Friday, November 22, 2024
Homeಇದೀಗ ಬಂದ ಸುದ್ದಿಎಸ್‌ಐಟಿ ಮುಂದೆ ಹಾಜರಾದ ಮಾಜಿ ಸಚಿವ ನಾಗೇಂದ್ರ

ಎಸ್‌ಐಟಿ ಮುಂದೆ ಹಾಜರಾದ ಮಾಜಿ ಸಚಿವ ನಾಗೇಂದ್ರ

ಬೆಂಗಳೂರು,ಜು.9– ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣ ಸಂಬಂಧ ಇಂದು ಮಾಜಿ ಸಚಿವ ಹಾಗೂ ಶಾಸಕ ಬಿ.ನಾಗೇಂದ್ರ ಅವರು ಎಸ್‌‍ಐಟಿ ಮುಂದೆ ವಿಚಾರಣೆಗೆ ಹಾಜರಾದರು.

ಈ ಹಗರಣದಲ್ಲಿ ನಾಗೇಂದ್ರ ಅವರು ಭಾಗಿಯಾಗಿದ್ದಾರೆಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ದಳ ನೋಟೀಸ್‌‍ ನೀಡಿತ್ತು.

ಹಾಗಾಗಿ ಇಂದು ಸಿಐಡಿ ಕಚೇರಿಯಲ್ಲಿರುವ ಎಸ್‌‍ಐಟಿ ಮುಂದೆ ನಾಗೇಂದ್ರ ಅವರು ಹಾಜರಾಗಿದ್ದು, ತನಿಖಾಧಿಕಾರಿಗಳು ಅವರಿಂದ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.

ವಾಲೀಕಿ ನಗರದಲ್ಲಿ ಹಗರಣ ಬೆಳಕಿಗೆ ಬರುತ್ತಿದ್ದಂತೆ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಡ ಕೇಳಿಬಂದಿದ್ದರಿಂದ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಈ ಹಗರಣದಲ್ಲಿ ಈಗಾಗಲೇ ಎಸ್‌‍ಐಟಿ ಹಲವರನ್ನು ಬಂಧಿಸಿದ್ದು, ಇಂದು ನಾಗೇಂದ್ರ ಅವರನ್ನು ತನಿಖಾಧಿಕಾರಿಗಳು ಸುದೀರ್ಘವಾಗಿ ವಿಚಾರಣೆಗೊಳಪಡಿಸಿ ಹಲವು ವಿವರಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ವಾಲೀಕಿ ನಿಗಮದ ಬ್ಯಾಂಕ್‌ನಿಂದ 18 ನಕಲಿ ಖಾತೆಗಳಿಗೆ ಸುಮಾರು 94 ಕೋಟಿ ರೂ. ಅಕ್ರಮವಾಗಿ ಹಣ ವರ್ಗಾವಣೆಯಾಗಿತ್ತು. ಈ ಸಂಬಂಧ ತನಿಖೆ ನಡೆಸಲು ಸರ್ಕಾರ ಎಸ್‌‍ಐಟಿ ರಚಿಸಿತ್ತು.

RELATED ARTICLES

Latest News