Thursday, November 28, 2024
Homeಕ್ರೀಡಾ ಸುದ್ದಿ | Sportsಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ವರ್ಷ ಪೂರೈಸಿದ ಕೊಹ್ಲಿ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ವರ್ಷ ಪೂರೈಸಿದ ಕೊಹ್ಲಿ

ಬೆಂಗಳೂರು, ಆ. 18 – ಆಡು ಮುಟ್ಟದ ಸೊಪ್ಪಿಲ್ಲ , ಕ್ರಿಕೆಟ್ ರಂಗದಲ್ಲಿ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ ಮಾಡಲಾಗದ ದಾಖಲೆಗಳಿಲ್ಲ ಎಂಬ ಮಾತಿದೆ. ಅಂತಹ ಆಧುನಿಕ ಕ್ರಿಕೆಟ್ನ ದಿಗ್ಗಜ ಕಿಂಗ್ ಕೊಹ್ಲಿ ಇಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿ ಬರೋಬ್ಬರಿ 16 ವರ್ಷಗಳು ಪೂರ್ಣಗೊಂಡಿವೆ.

ಶ್ರೀಲಂಕಾ ವಿರುದ್ಧ 2008 ಆಗಸ್ಟ್ 18 ರಂದು ತಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡ ವಿರಾಟ್ಕೊಹ್ಲಿ, ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಆಡಿದ 175ನೇ ಆಟಗಾರನಾಗಿ ಗುರುತಿಸಿಕೊಂಡರು. ಮೊದಲ ಪಂದ್ಯದಲ್ಲಿ ಕೇವಲ 12 ರನ್ಗಳಿಗೆ ವಿಕೆಟ್ ಒಪ್ಪಿಸಿದ ವಿರಾಟ್ ಕೊಹ್ಲಿ, ಉಳಿದ ಪಂದ್ಯಗಳಲ್ಲಿ ರನ್ ಹೊಳೆ ಹರಿಸಿ ತಂಡದ ಪರ ಅತಿ ಹೆಚ್ಚು ಗಳಿಸಿದ ನಾಲ್ಕನೇ ಆಟಗಾರನಾಗಿ ಹೊರಹೊಮಿದರು.

ವಿಶೇಷವೆಂದರೆ 2009 ಶ್ರೀಲಂಕಾ ವಿರುದ್ಧವೇ ತಮ ಚೊಚ್ಚಲ ಶತಕ ಸಿಡಿಸಿದ ವಿರಾಟ್ಕೊಹ್ಲಿ, 2011ರ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ತಮ ಚೊಚ್ಚಲ ವಿಶ್ವಕಪ್ ಪಂದ್ಯದಲ್ಲೇ ಶತಕ ಸಿಡಿಸಿದ ಆಟಗಾರನಾಗಿ ಕೊಹ್ಲಿ ಗುರುತಿಸಿಕೊಂಡರು. ನಂತರ ಭಾರತ ತಂಡದಲ್ಲಿ ತಮದೇ ಛಾಪನ್ನು ವಿರಾಟ್ ಸೃಷ್ಟಿಸಿದ್ದಾರೆ.

ಕಿಂಗ್ ಕೊಹ್ಲಿ ದಾಖಲೆ :
2010 ಜೂನ್ 12 ರಂದು ಜಿಂಬಾಬ್ವೆ ವಿರುದ್ಧ ಚೊಚ್ಚಲ ಟ್ವೆಂಟಿ-20 ಪಂದ್ಯವಾಡಿದ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಹೊಂದಿರುವ ವಿಶ್ವದ ಮೊದಲ ಬ್ಯಾಟರ್ ಆಗಿದ್ದಾರೆ. ಅಫಘಾನಿಸ್ತಾನ ವಿರುದ್ಧ ಚೊಚ್ಚಲ ಚುಟುಕು ಮಾದರಿಯ ಶತಕ (122 ರನ್) ಗಳಿಸಿರುವ ಕೊಹ್ಲಿ ಹೆಸರಿನಲ್ಲಿ 38 ಟಿ20 ಅರ್ಧಶತಕಗಳು ದಾಖಲಾಗಿವೆ.

ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್, ಕುಮಾರ ಸಂಗಕ್ಕಾರ ಮತ್ತು ರಿಕಿ ಪಾಂಟಿಂಗ್ ನಂತರ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ 4ನೇ ಬ್ಯಾಟರ್ ಆಗಿ ವಿರಾಟ್ ಕೊಹ್ಲಿ ಗುರುತಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಪಡೆದ ಪ್ರಶಸ್ತಿಗಳು:

  • ಐಸಿಸಿ ವರ್ಷದ ಆಟಗಾರ: 2012, 2017, 2018, 2023.
  • ಸರ್ ಗ್ಯಾರ್ಫೀಲ್ಡ್ ಸೋಬರ್ಸ್: 2017 ಹಾಗೂ 2018
  • ಐಸಿಸಿ ಟೆಸ್ಟ್ ಆಟಗಾರ: 2018
    ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್
    ಆವಾರ್ಡ್: 2019
  • ಐಸಿಸಿ ದಶಕದ ಆಟಗಾರ: 2011 ರಿಂದ 2020. ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ವಿರಾಟ್ ಕೊಹ್ಲಿ ಅವರು ಪಡೆದಿದ್ದಾರೆ.
RELATED ARTICLES

Latest News