ತುಮಕೂರು,ಅ.29- ಖತರ್ನಾಕ್ ದ್ವಿಚಕ್ರ ವಾಹನ ಕಳ್ಳನನ್ನು ಬಂಧಿಸಿರುವ ಕ್ಯಾತಸಂದ್ರ ಠಾಣೆ ಪೊಲೀಸರು ಆರೋಪಿಯಿಂದ 21.60 ಲಕ್ಷ ಮೌಲ್ಯದ 42 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮೂಲದ ಮುಬಾರಕ್ ಖಾನ್ ಅಲಿಯಾಸ್ ಮಟನ್ ಮುಬಾರಕ್ (53) ಬಂಧಿತ ಬೈಕ್ ಕಳ್ಳ.
ಕಳೆದ ಅ.16 ರಂದು ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣದ ಜಾಡು ಹಿಡಿದ ಪೊಲೀಸರು ಆರೋಪಿಯನ್ನು ಬಂಧಿಸಿ ಸುಮಾರು 42 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನ ವಿರುದ್ಧ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ 2, ತುಮಕೂರು ನಗರ ಠಾಣೆಯಲ್ಲಿ 3, ಶ್ರೀನಿವಾಸಪುರ ಠಾಣೆಯಲ್ಲಿ 2, ಆಂಧ್ರಪ್ರದೇಶದ ಕುಪ್ಪಂ ಠಾಣೆಯಲ್ಲಿ 1, ರಾಬರ್ಟ್ಸನ್ ಠಾಣೆಯಲ್ಲಿ 1, ಯಲಹಂಕ 1, ಬಾಗೆಪಲ್ಲಿ 1, ಪಾವಗಡ 1, ದೊಡ್ಡಬಳ್ಳಾಪುರ 1, ನೆಲಮಂಗಲ 1, ಬೆಂಗಳೂರು ರೈಲ್ವೆ ಠಾಣೆ 1 ಪ್ರಕರಣಗಳು ಸೇರಿ ಒಟ್ಟು 15 ಪ್ರಕರಣಗಳು ದಾಖಲಾಗಿವೆ.
ಪ್ರಕರಣದಲ್ಲಿ ದಾಖಲಾಗದೇ ಇರುವ 27 ದ್ವಿಚಕ್ರ ವಾಹನಗಳು ಸಹ ಈತನ ಬಳಿ ಪತ್ತೆಯಾಗಿವೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕ್ಯಾತಸಂದ್ರ ಠಾಣೆ ಪೊಲೀಸರು ಹೆಚ್ಚುವರಿ ಪೊಲೀಸ್ಅರಕ್ಷಕ ವಿ.ಮರಿಯಪ್ಪ ಮತ್ತು ಅಬ್ದುಲ್ ಖಾದರ್ ಅವರ ಮಾರ್ಗದರ್ಶನದಲ್ಲಿ ತುಮಕೂರು ಉಪವಿಭಾಗದ ಡಿವೈಎಸ್ಪಿ ಚಂದ್ರಶೇಖರ್, ಕ್ಯಾತಸಂದ್ರ ಠಾಣೆಯ ಸಿಪಿಐ ರಾಮ್‌ಪ್ರಸಾದ್, ಎಸ್‌ಐ ಚೇತನ್‌ಕುಮಾರ್ ಹಾಗೂ ಸಿಬ್ಬಂದಿಗಳಾದ ರಮೇಶ್, ಸೌಭಾಗ್ಯಮ್ಮ, ಹನುಮರಂಗಯ್ಯ, ಶಶಿಧರ್, ಮಹೇಶ್, ಗಿರೀಶ್, ಶರಣಪ್ಪ, ಸಂತೋಷ್ ಇವರನ್ನೊಳಗೊಂಡ ತಂಡ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ.ಅಭಿನಂದಿಸಿದ್ದಾರೆ.