Wednesday, April 2, 2025
Homeರಾಷ್ಟ್ರೀಯ | Nationalಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ, ಟೇಕ್ ಆಫ್ ಸ್ಥಗಿತ

ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ, ಟೇಕ್ ಆಫ್ ಸ್ಥಗಿತ

ಪಣಜಿ, ಆ.14 – ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳಲು ಹೊರಟಿದ್ದ ಏರ್ ಇಂಡಿಯಾ ವಿಮಾನ ಬೆಳಗ್ಗೆ ಹಕ್ಕಿ ಢಿಕ್ಕಿಯಾದ ಕಾರಣ ಟೇಕ್ಆಫ್ ಸ್ಥಗಿತಗೊಳಿಸಬೇಕಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂದು ಬೆಳಗ್ಗೆ 6.45ಕ್ಕೆ ಈ ಘಟನೆ ನಡೆದಿದೆ ಎಂದರು. ಮುಂಬೈಗೆ ತೆರಳುತ್ತಿದ್ದ ವಿಮಾನವು ರನ್‌ವೇನಲ್ಲಿ ಮೇಲೇರಲು ಮುಂದಾಗುವ ಸಂದರ್ಭದಲ್ಲಿ ಹಕ್ಕಿಯೊಂದು ಇಂಜಿನ್‌ಗೆ ಸಿಕ್ಕಿಕೊಂಡಿದೆ,ಎಚ್ಚೆತ್ತ ಪೈಲೆಟ್‌ ಹಾರಾಟ ನಿಲ್ಲಿಸಿದ್ದಾರೆ.

ಪ್ರಯಾಣಿಕರಿಗೆ ಬದಲಿ ಸೇವೆ ಒದಗಿಸಿ ವಿಮಾನವನ್ನು ತಂಗುದಾಣಕ್ಕೆ ತಂದು ನಿಲ್ಲಿಸಲಾಗಿದೆ ಎಂದು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಘಟನೆಯ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.

RELATED ARTICLES

Latest News