Thursday, April 16, 2026
Homeರಾಷ್ಟ್ರೀಯತಮಿಳುನಾಡು ಮಾಜಿ ಸಿಎಂ ಎಂಜಿಆರ್‌ಗೆ ಪ್ರಧಾನಿ ಮೋದಿ ನಮನ

ತಮಿಳುನಾಡು ಮಾಜಿ ಸಿಎಂ ಎಂಜಿಆರ್‌ಗೆ ಪ್ರಧಾನಿ ಮೋದಿ ನಮನ

PM Modi pays tribute to former Tamil Nadu CM MGR

ನವದೆಹಲಿ, ಜ. 17 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್‌ (ಎಂಜಿಆರ್‌)ಗೆ ಗೌರವ ಸಲ್ಲಿಸಿದ್ದಾರೆ. ತಮಿಳುನಾಡಿನ ಖ್ಯಾತ ನಟ ಮತ್ತು ಎಐಎಡಿಎಂಕೆ ಸಂಸ್ಥಾಪಕ ಎಂ ಜಿ ರಾಮಚಂದ್ರನ್‌ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಮೋದಿ ಗೌರವ ಸಲ್ಲಿಸಿದರು.

ಅಸಾಧಾರಣ ವ್ಯಕ್ತಿ ಎಂಜಿಆರ್‌ ಅವರ ಜಯಂತಿಯಂದು ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ. ತಮಿಳುನಾಡಿನ ಪ್ರಗತಿಗೆ ಅವರ ಕೊಡುಗೆ ಅತ್ಯುತ್ತಮವಾಗಿದೆ ಎಂದು ಮೋದಿ ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ್ದಾರೆ.

ತಮಿಳು ಸಂಸ್ಕೃತಿಯನ್ನು ಜನಪ್ರಿಯಗೊಳಿಸುವಲ್ಲಿ ಅವರ ಪಾತ್ರವೂ ಅಷ್ಟೇ ಗಮನಾರ್ಹವಾಗಿದೆ. ನಮ್ಮ ಸಮಾಜಕ್ಕಾಗಿ ಅವರ ದೃಷ್ಟಿಕೋನವನ್ನು ಸಾಕಾರಗೊಳಿಸಲು ನಾವು ಯಾವಾಗಲೂ ಕೆಲಸ ಮಾಡುತ್ತೇವೆ ಎಂದು ಪ್ರಧಾನಿ ಹೇಳಿದರು.

1917 ರಲ್ಲಿ ಜನಿಸಿದ ಎಂಜಿಆರ್‌ ಎಂದು ಜನಪ್ರಿಯವಾಗಿ ಕರೆಯಲ್ಪಡುವ ರಾಮಚಂದ್ರನ್‌‍, ಶಾಲಾ ಹಾಜರಾತಿ ಮತ್ತು ದಾಖಲಾತಿಯನ್ನು ಸುಧಾರಿಸಿದ ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಕಾರ್ಯಕ್ರಮವನ್ನು ಅಪ್‌ಗ್ರೇಡ್‌‍ ಮಾಡಿದ್ದಕ್ಕಾಗಿ ತಮಿಳುನಾಡು ಜನತೆಯ ಆರಾಧ್ಯ ದೈವವಾಗಿ ಗುರುತಿಸಿಕೊಂಡಿದ್ದಾರೆ.

RELATED ARTICLES

Latest News