ಗುರುಗ್ರಾಮ್,ನ.4- ಭೀಮ್ ಸೇನಾ ಮುಖ್ಯಸ್ಥ ಸತ್ಪಾಲ್ ತನ್ವಾರ್‌ಗೆ ವಿದೇಶದಿಂದ ಬೆದರಿಕೆ ಹಾಕಿದ ಆರೋಪದ ಮೇಲೆ ಲಾರೆನ್‌್ಸ ಬಿಷ್ಣೋಯ್ ಅವರ ಸಹೋದರ ಅನೋಲ್ ಬಿಷ್ಣೋಯ್ ವಿರುದ್ಧ ಗುರುಗ್ರಾಮ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜಿಂಬಾಬ್ವೆ ಮತ್ತು ಕೀನ್ಯಾದ ಸಂಖ್ಯೆಗಳನ್ನು ಬಳಸಿಕೊಂಡು ಯುಎಸ್ ಮತ್ತು ಕೆನಡಾದಿಂದ ಬೆದರಿಕೆ ಕರೆಗಳನ್ನು ಮಾಡಿದ ಆರೋಪ ಅನೋಲ್ ಮೇಲಿದೆ.
ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಗಾಗಿ ಎಸ್‌ಟಿಎಫ್ ಮತ್ತು ಹಲವಾರು ಅಪರಾಧ ಮತ್ತು ಸೈಬರ್ ಕ್ರೈಂ ಘಟಕಗಳ ಸದಸ್ಯರ ತಂಡವನ್ನು ರಚಿಸಿದ್ದಾರೆ. ಅನೋಲ್ ಬಿಷ್ಣೋಯಿ ಅವರನ್ನು ಭಾರತಕ್ಕೆ ಕರೆತರಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭೀಮ್ ಸೇನಾ ಮುಖ್ಯಸ್ಥ ಸತ್ಪಾಲ್ ತನ್ವಾರ್ ಅವರಿಗೆ ಅಕ್ಟೋಬರ್ 30 ರಂದು ಅನೋಲ್ ಬಿಷ್ಣೋಯ್ ಅವರು ತುಂಡು ತುಂಡುಗಳನ್ನಾಗಿ ಕತ್ತರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು.
ತನ್ವಾರ್ ಅಪ್ತ ಕಾರ್ಯದರ್ಶಿ ಮೊಬೈಲ್‌ಗೆ ಕರೆ ಮಾಡಿದ ದುಷ್ಕರ್ಮಿಗಳು 6 ನಿಮಿಷ ಮಾತನಾಡಿದರು ಹಾಗೂ ಕೊಲೆ ಬೆದರಿಕೆ ಹಾಕಿದರು ಎಂದು ಅವರು ದೂರು ನೀಡಿದ್ದಾರೆ. ಶನಿವಾರ ಸೆಕ್ಟರ್ 37 ಪೊಲೀಸ್ ಠಾಣೆಯಲ್ಲಿ ಅನೋಲ್ ಬಿಷ್ಣೋಯ್ ವಿರುದ್ಧ ಪೊಲೀಸರು ಬಿಎನ್‌ಎಸ್‌ನ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅನೋಲ್ ಬಿಷ್ಣೋಯ್ ಅಮೇರಿಕಾದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿದ್ದು, ಆತನನ್ನು ಸೆರೆಹಿಡಿಯುವ ಮಾಹಿತಿಯ ಮೇಲೆ 10 ಲಕ್ಷ ಬಹುಮಾನ ಘೋಷಿಸಲಾಗಿದೆ.