Saturday, January 3, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-01-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-01-2026)

Today's Horoscope

ನಿತ್ಯ ನೀತಿ : ಸಂಬಂಧಗಳು ಯಾವುದೇ ಆಗಿರಲಿ ಆ ವ್ಯಕ್ತಿ ನಿಮ ಕಣ್ಣ ಮುಂದೆ ಅಷ್ಟೇ ಅಲ್ಲ ನಿಮ ಬೆನ್ನ ಹಿಂದೆಯೂ ಅಷ್ಟೇ ಪ್ರಮಾಣಿಕವಾಗಿ ಇದ್ದರೆ ಮಾತ್ರ ಆ ಸಂಬಂಧ ಶಾಶ್ವತ.

ಪಂಚಾಂಗ : ಶನಿವಾರ, 03-01-2026
ವಿಶ್ವಾವಸುನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು: ಸೌರ ಶಿಶಿರ / ಮಾಸ: ಪುಷ್ಯ / ಪಕ್ಷ: ಶುಕ್ಲ / ತಿಥಿ: ಹುಣ್ಣಿಮೆ / ನಕ್ಷತ್ರ: ಆರ್ದ್ರಾ / ಯೋಗ: ಬ್ರಹ್ಮಾ/ಐಂದ್ರ / ಕರಣ: ಬಾಲವ
ಸೂರ್ಯೋದಯ – ಬೆ.06.43
ಸೂರ್ಯಾಸ್ತ – 6.05
ರಾಹುಕಾಲ – 9.00-10.30
ಯಮಗಂಡ ಕಾಲ – 1.30- 3.00
ಗುಳಿಕ ಕಾಲ – 6.00-7.30

ರಾಶಿಭವಿಷ್ಯ
ಮೇಷ: ಆರೋಗ್ಯದ ವಿಚಾರದಲ್ಲಿ ಕಾಳಜಿ ವಹಿಸಿ.
ವೃಷಭ: ವಿದ್ಯಾರ್ಥಿಗಳಿಗೆ ವಿದ್ಯೆಯ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ಮಿಥುನ: ಒಂದೇ ಸಮಯಕ್ಕೆ ನಾನಾ ಬಗೆಯ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.

ಕಟಕ: ಆತ್ಮಗೌರವ ಹೆಚ್ಚಾಗಲಿದೆ.
ಸಿಂಹ: ಹಿಂಜರಿಕೆ ಮತ್ತು ಭಯದ ಸ್ವಭಾವದಿಂದ ಕಾರ್ಯಕ್ಷೇತ್ರದಲ್ಲಿ ಹಿನ್ನಡೆಗೆ ಕಾರಣವಾಗಲಿದೆ.
ಕನ್ಯಾ: ಕಚೇರಿಯಲ್ಲಿ ಆತ್ಮ ವಿಶ್ವಾಸದಿಂದ ಕೆಲಸ ಮಾಡಿ.

ತುಲಾ: ಮಕ್ಕಳ ವಿಷಯ ದಲ್ಲಿ ಹೆಚ್ಚು ಕಾಳಜಿ ವಹಿಸಿ.
ವೃಶ್ಚಿಕ: ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ದುಡಿಯುವ ನಿಮ್ಮ ಮೇಲೆ ಮೇಲಾ ಕಾರಿಗಳಿಗೆ ಹೆಚ್ಚು ಭರವಸೆ ಮೂಡಲಿದೆ.
ಧನುಸ್ಸು: ತಂದೆ-ತಾಯಿಗೆ ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಮಾಡುವ ಅವಕಾಶ ದೊರೆಯಲಿದೆ.

ಮಕರ: ಆಸ್ತಿ ನೋಂದಣಿಯಲ್ಲಿ ಗೊಂದಲವಾಗಲಿದೆ.
ಕುಂಭ: ಕಷ್ಟದ ಪರಿಸ್ಥಿತಿಯಲ್ಲಿ ಜನಬಲದ ಕೊರತೆಯಾದರೂ ಸ್ನೇಹಿತರ ಸಹಕಾರ ಸಿಗಲಿದೆ.
ಮೀನ: ಉತ್ತಮ ಆದಾಯ ಬರಲಿದೆ.

RELATED ARTICLES

Latest News