ಬೆಂಗಳೂರು, ಅ.26- ಚಳಿಗಾಲ ದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದ್ದ ಮಂಜು ಕವಿಯುವ ವಾತಾವರಣ ಅಕ್ಟೋಬರ್‍ನಲ್ಲೇ ಕೆಲವೆಡೆ ಗೋಚರಿಸುತ್ತಿದೆ. ರಾಜ್ಯದ ಹಲವೆಡೆ ಬೆಳಗಿನ ಜಾವ ಮಂಜು ಮುಸುಕಿದ ವಾತಾ ವರಣವಿದ್ದು, ಮಳೆ ಬರುವ ಸಾಧ್ಯತೆ ತೀರಾ ವಿರಳ. ಹವಾಮಾನದಲ್ಲಿ ಉಂಟಾಗಿರುವ ಬದಲಾವಣೆಯ ಪರಿಣಾಮದಿಂದ ಹಿಂಗಾರು ಮಳೆ ಆರಂಭವಾಗಬೇಕಿದ್ದ ಸಂದರ್ಭ ದಲ್ಲೇ ಮಂಜು ಮುಸುಕಿದ ವಾತಾವರಣವಿದೆ.
ಹಿಂಗಾರು ಮಳೆಗಾಲ ಮುಗಿದು ತೀವ್ರ ಚಳಿಯಿದ್ದ ಸಮಯದಲ್ಲಿ ಬೆಳಗಿನ ಜಾವ ಮಂಜು ಕವಿಯು ವುದು ಸಹಜ. ಕೆಲವೆಡೆ ದಟ್ಟ ಮಂಜು ಆವರಿಸುವುದು ಉಂಟು. ಅಕ್ಟೋಬರ್ ಮೊದಲ ವಾರದಲ್ಲಿ ಆರಂಭವಾಗಬೇಕಿದ್ದ ಹಿಂಗಾರು ಎರಡು ವಾರಗಳಷ್ಟು ವಿಳಂಬವಾಗಿದೆ. ಮುಂಗಾರಿನ ನಿರ್ಗಮನವು ಕೂಡ ವಿಳಂಬ ವಾಗಿದೆ. ಹಿಂಗಾರು ಆರಂಭವಾಗಿ ವಾರ ಕಳೆದರೂ ಎಲ್ಲೂ ಕೂಡ ವಾಡಿಕೆ ಪ್ರಮಾಣದ ಮಳೆಯಾಗುತ್ತಿಲ್ಲ. ಒಣ ಹವೆ ಇದ್ದು ಹಗಲಿನ ವೇಳೆ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದೆ.
“ಬಿಜೆಪಿ ನಾಯಕರಿಗೆ ಮಾಡೋಕೆ ಕೆಲಸ ಇಲ್ಲ, ಬಾಯಿ ಚಟಕ್ಕೆ ಮಾತಾಡ್ತಾರೆ”
ರಾತ್ರಿ ವೇಳೆ ತಂಪಾದ ವಾತಾ ವರಣ ಕಂಡುಬರುತ್ತದೆ. ಅ.1ರಿಂದ ನಿನ್ನೆಯವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇ.64ರಷ್ಟು ಕಡಿಮೆ ಮಳೆಯಾಗಿದೆ. ಅಂದರೆ ಬಹುತೇಕ ಒಣಹವೆಯೇ ಮುಂದುವರೆದಿದೆ.
ಜುಲೈ ಹೊರತುಪಡಿಸಿದರೆ ಆನಂತರದ ಮೂರು ತಿಂಗಳು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಮುಂದಿನ ಒಂದು ವಾರದಲ್ಲಿ ಉತ್ತಮ ಮಳೆಯಾಗುವ ಲಕ್ಷಣಗಳು ಇಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಅಕ್ಟೋಬರ್ ಕೊನೆಯ ವಾರದಲ್ಲಿ ಬೆಳಗಿನ ಜಾವ ಕೆಲವೆಡೆ ಮಂಜು ಕವಿಯುವುದು, ಇಬ್ಬನಿ ಬೀಳುವುದು ಸಾಮಾನ್ಯ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.
ಬೆಂಕಿ ಹಚ್ಚಿ ಹೆತ್ತ ತಾಯಿಯನ್ನೇ ಕೊಂದ ಮಗ
ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಅಕ್ಟೋಬರ್ ನಲ್ಲೇ ಮಂಜು ಕವಿಯುವುದು ಸರ್ವೆ ಸಾಮಾನ್ಯ. ಮಂಜು ಕವಿಯು ವುದರಿಂದ ತಂಪಾದ ವಾತಾವರಣ ಬೆಳಗಿನ ಜಾವ ಕಂಡುಬರುತ್ತದೆ. ಡಿಸೆಂಬರ್ ಅಂತ್ಯದವರೆಗೂ ಆಗಾಗ್ಗೆ ಕೆಲವೆಡೆ ಮಂಜು ಕವಿಯು ವುದು ಕಂಡುಬರಲಿದೆ ಎಂದು ಹೇಳಿದರು.
ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಸದ್ಯಕ್ಕೆ ಮಳೆ ಬರುವಂತಹ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಮಂಜು ಕವಿಯುವ ಸಂದರ್ಭದಲ್ಲಿ ಮಳೆ ಬರುವ ಸಾಧ್ಯತೆಗಳು ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.