Sunday, November 10, 2024
Homeಕ್ರೀಡಾ ಸುದ್ದಿ | Sportsಐಪಿಎಲ್‌ ಹರಾಜಿಗೂ ಮುನ್ನ ಆರ್‌ಸಿಬಿಯ ಮೂವರು ಆಟಗಾರರಿಗೆ ಗೇಟ್‌ಪಾಸ್

ಐಪಿಎಲ್‌ ಹರಾಜಿಗೂ ಮುನ್ನ ಆರ್‌ಸಿಬಿಯ ಮೂವರು ಆಟಗಾರರಿಗೆ ಗೇಟ್‌ಪಾಸ್

IPL 2025: Top 3 players RCB might release ahead of the mega-auction

ಬೆಂಗಳೂರು, ಆ.28– ಐಪಿಎಲ್‌ ಟೂರ್ನಿಯ ಹದಿನೇಳನೇ ಆವೃತ್ತಿ ಮುಗಿದರೂ ಒಮೆಯೂ ಟ್ರೋಫಿ ಗೆಲ್ಲದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿ ಹದಿನೆಂಟನೇ ಆವೃತ್ತಿಯಲ್ಲಾದರೂ ಚಾಂಪಿಯನ್‌ಪಟ್ಟ ಅಲಂಕರಿಸುವ ಲೆಕ್ಕಾಚಾರ ಹಾಕಿಕೊಂಡಿದ್ದು ಕೆಲವು ಆಟಗಾರರನ್ನು ಮೆಗಾ ಹರಾಜಿಗೂ ಮುನ್ನವೇ ತಂಡದಿಂದ ಕೈಬಿಡಲು ಮುಂದಾಗಿದೆ.

ಐಪಿಎಲ್‌ ನಿಯಮವು ಅಂತಿಮಗೊಂಡ ಕ್ಷಣದಲ್ಲೇ ಬೆಂಗಳೂರು ಫ್ರಾಂಚೈಸಿ ತಮ ಅಂತಿಮ ಪಟ್ಟಿಯನ್ನು ಪ್ರಕಟಿಸಲಿದ್ದು, ಕೆಲವು ಸ್ಟಾರ್‌ ಆಟಗಾರರನ್ನೇ ಕೈಬಿಡಲು ಮುಂದಾಗಿದೆ ಎಂಬ ವರದಿಗಳು ಹರಿದಾಡುತ್ತಿವೆ.

2024ರ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ತಂಡವು ಹೆಚ್ಚಾಗಿ ವಿರಾಟ್‌ಕೊಹ್ಲಿ, ಫಾಫ್‌ ಡುಪ್ಲೆಸಿಸ್‌‍, ಗ್ಲೆನ್‌ಮ್ಯಾಕ್ಸ್ ವೆಲ್‌, ರಜತ್‌ ಪಾಟಿದಾರ್‌ ಅವರನ್ನು ನೆಚ್ಚಿಕೊಂಡಿತ್ತು. ಆದರೆ ಆಸ್ಟ್ರೇಲಿಯಾದ ಸ್ಟಾರ್‌ ಆಟಗಾರ ಮ್ಯಾಕ್‌್ಸವೆಲ್‌ ಹಿಂದಿನ ಎರಡು ಆವೃತ್ತಿಗಳಂತೆ ಸ್ಫೋಟಕ ಬ್ಯಾಟಿಂಗ್‌ ನಡೆಸುವಲ್ಲಿ ಎಡವಿದ್ದು ಮುಂಬರುವ ಆವೃತ್ತಿಗೆ ಅವರನ್ನು ತಂಡದಿಂದ ಹೊರಗಿಡುವ ನಿರ್ಧಾರಕ್ಕೆ ಫ್ರಾಂಚೈಸಿ ಬಂದಿದೆ.

ಕಳೆದ ಆವೃತ್ತಿಯಲ್ಲಿ ಗ್ಲೆನ್‌ ಮ್ಯಾಕ್ಸ್ ವೆಲ್‌ ಆರಂಭಿಕ ಪಂದ್ಯಗಳಿಂದ ಅಲಭ್ಯರಾಗಿದ್ದರು. ನಂತರ ಆಡಿದ 9 ಪಂದ್ಯಗಳಿಂದ 52 ರನ್‌ ಹಾಗೂ 6 ವಿಕೆಟ್‌ ಪಡೆದಿದ್ದರು. ಮಹಾರಾಜ ಕ್ರಿಕೆಟ್‌ ಲೀಗ್‌ನಲ್ಲಿ ಮಿಂಚಿದ್ದರೂ ಕೂಡ ಮುಂದಿನ ಆವೃತ್ತಿಯಲ್ಲಿ ಮ್ಯಾಕ್ಸ್ ವೆಲ್‌ ಆರ್‌ಸಿಬಿಯಲ್ಲಿ ಉಳಿಯುವುದು ಅನುಮಾನ.

ಇನ್ನು ಕಳೆದೆರಡು ಆವೃತ್ತಿಗಳಿಂದ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿರುವ ಫಾಫ್‌ಡುಪ್ಲೆಸಿಸ್‌‍ಗೆ ಈಗ 40 ವರ್ಷವಾಗಿದ್ದು , ಅವರನ್ನು ಕೈಬಿಡಲು ಫ್ರಾಂಚೈಸಿ ಮುಂದಾಗಿದ್ದು, ಈಗಾಗಲೇ ತಂಡಕ್ಕೆ ಸೂಕ್ತ ನಾಯಕ ಹಾಗೂ ಆರಂಭಿಕ ಆಟಗಾರನ ಹುಡುಕಾಟಕ್ಕೆ ಮುಂದಾಗಿದೆ.

2024ರ ಐಪಿಎಲ್‌ ಟೂರ್ನಿಯಲ್ಲಿ ಡುಪ್ಲೆಸಿಸ್‌‍ 4 ಅರ್ಧಶತಕಗಳ ನೆರವಿನಿಂದ 438 ರನ್‌ ಗಳಿಸಿ ವಿರಾಟ್‌ ಕೊಹ್ಲಿ ನಂತರ ಎರಡನೇ ಗರಿಷ್ಠ ಆಟಗಾರರಾಗಿದ್ದರು. ಆದರೆ ಈಗ ಅವರು ದಕ್ಷಿಣ ಆಫ್ರಿಕಾ ಪರ ಆಡದಿರುವುದು ಹಾಗೂ ವಯಸ್ಸಿನ ಅಂತರದಿಂದಾಗಿ ಅವರನ್ನು ಆರ್‌ಸಿಬಿ ಫ್ರಾಂಚೈಸಿ ತಂಡದಲ್ಲಿ ಉಳಿಸಿಕೊಳ್ಳದೆ ಹೋಗಬಹುದು.

ಇನ್ನು ಆರ್‌ಸಿಬಿ ತಂಡದ ಯುವ ಆಟಗಾರ ಮಹಿಪಾಲ್‌ ಲೊಮ್ರರ್‌ ಅವರು ಕಳೆದೆರಡು ಆವೃತ್ತಿಗಳಲ್ಲಿ ತಲಾ 10 ಪಂದ್ಯಗಳನ್ನು ಆಡಿದ್ದು ಕ್ರಮವಾಗಿ 135 ಹಾಗೂ 125 ರನ್‌ ಗಳಿಸಿದ್ದಾರೆ. ಆದರೆ ಮಧ್ಯಮ ಕ್ರಮಾಂಕವನ್ನು ಮತ್ತಷ್ಟು ಬಲಿಷ್ಠಗೊಳಿಸಿಕೊಂಡು ಚೊಚ್ಚಲ ಟ್ರೋಫಿ ಗೆಲ್ಲುವ ಲೆಕ್ಕಾಚಾರದಲ್ಲಿರುವ ಆರ್‌ಸಿಬಿ ಫ್ರಾಂಚೈಸಿ ಲೊಮ್ರರ್‌ ಬದಲಿಗೆ ಮತ್ತೊಬ್ಬ ಯುವ ಸ್ಫೋಟಕ ಆಟಗಾರನ ಖರೀದಿಗೆ ಒಲವು ತೋರಿದೆ.

RELATED ARTICLES

Latest News