

CM Race: Parameshwar enters the fray directly

ಬೆಂಗಳೂರು, ಜ.1- ರಾಜಕೀಯವಾಗಿ ಪದೋನ್ನತಿ ಹೊಂದುವ ಮಹಾತ್ವಕಾಂಕ್ಷೆ ತಮಗೂ ಇದೆ ಎಂದು ಹೇಳುವ ಮೂಲಕ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮುಖ್ಯಮಂತ್ರಿ ಹುದ್ದೆಯ ರೇಸ್‌‍ಗೆ ನೇರವಾಗಿ ಅಖಾಡಕ್ಕಿಳಿದಿದ್ದಾರೆ.

ನಾಯಕತ್ವ ಬದಲಾವಣೆ ಯಾಗಬೇಕು, ತಮಗೆ ಮುಖ್ಯಮಂತ್ರಿ ಸ್ಥಾನ ದೊರೆಯಬೇಕು ಎಂದು ಈವರೆಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತ್ರ ಪಟ್ಟು ಹಿಡಿದು ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಿದ್ದರು. ಈಗ ಪರಮೇಶ್ವರ್‌ ತೆರೆಮರೆಯಲ್ಲಿ ತಮದೇ ಆದ ಲಾಬಿ ನಡೆಸುವ ಮೂಲಕ ನೇರವಾಗಿ ಸ್ಪರ್ಧೆಗಿಳಿಯುತ್ತಿದ್ದಾರೆ.

ಕೆಲವು ಹಿರಿಯ ನಾಯಕರು ದೆಹಲಿಗೆ ಹೋಗಿ ಪರಮೇಶ್ವರ್‌ ಪರವಾಗಿ ವರದಿ ನೀಡಿದ್ದಾರೆ. ಪರಮೇಶ್ವರ್‌ ಅವರನ್ನು ಮುಖ್ಯಮಂತ್ರಿ ಮಾಡುವುದರಿಂದ ಪಕ್ಷಕ್ಕಾಗುವ ಲಾಭ ನಷ್ಟಗಳ ಬಗ್ಗೆ ಪಕ್ಷದ ವರಿಷ್ಠರಿಗೆ ವರದಿ ನೀಡಿದ್ದಾರೆ. ಅಲ್ಲಲ್ಲಿ ಪರಮೇಶ್ವರ್‌ ಪರವಾದ ಪ್ರತಿಭಟನೆಗಳು ನಡೆದಿದ್ದವು.

ಪರಮೇಶ್ವರ್‌ ಮುಖ್ಯಮಂತ್ರಿ ಯಾಗಬೇಕು ಎಂಬ ಚರ್ಚೆಗಳ ನಡುವೆ ನಾನಾ ರೀತಿಯ ಗೊಂದಲದ ವಾತಾವರಣಗಳು ಸೃಷ್ಟಿಯಾಗು ತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣ ಒಂದು ವೇಳೆ ನಾಯಕತ್ವ ಬದಲಾವಣೆಯಾಗುವುದೇ ಆದರೆ ದಲಿತರಿಗೆ ಮುಖ್ಯಮಂತ್ರಿ ಆಗಲು ಅವಕಾಶ ನೀಡಬೇಕು ಎಂದು ಪ್ರತಿಪಾದಿಸುವ ಮೂಲಕ ಪರೋಕ್ಷವಾಗಿ ಪರಮೇಶ್ವರ್‌ ಹೆಸರನ್ನು ಮುನ್ನೆಲೆಗೆ ತಂದಿದೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆಯಲ್ಲಿ ಪರಮೇಶ್ವರ್‌, ತಾವು ಪದೋನ್ನತಿ ಪಡೆಯುವ ಮಹಾತ್ವಾಕಾಂಕ್ಷೆ ಹೊಂದಿರುವುದಾಗಿ ಹೇಳಿದ್ದಾರೆ.
ರಾಜಕೀಯವಾಗಿ ತಮ ವೈಯಕ್ತಿಕ ಪದೋನ್ನತಿ ವಿಚಾರವಾಗಿ ಪಕ್ಷದ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳಬೇಕು. ರಾಜಕೀಯವಾಗಿ ನಾನು ಆಶಾವಾದಿಯಾಗಿಯೇ ಈವರೆಗೂ ಬದುಕಿದ್ದೇನೆ. ಎಲ್ಲರಿಗೂ ಜೀವನದಲ್ಲಿ ಮಹತ್ವಕಾಂಕ್ಷಿಗಳಿರುತ್ತವೆ. ಅದೇ ರೀತಿ ನನಗೂ ಮಹತ್ವಾಕಾಂಕ್ಷೆ ಇದ್ದೇ ಇದೆ ಎಂದರು.

ರಾಜಕೀಯಕ್ಕೆ ಬಂದಾಗ ಶಾಸಕರಾಗಬೇಕು ಎಂಬ ಅಭಿಲಾಷೆಯಿತ್ತು, ಆನಂತರ ಮಂತ್ರಿಯಾಗಬೇಕು ಎಂಬ ಆಕಾಂಕ್ಷೆ ಇತ್ತು. ಪ್ರತಿ ಹಂತದಲ್ಲೂ ಮುಂದಿನ ಹಂತಕ್ಕೇರುವ ಅಭಿಲಾಷೆಗಳಿರುತ್ತವೆ. ಆದರೆ ಅಂತಿಮವಾಗಿ ಹೈಕಮಾಂಡ್‌ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದರು.
ರಾಜ್ಯ ರಾಜಕೀಯದಲ್ಲಿ ವಾತಾವರಣ ಯಾರಿಗೆ ಪೂರಕವಾಗಿದೆ ಎಂದು ಪ್ರತಿನಿತ್ಯವೂ ಚರ್ಚೆಯಾಗುತ್ತಿದೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಹೇಳಿದರು.

RELATED ARTICLES

Latest News