ಬೆಂಗಳೂರು,ಅ.20- ಅನಧಿಕೃತ ಪಬ್ಸ್, ಬಾರ್‌ಗಳ ಮೇಲೆ ಬಿಬಿಎಂಪಿ ಸಮರ ಸಾರಿದೆ. ಕಟ್ಟಡಗಳ ರೂಪ್‍ಟಾಪ್‍ಗಳ ಮೇಲೆ ನಿರ್ಮಾಣ ಮಾಡಿರುವ ಬಾರ್‌ಗಳಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಕ್ರಮ ರೂಪ್‍ಟಾಪ್ ಬಾರ್‌ಗಳ ಮೇಲೆ ದಾಳಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‍ಗಿರಿನಾಥ್ ತಿಳಿಸಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಕೋರಮಂಗಲದಲ್ಲಿ ಪಬ್ ಒಂದರ ರೂಪ್ ಟಾಪ್ ಮೇಲೆ ಬೆಂಕಿ ಅವಘಡ ಸಂಭವಿಸಿರುವುದನ್ನು ಮನಗಂಡು ನಾವು ಈ ತೀರ್ಮಾನ ಕೈಗೊಂಡಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಬಿಬಿಎಂಪಿಯಿಂದ ಅನುಮತಿ ಸಿಗದಿದ್ದರೂ ಕೆಲ ಕಡೆಗಳಲ್ಲಿ ಅನಧಿಕೃತ ರೂಪ್‍ಟಾಪ್ ಬಾರ್‌ಗಳನ್ನು ನಿರ್ಮಾಣ ಮಾಡಿಕೊಂಡಿರುವ ಕೆಲವರು ವಾರ್ಷಿಕ ಕೋಟ್ಯಂತರ ರೂ.ಆದಾಯಗಳಿಸುತ್ತಿದ್ದಾರೆ.
ಸತೀಶ್ ಜಾರಕಿಹೊಳಿ ಅಸಮಾಧಾನದಿಂದ ಪಕ್ಷಕ್ಕೆ ನಷ್ಟವಿಲ್ಲ : ಸಚಿವ ರಾಜಣ್ಣ
ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿದಿದ್ದರೂ ಜಾಣ ಕುರುಡರಂತೆ ವರ್ತಿಸುತ್ತಿರುವುದು ಕಂಡು ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆಯುಕ್ತರು ಯಾವುದೇ ಮುಲಾಜಿಲ್ಲದೆ ರೂಪ್‍ಟಾಪ್ ಬಾರ್‍ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ 200 ಕ್ಕೂ ಹೆಚ್ಚು ಬಾರ್ ಪಬ್‍ಗಳಲ್ಲಿ ಅನಧಿಕೃತ ರೂಪ್ ಟಾಪ್ ನಿರ್ಮಾಣ ಮಾಡಲಾಗಿದೆ ಆದರಲ್ಲೂ ನಗರದ ಪೂರ್ವ ಹಾಗೂ ದಕ್ಷೀಣ ವಲಯದಲ್ಲಿ ಅತಿ ಹೆಚ್ಚು ಅನಧಿಕೃತ ರೂಪ್ ಟಾಪ್ ನಿರ್ಮಾಣವಾಗಿರುವುದು ಕಂಡು ಬಂದಿದೆ.