ಶ್ರೀನಗರ, ಜೂ.29- ಹಿಂದೂಗಳ ಪವಿತ್ರ ಅಮರನಾಥ ಯಾತ್ರೆ ಇಂದಿನಿಂದ ಆರಂಭವಾಗಿದೆ.ದೇಶದಾದ್ಯಂತ ಇರುವ ಸಾಧು ಸಂತರು, ನಾಗಾಸಾಧುಗಳು ಸೇರಿದಂತೆ ಸಾವಿರಾರು ಭಕ್ತರು ಅಮರನಾಥ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಯಾತ್ರೆ ಅಂಗವಾಗಿ ಜಮು-ಕಾಶೀರದಲ್ಲಿ ಬಿಗಿ ಭದ್ರತೆ ಏರ್ಪಡಿಸ ಲಾಗಿದೆ. ಅಮರನಾಥ ಬೇಸ್‌ಕ್ಯಾಂಪ್‌ಗೂ 3 ಹಂತದ ಭದ್ರತೆ ಒದಗಿಸಲಾಗಿದ್ದು, ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ 360 ಡಿಗ್ರಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಯಾತ್ರೆ ಸಾಗುವ ಹೆದ್ದಾರಿಯ ಸುರಕ್ಷತೆ ಖಾತರಿಗಾಗಿ ವಾಹನಗಳನ್ನು ಪರಿಶೀಲಿಸಲು 60 ಕ್ಯಾಮೆರಾಗಳು, ಬಾಡಿ ಸ್ಕ್ಯಾನರ್‌ಗಳನ್ನು ಅಳವಡಿಸಲಾಗಿದೆ. ಅಲ್ಲದೇ, ರಂಭಾನ್ ಜಿಲ್ಲೆಯ ಉಧಂಪುರದಿಂದ ಬನಿಹಾಲ್ ಮಾರ್ಗದವರೆಗೆ 360 ಡಿಗ್ರಿಯ 10 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, 24/7 ಕಂಟ್ರೋಲ್ ರೂಂ ರಚಿಸಲಾಗಿದೆ.
ನೈಸರ್ಗಿಕ, ಮಾನವ ನಿರ್ಮಿತ ವಿಪತ್ತುಗಳ ನಿರ್ವಹಣೆಗೆ ಯೋಜನೆ, ಗಡಿ ಪ್ರದೇಶಗಳಲ್ಲೂ ಭದ್ರತಾ ಸಿಬ್ಬಂದಿ ನಿಯೋಜನೆ, ಗಸ್ತು, ಮೇಲ್ವಿಚಾರಣೆ ಹೆಚ್ಚಳ ಮಾಡಲಾಗಿದೆ. ಉಗ್ರರ ಚಟುವಟಿಕಿ ಮೇಲೂ ಹದ್ದಿನ ಕಣ್ಣಿಡಲಾಗಿದೆ.
ಯಾತ್ರೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ :
ಅಮರನಾಥ ಯಾತ್ರೆ ಇಂದಿನಿಂದ ಪ್ರಾರಂಭವಾ ಗಿದ್ದು,ಭಕ್ತರಿಗೆ ಯಾವುದೇ ತೊಂದರೆ, ಅನನುಕೂಲ ಆಗದಂತೆ ಸರ್ವ ರೀತಿಯ ಮುನ್ನೆಚ್ಚರಿಕೆಗಳನ್ನು ಕೇಂದ್ರ ಸರಕಾರ ವಹಿಸಿದೆ ಎಂದು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಸಂಬಂಧ ಎಕ್‌್ಸನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎಲ್ಲಾ ಭಕ್ತರಿಗೆ ಸುರಕ್ಷಿತ, ಸುಗಮ ಮತ್ತು ಆಹ್ಲಾದಕರ ಪ್ರಯಾಣದ ಸೌಲಭ್ಯ ಕಲ್ಪಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
_ಭಾರತೀಯ ಭವ್ಯ ಪರಂಪರೆಯ, ದಿವ್ಯತೆಯ ಶ್ರದ್ಧಾ ಭಕ್ತಿಯ ಶಾಶ್ವತ ಸಂಕೇತವಾಗಿರುವ ಅಮರನಾಥ ಯಾತ್ರೆ ಆರಂಭಗೊಂಡಿದ್ದು, ಯಾತ್ರೆ ಕೈಗೊಳ್ಳುತ್ತಿರುವ ಎಲ್ಲಾ ಭಕ್ತರಿಗೂ ಆ ಅಮರನಾಥ ದೇವರ ದರ್ಶನ ಭಾಗ್ಯ ಸಿಗಲಿ ಹಾಗೂ ಅನುಗ್ರಹ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.